-ಮೋದಿ ಪರ ಪ್ರಚಾರಕ್ಕೆ ಈಶ್ವರಪ್ಪರನ್ನು ಬಿಟ್ಟಿದ್ದೇವೆ
-ಚಾಮರಾಜನಗರದಲ್ಲಿ ಕುಖ್ಯಾತ-ಪ್ರಖ್ಯಾತ ಅಭ್ಯರ್ಥಿಗಳ ನಡುವೆ ಸ್ಪರ್ಧೆ
ಚಾಮರಾಜನಗರ: ಮೋದಿ (Narendra Modi) ಇಡೀ ದೇಶದ ಪ್ರಧಾನಿ, ಕಾಂಗ್ರೆಸ್ ಕೂಡ ಬೇಕಾದ್ರೆ ಮೋದಿ ಫೋಟೊ ಬಳಸಿಕೊಂಡು ಚುನಾವಣೆ (Lok Sabha Elections 2024) ಪ್ರಚಾರ ಮಾಡಲಿ ಎಂದು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ (Radha Mohan Das Agrawal) ಹೇಳಿದ್ದಾರೆ.
Advertisement
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಹಾಗೂ ಬಿಜೆಪಿ ಬಂಡಾಯ ಅಭ್ಯರ್ಥಿ ಈಶ್ವರಪ್ಪ (K.S Eshwarappa) ಚುನಾವಣಾ ಪ್ರಚಾರಕ್ಕೆ ಮೋದಿ ಫೋಟೊ ಬಳಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಈ ವೇಳೆ, ಈಶ್ವರಪ್ಪನವರಿಗೆ ಈಗ ಬುದ್ಧಿ ಬಂದಿದೆ. ಅವರನ್ನು ಮೋದಿ ಹಾಗೂ ಬಿಜೆಪಿ ಪರ ಪ್ರಚಾರ ಮಾಡಲು ಬಿಟ್ಟಿದ್ದೇವೆ, ಮಾಡಿಕೊಳ್ಳಲಿ. ಇದರಿಂದ ಶಿವಮೊಗ್ಗದಲ್ಲಿ ಬಿ.ವೈ ರಾಘವೇಂದ್ರ ಹೆಚ್ಚಿನ ಅಂತರದಲ್ಲಿ ಗೆಲ್ಲುತ್ತಾರೆ ಎಂದಿದ್ದಾರೆ. ಇದನ್ನೂ ಓದಿ: ಸರ್ಕಾರ ಎಲ್ಲಾ ಪ್ರಜೆಗಳನ್ನು ಸಮಾನವಾಗಿ ಕಾಣಬೇಕು: ಪೇಜಾವರ ಶ್ರೀ
Advertisement
ಕಾಂಗ್ರೆಸ್ ರಾಹುಲ್ ಗಾಂಧಿ ಫೋಟೊ ಬಳಸಿದ್ರೆ ಬೇಲ್ ಕೂಡ ಸಿಗಲ್ಲ, ಬೇಲ್ ಸಿಕ್ಕಿದರೂ ರದ್ದಾಗುತ್ತದೆ. ದೇವರು ಎಲ್ಲರಿಗೂ ಒಂದೇ. ದೇವರು ಒಂದೇ ಪಾರ್ಟಿಗೆ ಸೀಮಿತ ಅಲ್ಲ ಎಂದು ಮೋದಿಯವರನ್ನು ಅವರು ದೇವರಿಗೆ ಹೋಲಿಸಿದ್ದಾರೆ. ಭಾರತದ 140 ಕೋಟಿ ಜನ ಮೋದಿ ಮೇಲೆ ಅಪಾರವಾದ ಗೌರವ ಇಟ್ಟುಕೊಂಡಿದ್ದಾರೆ. ಅರ್ಧಕ್ಕೂ ಹೆಚ್ಚು ಜನ ಕಾಂಗ್ರೆಸ್ ಕಾರ್ಯಕರ್ತರು ಮೋದಿಗೆ ಮತ ಹಾಕ್ತಾರೆ. ಸದ್ಯ ಅವರು ಓಡಾಡ್ತಿರೋದು ಕಾಂಗ್ರೆಸ್ ಜೊತೆಗೆ ಮಾತ್ರ ಎಂದಿದ್ದಾರೆ.
Advertisement
Advertisement
ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಕುಖ್ಯಾತ ಹಾಗೂ ಪ್ರಖ್ಯಾತ ಇಬ್ಬರು ಅಭ್ಯರ್ಥಿಗಳ ನಡುವೆ ಸ್ಪರ್ಧೆ ಇದೆ. ಕುಖ್ಯಾತ ಅಭ್ಯರ್ಥಿ ಯಾರೆಂದು ಜನರಿಗೆ ಗೊತ್ತಿದೆ ಎಂದು ಸುನೀಲ್ ಬೋಸ್‍ಗೆ ಪರೋಕ್ಷವಾಗಿ ಕುಟುಕಿದ್ದಾರೆ. ಇದು ಬಿಜೆಪಿಯ ಭದ್ರಕೋಟೆಯಾಗಿದ್ದು, ಅತಿ ಹೆಚ್ಚಿನ ಅಂತರದಲ್ಲಿ ನಮ್ಮ ಬಿಜೆಪಿ ಅಭ್ಯರ್ಥಿ 4 ರಿಂದ 4.5 ಲಕ್ಷ ಲೀಡ್‍ನಿಂದ ಗೆದ್ದೆ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಾಧುಸ್ವಾಮಿ ಭಿನ್ನಮತೀಯರು ಎಂಬುದು ನನಗೆ ಗೊತ್ತಿಲ್ಲ. ಅವರ ಎಲ್ಲಾ ಟೀಂ ನಮ್ಮೊಂದಿಗಿದೆ. ಈಶ್ವರಪ್ಪ ಅವರನ್ನು ಕೂಡ ನಾನು ಭಿನ್ನಮತೀಯ ಅಂದುಕೊಳ್ಳಲ್ಲ. ಈಶ್ವರಪ್ಪ ನಾಮಪತ್ರ ಸಲ್ಲಿಸುವ ದಿನ ಬರಲಿ ಆಗ ನೋಡಿಕೊಳ್ಳೋಣ. ನಾಮಪತ್ರ ಸಲ್ಲಿಸಿ ವಾಪಸ್ ತೆಗೆದುಕೊಳ್ಳದೆ ಇದ್ರೆ ಭಿನ್ನಮತೀಯ ಎಂದು ಪರಿಗಣಿಸುತ್ತೇವೆ. ಸುಮಲತಾ ಅವರು ಕುಮಾರಸ್ವಾಮಿ ಪರ ಹಾಗೂ ಮೈತ್ರಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ನಿಮ್ಮೆಲ್ಲರ ಮನೆ ಮಗನಂತೆ ಕೆಲಸ ಮಾಡಲು ಸಿದ್ಧ: ಜನತೆಗೆ ಯದುವೀರ್ ಭರವಸೆ