ಬೆಂಗಳೂರು: ಲೋಕಸಭಾ ಚುನಾವಣೆಗೆ ದಿನಾಂಕ ಹೊರ ಬೀಳುತ್ತಿದ್ದಂತೆ ಈ ಬಾರಿ ಗೆಲ್ಲುವ ಕುದುರೆ ಯಾರು ಎನ್ನುವ ಎನ್ನುವ ವಿಶ್ಲೇಷಣೆ ಜೋರಾಗಿ ನಡೆಯುತ್ತಿದೆ. ರಾಷ್ಟ್ರಮಟ್ಟದಲ್ಲಿ ಗೆಲ್ಲುವ ಕುದುರೆ ಯಾರು ಎನ್ನುವ ಪ್ರಶ್ನೆಗೆ ಉತ್ತರ ತಿಳಿಯುವ ಮೊದಲು ಈ ಹಿಂದೆ ರಾಜ್ಯಗಳ ಚುನಾವಣೆಯಲ್ಲಿ ಜಯಗಳಿಸಿದವರು ಯಾರು ಎನ್ನುವುದನ್ನು ತಿಳಿದುಕೊಂಡರೆ ಮೊದಲ ಪ್ರಶ್ನೆಗೆ ಉತ್ತರ ಹೇಳಲು ಪ್ರಯತ್ನ ನಡೆಸಬಹುದು.
ಹೌದು. 2014 ರ ಮೇ ತಿಂಗಳಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಇಲ್ಲಿಯವರೆಗೆ ಕೇಂದ್ರಾಡಳಿತ ಪ್ರದೇಶವಾದ ದೆಹಲಿ, ಪುದುಚೇರಿ ಸೇರಿದಂತೆ ಒಟ್ಟು 29 ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಯಾರು ಎಷ್ಟು ಸ್ಥಾನಗಳನ್ನು ಗಳಿಸಿದ್ದಾರೆ ಎನ್ನುವುದನ್ನು ಲೆಕ್ಕ ಹಾಕಿದರೆ ಈ ಬಾರಿ ಯಾರಿಗೆ ಎಷ್ಟು ಸ್ಥಾನ ಸಿಗಬಹುದು? ಯಾವ ರಾಜ್ಯದಲ್ಲಿ ಯಾವ ಪಕ್ಷದ ಪ್ರಭಾವ ಹೇಗಿದೆ ಎನ್ನುವುದನ್ನು ತಿಳಿದುಕೊಳ್ಳಬಹುದು. ಹೀಗಾಗಿ ಇಲ್ಲಿ 2014 ರಿಂದ ಆರಂಭಗೊಂಡು ಇಲ್ಲಿಯವರೆಗೆ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶದ ಮಾಹಿತಿಯನ್ನು ನೀಡಲಾಗಿದೆ.
Advertisement
Advertisement
2014 ಚುನಾವಣೆ
ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ವರ್ಷವಾದ 2014ರಲ್ಲಿ ಒಟ್ಟು 8 ರಾಜ್ಯಗಳಲ್ಲಿ ಚುನಾವಣೆ ನಡೆದಿತ್ತು. ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಹರ್ಯಾಣ, ಜಾರ್ಖಂಡ್, ಮಹಾರಾಷ್ಟ್ರ, ಒಡಿಶಾ, ಸಿಕ್ಕಿಂನಲ್ಲಿ ಚುನಾವಣೆ ನಡೆದಿತ್ತು.
Advertisement
ಆಂಧ್ರಪ್ರದೇಶ : ಒಟ್ಟು 294 ಸ್ಥಾನ
ಬಿಜೆಪಿ 9, ಕಾಂಗ್ರೆಸ್ 21, ಎಡರಂಗ 2, ಇತರೇ 262
Advertisement
ಅರುಣಾಚಲ ಪ್ರದೇಶ : ಒಟ್ಟು 60 ಸ್ಥಾನ
ಬಿಜೆಪಿ 11, ಕಾಂಗ್ರೆಸ್ 42, ಇತರೇ 7
ಜಮ್ಮು ಕಾಶ್ಮೀರ : ಒಟ್ಟು 87 ಸ್ಥಾನ
ಬಿಜೆಪಿ 25, ಕಾಂಗ್ರೆಸ್ 12, ಎಡ ಪಕ್ಷ 1, ಇತರೇ 49
ಹರ್ಯಾಣ : ಒಟ್ಟು 90 ಸ್ಥಾನ
ಬಿಜೆಪಿ 47, ಕಾಂಗ್ರೆಸ್ 15, ಇತರೇ 28
ಜಾರ್ಖಂಡ್ : ಒಟ್ಟು 81 ಸ್ಥಾನ
ಬಿಜೆಪಿ 37, ಕಾಂಗ್ರೆಸ್ 6, ಎಡ ಪಕ್ಷ 1 ಇತರೇ 37
ಮಹಾರಾಷ್ಟ್ರ : ಒಟ್ಟು 288 ಸ್ಥಾನ
ಬಿಜೆಪಿ 122, ಕಾಂಗ್ರೆಸ್ 42, ಎಡ ಪಕ್ಷ 1, ಇತರೇ 123
ಒಡಿಶಾ : ಒಟ್ಟು 147 ಕ್ಷೇತ್ರ
ಬಿಜೆಪಿ 10, ಕಾಂಗ್ರೆಸ್ 16, ಎಡ ಪಕ್ಷ 1, ಇತರೇ 120
ಸಿಕ್ಕಿಂ : ಎಲ್ಲ 32 ಕ್ಷೇತ್ರಗಳನ್ನು ಇತರೇ ಪಕ್ಷಗಳು ಗೆದ್ದುಕೊಂಡಿವೆ.
