ನವದೆಹಲಿ: ಮಣಿಪುರದ ವಿಚಾರವಾಗಿ ಕೇಂದ್ರ ಸರ್ಕಾರದ (Modi Government) ವಿರುದ್ಧ ವಿಪಕ್ಷಗಳ ಕೂಟ ನಿರೀಕ್ಷೆಯಂತೆ ಅವಿಶ್ವಾಸ ನಿರ್ಣಯದ (No-Confidence Motion) ಅಸ್ತ್ರ ಪ್ರಯೋಗಿಸಿದೆ. ಇಂದು ಬೆಳಗ್ಗೆ ಐಎನ್‌ಡಿಐಎ (INDIA) ಪರವಾಗಿ ಕಾಂಗ್ರೆಸ್ (Congress) ಮತ್ತು ಬಿಆಆರ್‌ಎಸ್ (BRS) ನೀಡಿದ ಅವಿಶ್ವಾಸ ತೀರ್ಮಾನದ ನೋಟಿಸ್ ಲೋಕಸಭೆ ಸ್ಪೀಕರ್ ಓಂ ಬಿರ್ಲಾ (Lok Sabha Speaker Om Birla) ಸಮ್ಮತಿ ಸೂಚಿಸಿದ್ದಾರೆ.
ಈ ಬಗ್ಗೆ ಎಲ್ಲಾ ಪಕ್ಷಗಳ ಜೊತೆ ಚರ್ಚಿಸಿ, ಚರ್ಚೆಗೆ ದಿನಾಂಕ ನಿಗದಿ ಮಾಡುವುದಾಗಿ ಪ್ರಕಟಿಸಿದ್ದಾರೆ. ಮುಂದಿನ 10 ದಿನಗಳಲ್ಲಿ ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ಆಗಲಿದೆ. ಈ ವೇಳೆ ಪ್ರಧಾನಿ ಮೋದಿ (PM Modi) ಉತ್ತರಿಸಲೇಬೇಕಾಗುತ್ತದೆ. ಆಗ ಪ್ರಧಾನಿಗೆ ಪ್ರಶ್ನೆ ಮೇಲೆ ಪ್ರಶ್ನೆ ಕೇಳಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸುವುದು ವಿಪಕ್ಷಗಳ ತಂತ್ರವಾಗಿದೆ.
ಲೋಕಸಭೆಯಲ್ಲಿ ಎನ್‍ಡಿಎ (NDA) ಬಹುಮತ ಹೊಂದಿರುವ ಕಾರಣ ಈ ನಿಲುವಳಿ ಸುಲಭವಾಗಿ ಬಿದ್ದು ಹೋಗಲಿದೆ. ಅಗತ್ಯ ಸಂಖ್ಯಾಬಲ ಇಲ್ಲದಿದ್ದರೂ ಕಾಂಗ್ರೆಸ್‍ನ ಅವಿಶ್ವಾಸ ನಿಲುವಳಿ ಮಂಡಿಸಿರುವುದನ್ನು ಬಿಎಸ್‍ಪಿ ಆಕ್ಷೇಪಿಸಿದೆ. ಇದರ ಮಧ್ಯೆ, ಮಣಿಪುರದ (Manipura) ವಿಚಾರದಲ್ಲಿ ಗದ್ದಲ ಪರ್ವ ಮುಂದುವರೆದಿದೆ.
ಅವಿಶ್ವಾಸ ತೀರ್ಮಾನ ಇವತ್ತೇಕೆ ಆಗಲಿಲ್ಲ?
