ಭೋಪಾಲ್: ಮಧ್ಯ ಪ್ರದೇಶದ ಇಂದೋರ್ ನ ನಗರ ಸಭೆಯ ನೌಕರನೊಬ್ಬನ ಮನೆಯ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಅಧಿಕಾರಿಗಳಿಗೆ ಕೋಟ್ಯಾಂತರ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ದೊರೆತಿದೆ ಎಂದು ಸ್ಥಳೀಯ ಪತ್ರಿಕೆಗಳು ಪ್ರಕಟಿಸಿವೆ.
ಇಂದೋರ್ ನಗರ ಸಭೆಯಲ್ಲಿ ಕಾರ್ಯನಿರ್ವಹಿಸುವ ಗುಮಾಸ್ತ ಅಸ್ಲಂ ಖಾನ್ ಎಂಬಾತನ ಐದು ಮನೆಗಳ ಮೇಲೆ ಲೋಕಾಯುಕ್ತ ಪೊಲೀಸರು ಇಂದು ಏಕಕಾಲದಲ್ಲಿ ದಾಳಿ ನಡೆಸಿದ್ದಾರು. ಮನೆಯಲ್ಲಿ ದೊರೆತ ಚಿನ್ನಾಭರಣ ನೋಡಿ ಅಧಿಕಾರಿಗಳು ಆಶ್ಚರ್ಯ ಚಕಿತರಾಗಿದ್ದರಂತೆ. ತಿಂಗಳಿಗೆ 18 ಸಾವಿರ ಸಂಬಳ ಪಡೆಯುವ ಅಸ್ಲಂ ಖಾನ್ ಮನೆಯಲ್ಲಿ ಕೋಟ್ಯಾಂತರ ಮೌಲ್ಯದ ಚಿನ್ನಾಭರಣ ಪತ್ತೆಯಾಗಿದ್ದು, ನಿಖರ ಬೆಲೆ ತಿಳಿದು ಬಂದಿಲ್ಲ.
Advertisement
Madhya Pradesh: Indore Lokayukta police conducts raids at 5 locations of a municipal corporation employee Aslam Khan, cash and jewellery worth crores seized. pic.twitter.com/DAyJGyXp0S
— ANI (@ANI) August 6, 2018
Advertisement
ಕಳೆದ ಹಲವು ದಿನಗಳಿಂದ ಅಸ್ಲಂ ಖಾನ್ ಮೇಲೆ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿದ್ದವು. ಈ ಸಂಬಂಧ ಒಂದು ಬಾರಿ ಅಸ್ಲಂ ಖಾನ್‍ನನ್ನು ಅಮಾನತು ಮಾಡಲಾಗಿತ್ತು. ತನ್ನ ಪ್ರಭಾವ ಬಳಸಿ ಕೆಲವೇ ದಿನಗಳಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದನು. ಇಂದೋರ್ ನಗರದಲ್ಲಿ ನಗರಸಭೆಗೆ ಸಂಬಂಧಿಸಿದ ಕೆಲಸಗಳು ಆಗಬೇಕಾದ್ರೆ ಅಸ್ಲಂ ಖಾನ್‍ನನ್ನು ಜನರು ಸಂಪರ್ಕಿಸುತ್ತಿದ್ದರು. ಹಿರಿಯ ಅಧಿಕಾರಿಗಳ ಸಹಿ ಇರಲಿ, ಮನೆ ಪತ್ರ ಸೇರಿದಂತೆ ಚಿಕ್ಕಪುಟ್ಟ ಕೆಲಸಗಳಿಗೂ ಜನರಿಂದ ಹಣ ಪಡೆದುಕೊಳ್ಳುತ್ತಿದ್ದ ಎಂದು ಹೇಳಲಾಗುತ್ತಿದೆ.
Advertisement
ಅಧಿಕಾರಿಗಳು ಐದು ಮನೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಆಸ್ತಿಗೆ ಸಂಬಂಧಿಸಿದ ಮಾಹಿತಿಗಳು ಅಧಿಕಾರಿಗಳು ಮನೆಯ ಸದಸ್ಯರು ಮತ್ತು ಅಸ್ಲಂ ಖಾನ್‍ನಿಂದ ಪಡೆದುಕೊಳ್ಳುತ್ತಿದ್ದಾರೆ.