ಯಾರಿಗೆ ಎಷ್ಟು ಸ್ಥಾನ?
8 ರಾಜ್ಯಗಳ 1,079 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 261, ಕಾಂಗ್ರೆಸ್ 154, ಎಡ ಪಕ್ಷ 6, ಇತರೇ 658 ಸ್ಥಾನಗಳಲ್ಲಿ ಜಯಗಳಿಸಿದ್ದರು.
2015 ಚುನಾವಣೆ
ಬಿಹಾರ ಮತ್ತು ದೆಹಲಿಯಲ್ಲಿ ಚುನಾವಣೆ ನಡೆದಿತ್ತು. ದೆಹಲಿಯಲ್ಲಿ ಆಪ್ ಜಯಗಳಿಸಿದ್ದರೆ ಬಿಹಾರದಲ್ಲಿ ಮಹಾಘಟಬಂಧನ್ ಜಯಗಳಿಸಿತ್ತು. ಆದರೆ ನಂತರದ ಬೆಳವಣಿಗೆಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಬಿಜೆಪಿ ಜೊತೆ ಸೇರಿ ಅಧಿಕಾರ ನಡೆಸುತ್ತಿದೆ.
ಬಿಹಾರ : ಒಟ್ಟು 243 ಕ್ಷೇತ್ರಗಳು
ಬಿಜೆಪಿ 53, ಕಾಂಗ್ರೆಸ್ 27, ಎಡ ಪಕ್ಷ 3, ಇತರೇ 160
ದೆಹಲಿ: ಒಟ್ಟು 70 ಕ್ಷೇತ್ರಗಳು
ಬಿಜೆಪಿ 3 ರಲ್ಲಿ ಜಯಗಳಿಸಿದರೆ ಆಪ್ 67 ಕ್ಷೇತ್ರಗಳಲ್ಲಿ ಜಯಗಳಿಸಿತ್ತು.
ಯಾರಿಗೆ ಎಷ್ಟು ಸ್ಥಾನ?
ಕೇಂದ್ರಾಡಳಿತ ಪ್ರದೇಶವಾದ ದೆಹಲಿ, ಬಿಹಾರದಲ್ಲಿ ಒಟ್ಟು 313 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಬಿಜೆಪಿ 56, ಕಾಂಗ್ರೆಸ್ 27, ಎಡ ಪಕ್ಷ 3, ಇತರೇ 227
2016 ಚುನಾವಣೆ:
ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೆಯಲ್ಲಿ ಅಸ್ಸಾಂ ಹೊರತು ಪಡಿಸಿ ಎಂದಿನಂತೇ ಸ್ಥಳೀಯ ಪಕ್ಷಗಳೇ ಜಯಭೇರಿ ಬಾರಿಸಿವೆ.
ಅಸ್ಸಾಂ : ಒಟ್ಟು 126 ಕ್ಷೇತ್ರ
ಬಿಜೆಪಿ 60, ಕಾಂಗ್ರೆಸ್ 26, ಇತರೇ 40
ಕೇರಳ : ಒಟ್ಟು 140 ಕ್ಷೇತ್ರ
ಬಿಜೆಪಿ 1, ಕಾಂಗ್ರೆಸ್ 22, ಎಡ ಪಕ್ಷ 77, ಇತರೇ 40
ಪುದುಚೇರಿ : ಒಟ್ಟು 30 ಕ್ಷೇತ್ರ
ಬಿಜೆಪಿ 0, ಕಾಂಗ್ರೆಸ್ 15, ಇತರೇ 15
ತಮಿಳುನಾಡು : ಒಟ್ಟು 232 ಕ್ಷೇತ್ರ
ಬಿಜೆಪಿ 0, ಕಾಂಗ್ರೆಸ್ 8, ಇತರೇ 224(ಎಐಎಡಿಎಂಕೆ 136, ಡಿಎಂಕೆ 98)
ಪಶ್ಚಿಮ ಬಂಗಾಳ : ಒಟ್ಟು 294
ಬಿಜೆಪಿ 3, ಕಾಂಗ್ರೆಸ್ 44, ಎಡಪಕ್ಷ 32, ಇತರೇ 215(ಟಿಎಂಸಿ 211)
ಯಾರಿಗೆ ಎಷ್ಟು ಸ್ಥಾನ?