ಕಾಂಗ್ರೆಸ್ ಸಂಸದ ಗೌರವ್ ಗೋಗಯ್‍ರಿಂದ ಇಂದು ಬೆಳಗ್ಗೆ 9:10ಕ್ಕೆ ಲೋಕಸಭೆ ಸ್ಪೀಕರ್ ಕಚೇರಿಗೆ ಅವಿಶ್ವಾಸ ನಿಲುವಳಿ ನೊಟೀಸ್ ಸಲ್ಲಿಕೆ ಸಲ್ಲಿಕೆ. ಯಾವುದೇ ದಿನ ಬೆಳಗ್ಗೆ 10 ಗಂಟೆಯೊಳಗೆ ನೋಟಿಸ್ ನೀಡಿದಲ್ಲಿ ಅದೇ ದಿನ ತೀರ್ಮಾನಿಸಬೇಕಾಗುತ್ತದೆ. ಇದನ್ನೂ ಓದಿ: ಇನ್ಮುಂದೆ ರಷ್ಯಾದಲ್ಲಿ ಗಂಡು ಹೆಣ್ಣಾಗಿ.. ಹೆಣ್ಣು ಗಂಡಾಗಿ ಬದಲಾಗುವಂತಿಲ್ಲ

ಮಧ್ಯಾಹ್ನ 12 ಗಂಟೆಗೆ ವಿಪಕ್ಷಗಳ ನೋಟಿಸ್ ಪರಿಶೀಲಿಸಿ ಸ್ಪೀಕರ್ ಓಂ ಬಿರ್ಲಾ ಅನುಮತಿ ನೀಡಿದರು. ಸಾಮಾನ್ಯವಾಗಿ 10 ದಿನದಲ್ಲಿ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆಗೆ ದಿನಾಂಕ ನಿಗದಿ ಮಾಡಲಾಗುತ್ತದೆ. ಅವಿಶ್ವಾಸದ ತೀರ್ಮಾನದ ಪರವಾಗಿ ಅತೀ ಹೆಚ್ಚು ಮತ ಬಿದ್ದರೆ ಸರ್ಕಾರ ಸಹಜವಾಗಿ ಪತನವಾಗುತ್ತದೆ.
ಲೋಕಸಭೆಯಲ್ಲಿ ಯಾರ ಬಲ ಎಷ್ಟು?
ಸದನದ ಒಟ್ಟು ಬಲ 545 ಆಗಿದ್ದು ಬಹುಮತಕ್ಕೆ 272 ಸದಸ್ಯರ ಬಲ ಬೇಕು. ಎನ್‌ಡಿಎಗೆ 331, ಐಎನ್‌ಡಿಐಎಗೆ 144, ತಟಸ್ಥ – 70 (ಬಿಆರ್‌ಎಸ್, ವೈಎಸ್‍ಆರ್‌ಸಿಪಿ, ಬಿಜೆಡಿ) ಮಂದಿ ಸದಸ್ಯರಿದ್ದಾರೆ.
ಸದನದ ಒಟ್ಟು ಬಲ 545 ಆಗಿದ್ದು ಬಹುಮತಕ್ಕೆ 272 ಸದಸ್ಯರ ಬಲ ಬೇಕು. ಎನ್‌ಡಿಎಗೆ 331, ಐಎನ್‌ಡಿಐಎಗೆ 144, ತಟಸ್ಥ – 70 (ಬಿಆರ್‌ಎಸ್, ವೈಎಸ್‍ಆರ್‌ಸಿಪಿ, ಬಿಜೆಡಿ) ಮಂದಿ ಸದಸ್ಯರಿದ್ದಾರೆ.
ಇತಿಹಾಸ ಏನು ಹೇಳುತ್ತೆ?
ಈವರೆಗೂ ಲೋಕಸಭೆಯಲ್ಲಿ 27 ಬಾರಿ ಅವಿಶ್ವಾಸ ನಿರ್ಣಯ ಮಂಡನೆಯಾಗಿದೆ. 15 ಬಾರಿ ಇಂದಿರಾ ಗಾಂಧಿ ವಿರುದ್ಧ ಅವಿಶ್ವಾಸ ತೀರ್ಮಾನವಾಗಿದ್ದರೆ, ಪಿವಿ ನರಸಿಂಹರಾವ್ ವಿರುದ್ಧ ಮೂರು ಬಾರಿ, ಮೊರಾರ್ಜಿ ದೇಸಾಯಿ ವಿರುದ್ಧ ಎರಡು ಬಾರಿ, ನೆಹರೂ, ರಾಜೀವ್‍ಗಾಂಧಿ, ವಾಜಪೇಯಿ, ಮೋದಿ ವಿರುದ್ಧ ತಲಾ 1 ಬಾರಿ ಮಂಡನೆಯಾಗಿದೆ. ಮೊರಾರ್ಜಿ ದೇಸಾಯಿ, ವಾಜಪೇಯಿ ವಿರುದ್ಧ ಮಾತ್ರ ಅವಿಶ್ವಾಸ ತೀರ್ಮಾನಕ್ಕೆ ಗೆಲುವು ಸಿಕ್ಕಿದೆ.
Web Stories