50 ಸಾವಿರ ಲಂಚ ಸ್ವೀಕಾರ – ಭಟ್ಕಳ ಪುರಸಭಾ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ

Public TV
1 Min Read
Bhatkal Municipal Office Lokayukta Raid

ಕಾರವಾರ: ಲಂಚ ಸ್ವೀಕರಿಸುತ್ತಿದ್ದ ವೇಳೆ ಭಟ್ಕಳ ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೇಸ್ತಾ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಮೊಹ್ಮದ ಇದ್ರಿಸ್ ಮೋಹತೇಷಾಮ್ ಎನ್ನುವವರು ನೀಡಿದ ದೂರಿನ ಆಧಾರದ ಮೇಲೆ ಶುಕ್ರವಾರ ಕಾರವಾರ ಲೋಕಾಯುಕ್ತ ಎಸ್ಪಿ ಕುಮಾರ ಚಂದ್ರ ಹಾಗೂ ಪ್ರಭಾರಿ ಲೋಕಾಯುಕ್ತ ಡಿವೈಎಸ್ಪಿ ವಿನಾಯಕ ಬಿಲ್ಲವ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.

ಒಳಚರಂಡಿಗೆ ಯೋಜನೆ ಕಾಮಗಾರಿ ಸಂಬಂಧ ಲಂಚ ಸ್ವೀಕರಿಸುತ್ತಿದ್ದರು. ದೂರುದಾರ ನೀಡಿದ ಹೇಳಿಕೆ ಪ್ರಕಾರ, ನೀಲಕಂಠ ಮೇಸ್ತಾ ಒಳಚರಂಡಿ ಜೋಡಣೆಗೆ 3 ಲಕ್ಷ ಲಂಚ ಕೇಳಿದ್ದರು. ಈಗಾಗಲೇ 2 ಲಕ್ಷ ಹಣವನ್ನು ನೀಡಿದ್ದರು. ಶುಕ್ರವಾರ 50 ಸಾವಿರ ಹಣ ನೀಡಿದ್ದೇನೆ. ಇನ್ನು 50 ಸಾವಿರ ಕೊಡುವುದು ಬಾಕಿ ಇತ್ತು ಎಂದು ತಿಳಿಸಿದ್ದಾರೆ.

ದಾಳಿಯಲ್ಲಿ ಪ್ರಸಾದ ಪನ್ನೆಕರ ಹಾಗೂ 20 ಜನ ಪಿ.ಐ ಸಿಬ್ಬಂದಿ ಭಾಗಿಯಾಗಿದ್ದರು.

Share This Article