ಭಾಷಣಕ್ಕೆ ಕಿರುಚಿ ಅಡ್ಡಿಪಡಿಸಿ ಸುಸ್ತಾಗಿದ್ದ ಪ್ರತಿಪಕ್ಷ ಸದಸ್ಯರಿಗೆ ನೀರು ನೀಡಿದ ಮೋದಿ – ವಿಡಿಯೋ ವೈರಲ್‌

Public TV
1 Min Read
PM Narendra Modi offering water to heckling Opposition MPs

ನವದೆಹಲಿ: ಲೋಕಸಭೆಯಲ್ಲಿ (Lok Sabha) ತನ್ನ ಭಾಷಣಕ್ಕೆ ಅಡ್ಡಿಪಡಿಸುತ್ತಿದ್ದ ಪ್ರತಿಪಕ್ಷ ಸದಸ್ಯರಿಗೆ ಪ್ರಧಾನಿ ಮೋದಿ (PM Narendra Modi) ಕುಡಿಯಲು ನೀರು ನೀಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್‌ ಆಗಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದ ಮೇಲಿನ ವಂದನಾ ನಿರ್ಣಯ ಮೇಲೆ ಮೋದಿ ಭಾಷಣ ಮಾಡಿದರು. ಮೋದಿ ಭಾಷಣ ಮಾಡಲು ಮುಂದಾಗುತ್ತಿದ್ದಂತೆ ಪ್ರತಿ ಪಕ್ಷದ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಲು ಆರಂಭಿಸಿದರು.

ʼಮಣಿಪುರ್‌ ಗೋʼ, ʼಮಣಿಪುರ್‌ ವಾಂಟ್‌ ಜಸ್ಟಿಸ್‌ʼ, ʼಅಗ್ನಿವೀರ್‌ʼ ಇತ್ಯಾದಿ ಘೋಷಣೆ ಕೂಗಿ ಅಡ್ಡಿ ಪಡಿಸುತ್ತಿದ್ದರು. ಬಾವಿಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದ ಪ್ರತಿಪಕ್ಷದ ಸದಸ್ಯರಿಗೆ ಅಲ್ಲಿಂದ ತೆರಳುವಂತೆ ಸ್ಪೀಕರ್‌ ಓಂ ಬಿರ್ಲಾ ಸೂಚಿಸಿದರೂ ಅವರು ಸ್ಥಳದಿಂದ ತೆರಳದೇ ಪ್ರತಿಭಟನೆ ಮುಂದುವರಿಸುತ್ತಲೇ ಇದ್ದರು. ಇದನ್ನೂ ಓದಿ: 8,500 ರೂ. ಬಂದಿದ್ಯಾ ಇಲ್ವಾ ಅಂತಾ ಜನ ಬ್ಯಾಂಕ್ ಖಾತೆ ಚೆಕ್ ಮಾಡ್ತಿದ್ದಾರೆ- ರಾಗಾಗೆ ಮೋದಿ ಟಾಂಗ್

ಪ್ರತಿಪಕ್ಷಗಳ ಸದಸ್ಯರು ಪ್ರತಿಭಟನೆ ನಿಲ್ಲಿಸುವುದಿಲ್ಲ ಎನ್ನುವುದು ಮೋದಿಗೆ ತಿಳಿಯುತ್ತಿದ್ದಂತೆ ಸುದೀರ್ಘ ಭಾಷಣ ಮಾಡತೊಡಗಿದರು. ಸದನ ಬಾವಿಗೆ ಇಳಿದು ಪ್ರತಿಭಟಿಸುತ್ತಿದ್ದ ಕೆಲ ಸದಸ್ಯರು ಕಿರುಚಿ ಸುಸ್ತಾಗಿದ್ದರು. ಇದನ್ನು ಗಮನಿಸಿದ ಮೋದಿ ತನಗೆ ನೀಡಿದ್ದ ನೀರನ್ನು ಪ್ರತಿಪಕ್ಷದ ಸದಸ್ಯರಿಗೆ ನೀಡಿದರು. ಒಬ್ಬರು ಸದಸ್ಯರು ನೀರನ್ನು ಕುಡಿದರು.

 

ಪ್ರಧಾನಿ ಮೋದಿ ಮೋದಿ ಮಂಗಳವಾರ 2 ಗಂಟೆ 15 ನಿಮಿಷ ಮಾತನಾಡಿದರು. ಆರಂಭದಿಂದ ಕೊನೆಯವರೆಗೂ ಪ್ರತಿ ಪಕ್ಷದ ಸದಸ್ಯರು ಘೋಷಣೆ ಕೂಗಿ ಅಡ್ಡಿಪಡಿಸಿದರು. ಮೋದಿ ಭಾಷಣಕ್ಕೆ ವಿಪಕ್ಷ ಸದಸ್ಯರು ಅಡ್ಡಿ ಪಡಿಸಿದ್ದಕ್ಕೆ ಸದನ ಕೊನೆಗೆ ಖಂಡನಾ ಗೊತ್ತುವಳಿಯನ್ನು ಅಂಗೀಕರಿಸಿತು.

Share This Article