ಇಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತಿಹಾರ್‌ ಜೈಲಿಗೆ ವಾಪಸ್

Public TV
1 Min Read
arvind kejriwal

ನವದೆಹಲಿ: ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಜಾಮೀನು ಪಡೆದಿದ್ದ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಇಂದು ಮತ್ತೆ ತಿಹಾರ್‌ ಜೈಲಿಗೆ ಹೋಗಲಿದ್ದಾರೆ.

ದೆಹಲಿ ಮದ್ಯ ನೀತಿ ಹಗರಣದಲ್ಲಿ (Delhi Liquor Scam Case) ಕೇಜ್ರಿವಾಲ್‌ ಜೈಲು ಪಾಲಾಗಿದ್ದಾರೆ. ಚುನಾವಣೆ ಪ್ರಚಾರ ಕಾರಣಕ್ಕೆ ಮಧ್ಯಂತರ ಜಾಮೀನು ಮೇರೆಗೆ ಹೊರ ಬಂದಿದ್ದರು. ಚುನಾವಣಾ ಪ್ರಚಾರಕ್ಕಾಗಿ ಕೋರ್ಟ್‌ ಜಾಮೀನು ನೀಡಿತ್ತು. ನಿನ್ನೆಗೆ ಜಾಮೀನು ಅವಧಿ ಅಂತ್ಯಗೊಂಡಿದೆ. ಈ ಹಿನ್ನೆಲೆ ಇಂದು ತಿಹಾರ್ ಜೈಲಿಗೆ ದೆಹಲಿ ಸಿಎಂ ಮರಳಲಿದ್ದಾರೆ. ಇದನ್ನೂ ಓದಿ: ಹಳೇ ಮೈಸೂರು ಭಾಗದಲ್ಲಿ ಮೈತ್ರಿಯಿಂದ 10 ಸ್ಥಾನ ಗೆಲುವು: ಬಿಜೆಪಿ ವಿಶ್ವಾಸ

Aravind Kejriwal

ಜಾಮೀನು ವಿಸ್ತರಣೆ ಕೋರಿ ಸುಪ್ರೀಂ ಕೋರ್ಟ್‌ಗೆ ಕೇಜ್ರಿವಾಲ್‌ ಈಚೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತ್ತು.

ದೆಹಲಿ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅರ್ಜಿಯ ವಿಚಾರಣೆ ಜೂನ್ 5 ರಂದು ನಡೆಯಲಿದೆ. ಎಎಪಿ ನಾಯಕ ಶರಣಾಗಲು ಮಧ್ಯಾಹ್ನ 3 ಗಂಟೆಗೆ ಮನೆಯಿಂದ ಹೊರಡುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಕಾಡುಗಳ್ಳ ವೀರಪ್ಪನ್ ಕೊಂದಿದ್ದ ಪೊಲೀಸ್ ಅಧಿಕಾರಿ ನಿವೃತ್ತಿ ಹಿಂದಿನ ದಿನವೇ ಸಸ್ಪೆಂಡ್

ಮರುದಿನ, ಶರಣಾಗಲು ನಾನು ಮಧ್ಯಾಹ್ನ 3 ಗಂಟೆಗೆ ನನ್ನ ಮನೆಯಿಂದ ಹೊರಡುತ್ತೇನೆ. ನಾವು ದೌರ್ಜನ್ಯದ ವಿರುದ್ಧ ಹೋರಾಡುತ್ತಿದ್ದೇವೆ. ನಾನು ದೇಶಕ್ಕಾಗಿ ನನ್ನ ಪ್ರಾಣವನ್ನು ತ್ಯಾಗ ಮಾಡಬೇಕಾದರೆ, ಶೋಕಿಸಬೇಡಿ ಎಂದು ಕೇಜ್ರಿವಾಲ್ ಸಾರ್ವಜನಿಕ ಭಾಷಣದಲ್ಲಿ ಮಾತನಾಡಿದ್ದರು.

Share This Article