ಕೇಂದ್ರಾಡಳಿತ ಪ್ರದೇಶ ಪುದುಚೇರಿ ಸೇರಿದಂತೆ ನಾಲ್ಕು ರಾಜ್ಯಗಳ ಒಟ್ಟು 822 ಕ್ಷೇತ್ರಗಳ ಪೈಕಿ ಬಿಜೆಪಿ 64, ಕಾಂಗ್ರೆಸ್ 115, ಎಡಪಕ್ಷ 109, ಇತರೇ 534 ಕ್ಷೇತ್ರಗಳನ್ನು ಗೆದ್ದುಕೊಂಡಿದೆ.
2017 ಚುನಾವಣೆ:
ನೋಟು ನಿಷೇಧದ ನಂತರ 7 ರಾಜ್ಯಗಳಲ್ಲಿ ನಡೆದ ಚುನಾವಣೆ ಭಾರೀ ಮಹತ್ವ ಪಡೆದಿತ್ತು. ಅತಿ ಹೆಚ್ಚು ಕ್ಷೇತ್ರಗಳಿರುವ ಉತ್ತರಪ್ರದೇಶದಲ್ಲಿ ಬಿಜೆಪಿ ಜಯಗಳಿಸಿದ್ದರೆ ಪಂಜಾಬ್ ನಲ್ಲಿ ಕಾಂಗ್ರೆಸ್ ಜಯಗಳಿಸಿತ್ತು. ಮೋದಿ ತವರು ನೆಲ ಗುಜರಾತಿನಲ್ಲಿ ಕಮಲ ಅರಳಿತ್ತು.
ಗೋವಾ: ಒಟ್ಟು ಕ್ಷೇತ್ರಗಳು 40
ಬಿಜೆಪಿ 13, ಕಾಂಗ್ರೆಸ್ 17, ಇತರೇ 10
ಗುಜರಾತ್ : ಒಟ್ಟು ಕ್ಷೇತ್ರಗಳು 182
ಬಿಜೆಪಿ 99, ಕಾಂಗ್ರೆಸ್ 77, ಇತರೇ 6
ಹಿಮಾಚಲ ಪ್ರದೇಶ : ಒಟ್ಟು ಕ್ಷೇತ್ರಗಳು 68
ಬಿಜೆಪಿ 44, ಕಾಂಗ್ರೆಸ್ 21, ಎಡ ಪಕ್ಷ 1, ಇತರೇ 2
ಮಣಿಪುರ : ಒಟ್ಟು ಕ್ಷೇತ್ರಗಳು 60
ಬಿಜೆಪಿ 21, ಕಾಂಗ್ರೆಸ್ 28, ಇತರೇ 11
ಪಂಜಾಬ್ : ಒಟ್ಟು ಕ್ಷೇತ್ರಗಳು 117
ಬಿಜೆಪಿ 3, ಕಾಂಗ್ರೆಸ್ 77, ಇತರೇ 37
ಉತ್ತರ ಪ್ರದೇಶ: ಒಟ್ಟು ಕ್ಷೇತ್ರಗಳು 403
ಬಿಜೆಪಿ 312, ಕಾಂಗ್ರೆಸ್ 7, ಇತರೇ 84
ಉತ್ತಾರಖಂಡ್ : ಒಟ್ಟು ಕ್ಷೇತ್ರಗಳು 69
ಬಿಜೆಪಿ 56, ಕಾಂಗ್ರೆಸ್ 11, ಇತರೇ 2
ಯಾರಿಗೆ ಎಷ್ಟು?
ಒಟ್ಟು 7 ರಾಜ್ಯಗಳ 939 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 548, ಕಾಂಗ್ರೆಸ್ 238, ಎಡ ಪಕ್ಷ 1, ಇತರೇ 152 ಸ್ಥಾನಗಳನ್ನು ಗೆದ್ದುಕೊಂಡಿದೆ.
