ಕಲಬುರಗಿ: ಲೋಕೋಪಯೋಗಿ ಮುಖ್ಯ ಎಂಜಿನಿಯರ್ ಮನೆ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳಿಗೆ ಅಪಾರ ಪ್ರಮಾಣದ ಆಸ್ತಿ ಪತ್ತೆಯಾಗಿದೆ. ಕೀ ಸಿಗದೇ ಲಾಕರ್‌ಗಳನ್ನು ಒಡೆದು ಅಧಿಕಾರಿಗಳು ಓಪನ್ ಮಾಡಿದ ಪ್ರಸಂಗ ನಡೆಯಿತು.
ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಗುರುವಾರ ರಾಜ್ಯ ಹೆದ್ದಾರಿ ಅಭಿವೃದ್ಧಿ ಇಲಾಖೆ ಮುಖ್ಯ ಯೋಜನಾಧಿಕಾರಿ ಜಗನ್ನಾಥ್ ಹಲಿಂಗೆ ಅವರ ಮನೆ ಹಾಗೂ ಹಲವು ಕಡೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಕಲಬುರಗಿಯ ಎನ್‌ಜಿಒ ಕಾಲೊನಿ ಮನೆ ಸೇರಿ ಒಟ್ಟು 6 ಲೋಕಾ ಮೇಲೆ ದಾಳಿ ಮಾಡಿದೆ. ಬೆಂಗಳೂರು ಮನೆ, ಬೀದರ್‌ನ ಮನೆ ಹಾಗೂ ದನ್ನುರ್ ಕೆ.ಫಾರ್ಮ್ ಹೌಸ್ ಸೇರಿ 6 ಕಡೆ ಲೋಕಾ ಎಸ್‌ಪಿ ಉಮೇಶ್, ಡಿವೈಎಸ್ಪಿ ಗೀತಾ ಬೆನಾಳ್ ನೇತೃತ್ವದಲ್ಲಿ ದಾಳಿ ನಡೆದಿದೆ.
ಎರಡು ಕೆಜಿಗೂ ಅಧಿಕ ಬೆಳ್ಳಿ ಪತ್ತೆಯಾಗಿದೆ. ಕೀ ಇಲ್ಲದ ಹಿನ್ನೆಲೆ ಲಾಕರ್‌ಗಳನ್ನು ಅಧಿಕಾರಿಗಳು ಒಡೆದು ಓಪನ್ ಮಾಡಿದರು. ಕಲಬುರಗಿ ಜಿಲ್ಲೆಯ ಆಳಂದದಲ್ಲಿ 30 ಎಕರೆ ಜಮೀನು ಕೂಡ ಪತ್ತೆಯಾಗಿದೆ. ಕಲಬುರಗಿ ಹೊರವಲಯದ ತಾವರಗೆರೆಯಲ್ಲಿ ಕೂಡ ಜಮೀನು ಇದೆ. ಬೀದರ್ ಮತ್ತು ಬಸವಕಲ್ಯಾಣದಲ್ಲಿ ಕೂಡ ಅಪಾರ ಪ್ರಮಾಣ ಆಸ್ತಿ, ದಾಖಲೆ ಪತ್ರಗಳು ಅಧಿಕಾರಿಗಳಿಗೆ ಸಿಕ್ಕಿವೆ. ಎಲ್ಲಾ ಆಸ್ತಿ ದಾಖಲೆಗಳು ಸ್ವಯಾರ್ಜಿತ ಹೊರತು ಪಿತ್ರಾರ್ಜಿತ ಆಸ್ತಿ ಅಲ್ಲ ಅನ್ನೋದು ಗೊತ್ತಾಗಿದೆ.
ದಾಳಿ ವೇಳೆ ಅಪಾರ ಪ್ರಮಾಣದ ಚಿನ್ನ, ಬೆಳ್ಳಿ ಸಿಕ್ಕಿದೆ. ಮನೆಯಲ್ಲಿನ ಲಾಕರ್ ಒಡೆದಾಗ ಗೋಲ್ಡ್ ಕಾಯಿನ್‌ಗಳು ಸಹ ಪತ್ತೆಯಾಗಿವೆ. ಹೀಗಾಗಿ, ಇದೀಗ ಅಕ್ಕಸಾಲಿಗನನ್ನು ಕರೆಸಲು ಲೋಕಾಯುಕ್ತ ಮುಂದಾಗಿದೆ. ಡೈಮಂಡ್ ರಿಂಗ್ ಸೇರಿ ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದೆ.