ನವದೆಹಲಿ: 18ನೇ ಲೋಕಸಭೆಯ (Lok Sabha) ಮೊದಲ ಅಧಿವೇಶನ (Session) ಸೋಮವಾರ ಚಾಲನೆ ಸಿಗಲಿದೆ. ಬೆಳಗ್ಗೆ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಗಳು ಹಂಗಾಮಿ ಸ್ಪೀಕರ್ ಒಡಿಶಾದ ಬಿಜೆಪಿ ಸಂಸದ ಭತೃಹರಿ (Bhartruhari Mahtab) ಅವರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ.
ಸೋಮವಾರ ಮತ್ತು ಮಂಗಳವಾರ ನೂತನ ಸಂಸದರು ಸಂಸದರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮೊದಲ ದಿನ ಪ್ರಧಾನಿ ನರೇಂದ್ರ ಮೋದಿ (PM Narendra Modi), ಕೇಂದ್ರ ಮಂತ್ರಿಗಳು ಸೇರಿ 280 ಸಂಸದರ ಪ್ರತಿಜ್ಞಾವಿಧಿ ನಡೆಯಲಿದೆ. ಉಳಿದವರಿಗೆ ನಾಡಿದ್ದು ಪ್ರಮಾಣವಚನ ಬೋಧಿಸಲಾಗುತ್ತದೆ.
Advertisement
Advertisement
ಜೂನ್ 26ಕ್ಕೆ ಸ್ಪೀಕರ್ ಸ್ಥಾನಕ್ಕೆ ಎಲೆಕ್ಷನ್ ನಡೆಯಲಿದೆ. ಸ್ಪೀಕರ್ ಸ್ಥಾನಕ್ಕೆ ಮತ್ತೆ ಓಂ ಬಿರ್ಲಾ ಹೆಸರು ಕೇಳಿಬರುತ್ತಿದೆ. ಡೆಪ್ಯೂಟಿ ಸ್ಪೀಕರ್ ಸ್ಥಾನಕ್ಕೆ ವಿಪಕ್ಷಗಳು ಬೇಡಿಕೆ ಇಟ್ಟಿವೆ.
Advertisement
ಜೂನ್ 27 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಿರೀಕ್ಷೆಯಂತೆಯೇ ನೀಟ್ (NEET) ಹಗರಣದ ಅಸ್ತ್ರವನ್ನು ಝಳಪಿಸಲು ವಿಪಕ್ಷಗಳು ಸಜ್ಜಾಗಿವೆ. ಇದನ್ನೂ ಓದಿ: NEET ಪರೀಕ್ಷಾ ಅಕ್ರಮ ಕೇಸ್: ʻಸಾಲ್ವರ್ ಗ್ಯಾಂಗ್ʼ ಕೆಲಸ ಏನಾಗಿತ್ತು? ಮಾಸ್ಟರ್ ಮೈಂಡ್ ಮಾಫಿಯಾಗೆ ಸಿಲುಕಿದ್ದು ಹೇಗೆ?
Advertisement
ಹಂಗಾಮಿ ಸ್ಪೀಕರ್ ಆಗಿ ಭತೃಹರಿ ನೇಮಕವಾಗಿದ್ದಕ್ಕೆ ವಿಪಕ್ಷಗಳು ಈಗಾಗಲೇ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ಕೇರಳ ಕಾಂಗ್ರೆಸ್ ಸದಸ್ಯ ಕೆ.ಸುರೇಶ್ ಅವರು 8 ಬಾರಿ ಸಂಸದರಾಗಿ ಆಯ್ಕೆ ಆಗಿದ್ದಾರೆ. ಲೋಕಸಭೆಯ ಹಿರಿಯ ಸದಸ್ಯರಾಗಿರುವ ಕಾರಣ ಅವರಿಗೆ ಹಂಗಾಮಿ ಸ್ಪೀಕರ್ ಸ್ಥಾನ ನೀಡಬೇಕಿತ್ತು ಎಂದು ಆಗ್ರಹಿಸಿವೆ.
ವಿಪಕ್ಷಗಳ ಆಗ್ರಹಕ್ಕೆ ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಕಿರಣ್ ರಿಜಿಜು ಪ್ರತಿಕ್ರಿಯಿಸಿ, ಭತೃಹರಿ ಅವರು ಸತತ 7 ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಆದರೆ ಸುರೇಶ್ ಅವರು 1998 ಮತ್ತು 2004ರ ಚುನಾವಣೆಯಲ್ಲಿ ಸೋತಿದ್ದಾರೆ. ಈಗ ಅವರು ಸತತ 4 ಬಾರಿ ಜಯಗಳಿಸಿದ್ದಾರೆ ಎಂದು ತಿಳಿಸಿದ್ದರು.
ಸುರೇಶ್ ಅವರು ಕೇರಳದ ಮಾವೇಲಿಕರ ಲೋಕಸಭಾ ಕ್ಷೇತ್ರದಿಂದ 1989, 1991, 1996, 1999, 2009, 2014, 2019, 2024ರ ಚುನಾವಣೆಯಲ್ಲಿ ಗೆದ್ದಿದ್ದಾರೆ.