2018 ಚುನಾವಣೆ:
ಲೋಕಸಭಾ ಚುನಾವಣೆಯ ಸೆಮಿಫೈನಲ್ ಎಂದೇ ಬಿಂಬಿತವಾಗಿದ್ದ ಈ ಚುನಾವಣೆಯಲ್ಲಿ ರಾಜಸ್ಥಾನ, ಛತ್ತೀಸ್ಗಢದಲ್ಲಿ ಕಾಂಗ್ರೆಸ್ ಜಯ ಗಳಿಸಿದರೆ ತ್ರಿಪುರದಲ್ಲಿ ಬಿಜೆಪಿ ಜಯಗಳಿಸಿತ್ತು. ಕರ್ನಾಟಕದಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದರೆ ಮಧ್ಯಪ್ರದೇಶದಲ್ಲಿ ಬಿಜೆಪಿ ಕಾಂಗ್ರೆಸ್ಸಿಗೆ ಪ್ರಬಲ ಪೈಪೋಟಿ ನೀಡಿತ್ತು.
ಕರ್ನಾಟಕ: ಒಟ್ಟು ಕ್ಷೇತ್ರಗಳು 222
ಬಿಜೆಪಿ 104, ಕಾಂಗ್ರೆಸ್ 78, ಇತರೇ 40(ಜೆಡಿಎಸ್ 37)
ಮೇಘಾಲಯ : ಒಟ್ಟು ಕ್ಷೇತ್ರಗಳು 59
ಬಿಜೆಪಿ 2, ಕಾಂಗ್ರೆಸ್ 21, ಇತರೇ 36
ನಾಗಲ್ಯಾಂಡ್ : ಒಟ್ಟು ಕ್ಷೇತ್ರಗಳು 59
ಬಿಜೆಪಿ 12, ಕಾಂಗ್ರೆಸ್ 0, ಇತರೇ 47
ತ್ರಿಪುರ : ಒಟ್ಟು ಕ್ಷೇತ್ರಗಳು 59
ಬಿಜೆಪಿ 35, ಕಾಂಗ್ರೆಸ್ 0, ಎಡ ಪಕ್ಷ 16, ಇತರೇ 8
ಮಧ್ಯಪ್ರದೇಶ : ಒಟ್ಟು ಕ್ಷೇತ್ರಗಳು 230
ಬಿಜೆಪಿ 109, ಕಾಂಗ್ರೆಸ್ 114, ಇತರೇ 7
ಛತ್ತೀಸ್ಗಢ : ಒಟ್ಟು ಕ್ಷೇತ್ರ 90
ಬಿಜೆಪಿ 15, ಕಾಂಗ್ರೆಸ್ 68, ಇತರೇ 8
ರಾಜಸ್ಥಾನ : ಒಟ್ಟು ಕ್ಷೇತ್ರಗಳು 199
ಬಿಜೆಪಿ 73, ಕಾಂಗ್ರೆಸ್ 99, ಎಡ ಪಕ್ಷ 2, ಇತರೇ 25
ಮಿಜೋರಾಂ : ಒಟ್ಟು ಕ್ಷೇತ್ರಗಳು 40
ಬಿಜೆಪಿ 1, ಕಾಂಗ್ರೆಸ್ 5, ಇತರೇ 34
ತೆಲಂಗಾಣ : ಒಟ್ಟು ಕ್ಷೇತ್ರಗಳು 119
ಬಿಜೆಪಿ 1, ಕಾಂಗ್ರೆಸ್ 19, ಎಡ ಪಕ್ಷ 1, ಇತರೇ 98
2018ರಲ್ಲಿ ಯಾರಿಗೆ ಎಷ್ಟು?
ಒಟ್ಟು 9 ರಾಜ್ಯಗಳ 1,077 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಬಿಜೆಪಿ 352, ಕಾಂಗ್ರೆಸ್ 404, ಎಡಪಕ್ಷ 19, ಇತರೇ 302 ಸ್ಥಾನಗಳನ್ನು ಗೆದ್ದುಕೊಂಡಿದೆ.
ಈಗ ದೇಶದಲ್ಲಿ ಯಾರಿಗೆ ಎಷ್ಟು ಸ್ಥಾನವಿದೆ?
ಕಳೆದ ಲೋಕಸಭಾ ಚುನಾವಣೆ ಬಳಿಕ ದೆಹಲಿ, ಪುದುಚೇರಿ ಸೇರಿದಂತೆ ಒಟ್ಟು 29 ರಾಜ್ಯಗಳ 4,230 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 1,201(ಶೇ.29), ಕಾಂಗ್ರೆಸ್ 938(ಶೇ.23), ಎಡ ಪಕ್ಷ 138(ಶೇ.3), ಇತರೇ 1,873(ಶೇ.45) ಕ್ಷೇತ್ರಗಳಲ್ಲಿ ಗೆಲುವನ್ನು ಪಡೆದಿದೆ. ಈ ಫಲಿತಾಂಶವನ್ನು ವಿಶ್ಲೇಷಿಸಿದಾಗ ರಾಷ್ಟ್ರೀಯ ಪಕ್ಷ ಅಧಿಕಾರಕ್ಕೆ ಏರಬೇಕಾದರೆ ಸ್ಥಳೀಯ ಮಟ್ಟದಲ್ಲಿ ