ನವದೆಹಲಿ: ಬಡವರ (Poor) ಮನೆಯಲ್ಲಿ ಫೋಟೋಶೂಟ್ (PhotoShoot) ಮಾಡಿಸಿ ಕೆಲವರು ಮನರಂಜನೆ ತೆಗೆದುಕೊಳ್ಳುತ್ತಾರೆ. ಅವರಿಗೆ ಬಡವರ ಮಾತು ಬೋರ್ ಆಗಲಿದೆ. ನಾನು ಅವರ ಸಿಟ್ಟನ್ನು ಅರ್ಥ ಮಾಡಿಕೊಳ್ಳಬಲ್ಲೆ ಎಂದು ಹೇಳುವ ಮೂಲಕ ರಾಹುಲ್ ಗಾಂಧಿಗೆ (Rahul Gandhi) ಪ್ರಧಾನಿ ನರೇಂದ್ರ ಮೋದಿ (Narendra Modi) ಟಾಂಗ್ ನೀಡಿದರು.
ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಚರ್ಚೆಯಲ್ಲಿ ಮಾತನಾಡಿದ ಅವರು, ನಾವು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಾವು ಬಯಸುತ್ತೇವೆ. ನಮ್ಮ ದೇಶದಲ್ಲಿ ಪ್ರಧಾನ ಮಂತ್ರಿ ಇದ್ದರು. ಅವರನ್ನು ಮಿಸ್ಟರ್ ಕ್ಲೀನ್ ಎಂದು ಕರೆಯಲಾಗುತ್ತಿತ್ತು. ಒಂದು ರೂಪಾಯಿ ಬಿಡುಗಡೆ ಮಾಡಿದರೆ ಬಡವರಿಗೆ 15 ಪೈಸೆ ತಲುಪುತ್ತದೆ ಎಂದು ಹೇಳಿದ್ದರು. ಎಲ್ಲಾ ಕಡೆ ಅವರದ್ದೇ ಸರ್ಕಾರ ಇದ್ದರೂ ಈ ಹೇಳಿಕೆ ನೀಡಿದ್ದರು. ಬಾಕಿ ಹಣ ಎಲ್ಲಿ ಹೋಗುತ್ತಿತ್ತು ಜನರಿಗೆ ಗೊತ್ತಿದೆ. ಉಳಿತಾಯ ಮತ್ತು ಅಭಿವೃದ್ಧಿಯೇ ನಮ್ಮ ಧ್ಯೇಯ ಎಂದರು.
Advertisement
#WATCH | PM Narendra Modi says, “In the last 10 years, we have enhanced savings of the middle class by reducing Income Tax. Before 2014, such ‘bombs’ were hurled and ‘bullets’ were shot, that it affected the lives of people. We gradually healed those wounds and moved forward. In… pic.twitter.com/oGyE0hrYGP
— ANI (@ANI) February 4, 2025
Advertisement
ಬಡವರಿಗೆ ಸುಳ್ಳಿನ ಘೋಷಣೆ ಅಲ್ಲ, ಸತ್ಯವಾದ ಅಭಿವೃದ್ಧಿ ನೀಡಿದ್ದೇವೆ. ಮಧ್ಯಮ ವರ್ಗದ ಕನಸು ಈಡೇರಿಸಿದ್ದೇವೆ. ಬಡವರಿಗೆ ಈವರೆಗೂ ನಾಲ್ಕು ಕೋಟಿ ಮನೆ ಸಿಕ್ಕಿದೆ. ಕಷ್ಟ ಅನುಭವಿಸಿದರಿಗೆ ಪಕ್ಕಾ ಮನೆಯ ಬೆಲೆ ಏನು ಗೊತ್ತಾಗುತ್ತದೆ. ಮಹಿಳೆಯರಿಗಾಗಿ 12 ಕೋಟಿಗೂ ಅಧಿಕ ಶೌಚಾಲಯ ನಿರ್ಮಾಣ ಮಾಡಿದ್ದೇವೆ. ಪ್ರತಿ ಮನೆಗೆ ಕುಡಿಯುವ ನೀರು ನೀಡುವುದು ನಮ್ಮ ಉದ್ದೇಶ. ಜಲ ಜೀವನ್ ಮಿಷನ್ ಅಡಿ 12 ಕುಟುಂಬಗಳಿಗೆ ಕುಡಿಯುವ ನೀರು ನೀಡಿದ್ದೇವೆ ಎಂದು ಸರ್ಕಾರದ ಸಾಧನೆ ತಿಳಿಸಿದರು. ಇದನ್ನೂ ಓದಿ: ವಿದೇಶಿಯರನ್ನು ಗಡಿಪಾರು ಮಾಡದ ಅಸ್ಸಾಂ ಸರ್ಕಾರಕ್ಕೆ ಸುಪ್ರೀಂ ತರಾಟೆ
Advertisement
ದೇಶದ ಜನರು ಹತ್ತು ವರ್ಷದಿಂದ ಸೇವೆ ಮಾಡಲು ಅವಕಾಶ ನೀಡಿದ್ದಾರೆ. 25 ಕೋಟಿ ಜನರು ಬಡತನ ರೇಖೆಯಿಂದ ಹೊರ ಬಂದಿದ್ದಾರೆ. ಈ ಹಿಂದೆ ಗರೀಬಿ ಹಠಾವೋ ಘೋಷಣೆ ಮಾಡಿದವರು ಬಡತನ ನಿರ್ಮೂಲನೆ ಮಾಡಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
Advertisement