– ಎಲ್ಲಿ ಬೇಕಾದ್ರೂ ಡಿಎಲ್ ಅರ್ಜಿ ಸಲ್ಲಿಸಿ
ನವದೆಹಲಿ: ದುಬಾರಿ ದಂಡ, ಕಠಿಣ ನಿಯಮಗಳನ್ನು ಒಳಗೊಂಡ ಮೋಟಾರು ವಾಹನ ತಿದ್ದುಪಡಿ ವಿಧೇಯಕಕ್ಕೆ ಸೋಮವಾರ ಲೋಕಸಭೆ ಅಂಗೀಕಾರ ನೀಡಿದೆ.
Advertisement
ಕಾನೂನು ರೂಪದಲ್ಲಿ ಜಾರಿಗೆ ಬರೋದಕ್ಕೆ ರಾಜ್ಯಸಭೆಯ ಅನುಮೋದನೆ ಮತ್ತು ರಾಷ್ಟ್ರಪತಿಗಳ ಸಹಿಯೊಂದೇ ಬಾಕಿ. ಹೊಸದಾಗಿ ವಿಧಿಸಲಾಗಿರುವ ದಂಡ ಪ್ರತಿ ವರ್ಷ ಶೇ. 10ರಷ್ಟು ಏರಿಕೆಯಾಗಲಿದೆ.
Advertisement
Advertisement
ಹೊಸ ನಿಯಮದಡಿ ಡ್ರೈವಿಂಗ್ ಲೈಸನ್ಸ್‍ಗಾಗಿ ಮತ್ತು ನವೀಕರಣಕ್ಕಾಗಿ ರಾಜ್ಯದ ಯಾವುದೇ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಾದರೂ ಅರ್ಜಿ ಸಲ್ಲಿಸಬಹುದಾಗಿದೆ. ಒಂದು ವರ್ಷದ ಒಳಗಾಗಿ ಡ್ರೈವಿಂಗ್ ಲೈಸನ್ಸ್ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಬೇಕು. ಒಂದು ವರ್ಷದ ಬಳಿಕ ಸಲ್ಲಿಸಿದ್ರೆ ಮತ್ತೆ ಹೊಸದಾಗಿ ಡ್ರೈವಿಂಗ್ ಟೆಸ್ಟ್ ಪಾಸಾಗುವುದು ಕಡ್ಡಾಯವಾಗಿದೆ.
Advertisement
ಸಾರಿಗೆ ಸಂಸ್ಥೆಯಲ್ಲಿ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಯತ್ನಿಸಲಾಗುವುದು. ಒಮ್ಮೆ ಇ-ಆಡಳಿತ ಜಾರಿಗೆ ಬಂದರೆ ಬಳಿಕ ಬೋಗಸ್ ಚಾಲನಾ ಪರವಾನಗಿಗಳ ಸೃಷ್ಟಿಗೆ ಅವಕಾಶ ಇರುವುದಿಲ್ಲ ಎಂದು 2016ರಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಸ್ಪಷ್ಟಪಡಿಸಿದ್ದರು. ಇದೀಗ ಸಿಪಿಐ(ಎಂ)ನ ಶಂಕರ ಪ್ರಸಾದ ದತ್ತ ಅವರು ಮಂಡಿಸಿದ ಅಪಘಾತಗಳ ಪರಿಹಾರವನ್ನು ಹೆಚ್ಚಿಸಲು ಅವಕಾಶ ನೀಡುವ ತಿದ್ದುಪಡಿ ಸೇರಿದಂತೆ ವಿರೋಧ ಪಕ್ಷಗಳು ಮಂಡಿಸಿದ ಹಲವಾರು ತಿದ್ದುಪಡಿಗಳನ್ನು ತಿರಸ್ಕರಿಸಿದ ಬಳಿಕ ಮಸೂದೆಯನ್ನು ಒಕ್ಕೋರಲಿನಿಂದ ಅಂಗೀಕರಿಸಲಾಯಿತು.
ಹೊಸ ಸಂಚಾರಿ ನಿಯಮಗಳು: ಅಪರಾಧ ಹಳೆಯ ದಂಡ (ರೂ.) ಹೊಸ ದಂಡ (ರೂ.)
ಡ್ರೈವಿಂಗ್ ಲೈಸೆನ್ಸ್ ಇಲ್ಲದಿದ್ರೆ 1000 -5 ಸಾವಿರ ರೂ
ಸಿಗ್ನಲ್ ಜಂಪ್ ಮಾಡಿದ್ರೆ 300- 1 ಸಾವಿರ ರೂ.
ಕುಡಿದು ವಾಹನ ಓಡಿಸಿದ್ರೆ 2000 -10 ಸಾವಿರ ರೂ
ಹೆಲ್ಮೆಟ್, ಸೀಟ್‍ಬೆಲ್ಟ್ ಹಾಕದಿದ್ರೆ 100- 1 ಸಾವಿರ ರೂ
ಇನ್‍ಶೂರೆನ್ಸ್ ಇಲ್ಲದಿದ್ರೆ 1000- 2 ಸಾವಿರ ರೂ
ಮೊಬೈಲ್‍ನಲ್ಲಿ ಮಾತಾಡಿದ್ರೆ 1000- 5 ಸಾವಿರ ರೂ
ಆಂಬ್ಯುಲೆನ್ಸ್‍ಗೆ ದಾರಿ ಬಿಡದಿದ್ರೆ – 10 ಸಾವಿರ ರೂ
ಅತಿಯಾದ ವೇಗದ ಚಾಲನೆ 400- 2 ಸಾವಿರ ರೂ
ಅಪ್ರಾಪ್ತರು ಗಾಡಿ ಓಡಿಸಿದ್ರೆ ವಾಹನ ಮಾಲೀಕರಿಗೆ 25 ಸಾವಿರ ದಂಡ, 3 ವರ್ಷ ಜೈಲು
ಹೆವೀ ಲೋಡ್ ಹಾಕಿದ್ರೆ 20 ಸಾವಿರ, ಪ್ರತಿ ಟನ್‍ಗೂ 2 ಸಾವಿರ ಎಕ್ಸ್ ಟ್ರಾ ಫೈನ್
ಚಾಲನ ಪರವಾನಗಿ ನಿಯಮಗಳನ್ನ ಉಲ್ಲಂಘಿಸಿದ್ರೆ 25 ಸಾವಿರದಿಂದ 1 ಲಕ್ಷದವರೆಗೂ ದಂಡ
ವಾಹನ ಅಸಲಿ ನಿರ್ಮಾಣ ಕವಚ ಬದಲಿಸಿದ್ರೆ 5 ಸಾವಿರ ರೂ
ಟಿಕೆಟ್ ಇಲ್ಲದ ಪ್ರಯಾಣ 200 ರೂ ಬದಲು 500 ರೂ ದಂಡ
ಅಪಘಾತ ಮಾಡಿದಾಗ ವ್ಯಕ್ತಿ ಸಾವನ್ನಪ್ಪಿದರೆ 10 ಲಕ್ಷ ಗಾಯಾಳುವಿಗೆ 5 ಲಕ್ಷ ಪರಿಹಾರ
ಹಿಟ್ ಅಂಡ್ ರನ್ ಮಾಡಿದ್ರೆ 2 ಲಕ್ಷ ರೂ ಪರಿಹಾರ, ಗಾಯಾಳುವಿಗೆ 50 ಸಾವಿರ ಪರಿಹಾರ