ಚಾರ್ಜ್‌ಶೀಟ್‍ನಿಂದ ಹೆಸರು ತೆಗೆಯಲು ಲಂಚ – ಎಎಸ್‍ಐ `ಲೋಕಾ’ ಬಲೆಗೆ

Public TV
1 Min Read
lokayukta cops trap asi for soliciting bribe in Davanagere

ದಾವಣಗೆರೆ: ಇಲ್ಲಿನ (Davanagere) ಕೆಟಿಜೆ ನಗರ ಪೊಲೀಸ್ ಠಾಣೆಯ ಎಎಸ್‍ಐ ಲಂಚ (Bribe) ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ (Lokayukta) ಬಲೆಗೆ ಬಿದ್ದಿದ್ದಾರೆ.

ಚಾರ್ಜ್‌ಶೀಟ್‍ನಿಂದ ಹೆಸರು ತೆಗೆಯಲು ಎಎಸ್‍ಐ ಈರಣ್ಣ, ಸರಸ್ವತಿ ನಗರದ ಮಣಿಕಂಠ ಆಚಾರ್ಯ ಎಂಬವರಿಗೆ 1 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಇದರಂತೆ 50 ಸಾವಿರ ರೂ. ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

ಮಣಿಕಂಠ ಅವರ ತಾಯಿ ಮತ್ತು ಪತ್ನಿ ನಡುವೆ ಜಗಳವಾಗಿ ಎಫ್‍ಐಆರ್ ಆಗಿತ್ತು. ಚಾರ್ಜ್‌ಶೀಟ್‍ನಲ್ಲಿ ಇಬ್ಬರ ಹೆಸರನ್ನು ಕೈ ಬಿಡಲು ಎಎಸ್‍ಐ 1 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ ಪೊಲೀಸ್ ಠಾಣೆಯ ಹೊರಗಡೆ ಲಂಚ ಸ್ವೀಕರಿಸುವಾಗ ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎಸ್ ಕೌಲಾಪುರೆ ನೇತೃತ್ವದಲ್ಲಿ ಡಿಎಸ್‍ಪಿ ಕಲಾವತಿ ಇನ್ಸ್‌ಪೆಕ್ಟರ್‌ ಮಧುಸೂದನ್ ಹಾಗೂ ಪ್ರಭು ದಾಳಿಯಲ್ಲಿ ಭಾಗಿಯಾಗಿದ್ದರು.

Share This Article