ನವದೆಹಲಿ: “ಕಾಲ್ ರಿಸೀವ್ ಮಾಡಿಲ್ಲ ಯಾಕೆ? ಮೇಲ್ ಕಳುಹಿಸಿದ್ರು ರಿಪ್ಲೈ ಮಾಡಿಲ್ಲ ಯಾಕೆ?” ಈ ರೀತಿಯ ಪ್ರಶ್ನೆಗಳನ್ನು ಆಫೀಸ್ ಕೆಲಸ ಮುಗಿಸಿ ಮನೆಗೆ ಬಂದರೂ ಉದ್ಯೋಗಿಗಳಿಗೆ ಬಾಸ್ ಸಾಮಾನ್ಯವಾಗಿ ಕೇಳುತ್ತಿರುತ್ತಾರೆ. ಆದರೆ ಈ ಬಾರಿ ಮಂಡನೆಯಾಗಿರುವ ಮಸೂದೆ ಕಾಯ್ದೆಯಾಗಿ ಜಾರಿಯಾದರೆ ಈ ರೀತಿಯಾಗಿ ಬಾಸ್ ಕೇಳುವ ಪ್ರಶ್ನೆಗಳಿಗೆ ಫುಲ್ ಸ್ಟಾಪ್ ಬೀಳಲಿದೆ.
ಹೌದು. ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ‘ರೈಟ್ ಟು ಡಿಸ್‍ಕನೆಕ್ಟ್’ ಮಸೂದೆ ಮಂಡನೆಯಾಗಿದೆ. ಮನೆಗೆ ತೆರಳಿದ ಬಳಿಕವೂ ಉದ್ಯೋಗಿಯ ಖಾಸಗಿ ಬದುಕನ್ನು ರಕ್ಷಿಸುವ ಸಲುವಾಗಿ ಎನ್‍ಸಿಪಿ ನಾಯಕಿ ಸುಪ್ರಿಯಾ ಸುಳೆ ಈ ಮಸೂದೆಯನ್ನು ಮಂಡಿಸಿದ್ದಾರೆ.
Advertisement
Advertisement
ಮಸೂದೆಯಲ್ಲಿ ಏನಿದೆ?
ಆಫೀಸ್ ಅವಧಿ ಮುಗಿದ ಬಳಿಕವೂ ಮನೆಯಲ್ಲಿ ಬಾಸ್ ಕರೆ, ಇ ಮೇಲ್‍ಗೆ ಉತ್ತರಿಸದೇ ಇರುವ ಸಂಪೂರ್ಣ ಸ್ವಾತಂತ್ರ್ಯ ನೀಡುವ ಅಂಶ ಈ ಮಸೂದೆಯಲ್ಲಿದೆ. ಉದ್ಯೋಗಿಯ ವೃತ್ತಿಜೀವನ ಮತ್ತು ಖಾಸಗಿ ಜೀವನದ ನಡುವೆ ಅಂತರ ಕಾಯ್ದುಕೊಳ್ಳಲು ಮತ್ತು ವೃತ್ತಿಜೀವನದ ಒತ್ತಡವನ್ನು ಕಡಿಮೆ ಮಾಡಲು ಈ ಮಸೂದೆಯನ್ನು ಮಂಡಿಸಲಾಗಿದೆ.
Advertisement
ಹೇಗೆ ಕೆಲಸ ಮಾಡುತ್ತೆ?
ಒಂದು ಕಂಪನಿಯಲ್ಲಿ 10ಕ್ಕೂ ಅಧಿಕ ಉದ್ಯೋಗಿಗಳಿದ್ದು, ಅವರು ಉದ್ಯೋಗಿಗಳ ಕಲ್ಯಾಣ ಸಮಿತಿ ರಚಿಸಿಕೊಂಡಿದ್ದರೆ ಇದು ಸಹಾಯವಾಗಲಿದೆ. ಆಫೀಸಿನಿಂದ ಮನೆಗೆ ತೆರಳಿದ ಬಳಿಕ ಬಾಸ್ ಕರೆಯನ್ನು ನಿರ್ಲಕ್ಷ್ಯಿಸಬಹುದು. ಇಮೇಲ್ ನೋಡಿದರೂ ರಿಪ್ಲೈ ಮಾಡುವ ಅಗತ್ಯ ಇರುವುದಿಲ್ಲ. ಬಾಸ್ ಕರೆಯನ್ನು ನಿರ್ಲಕ್ಷ್ಯ ಮಾಡಿದರೂ ಉದ್ಯೋಗಿಗಳನ್ನು ಪ್ರಶ್ನಿಸಬಾರದು ಮತ್ತು ಯಾವುದೇ ಶಿಸ್ತು ಕ್ರಮ ಕೈಗೊಳ್ಳುವಂತಿಲ್ಲ ಎನ್ನುವ ವಿಶೇಷ ಅಂಶ ಈ ಮಸೂದೆಯಲ್ಲಿದೆ. ಕೇವಲ ಕೆಲಸದ ಅವಧಿ ಅಲ್ಲದೇ ರಾಜಾ ದಿನಕ್ಕೂ ಈ ನಿಯಮ ಅನ್ವಯವಾಗುತ್ತದೆ.
Advertisement
ಬೇರೆ ಕಡೆ ಜಾರಿಯಲ್ಲಿದೆ:
ಫ್ರಾನ್ಸ್ ದೇಶದಲ್ಲಿ 2017ರಲ್ಲಿ ಮೊದಲ ಬಾರಿಗೆ ಈ ಕಾಯ್ದೆ ಜಾರಿಗೆ ಬಂದಿದ್ದು, ನಂತರ ಸ್ಪೇನ್, ಜರ್ಮನಿ ಮತ್ತು ಅಮೆರಿಕದ ಕೆಲ ಕಂಪನಿಗಳು ಈ ನಿಯಮವನ್ನು ಅಳವಡಿಸಿಕೊಂಡಿದೆ. ಆಫೀಸ್ ಸಮಯದ ನಂತರವೂ ಇಮೇಲ್ ಚೆಕ್, ಫೋನ್ ಕಾಲ್ ರಿಸೀವ್ ಮಾಡಿದ್ದರಿಂದ ಒತ್ತಡ ಹೆಚ್ಚಾಗಿ ಮನೆಯ ವಾತಾವರಣ ಹಾಳಾಗಿ ಸಾಂಸಾರಿಕ ಜೀವನದ ಮೇಲೂ ಪೆಟ್ಟು ಬೀಳುತ್ತದೆ. ಇದರಿಂದಾಗಿ ಉದ್ಯೋಗಿಯ ಆರೋಗ್ಯದ ಮೇಲೂ ಪರಿಣಾಮ ಬೀಳುತ್ತದೆ ಎನ್ನುವ ವಿಚಾರದ ಬಗ್ಗೆ ಸಾಕಷ್ಟು ಅಧ್ಯಯನಗಳು ಪ್ರಕಟಗೊಂಡ ಹಿನ್ನೆಲೆಯಲ್ಲಿ ವಿದೇಶದಲ್ಲಿ ಈ ಕಾಯ್ದೆ ಜಾರಿಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv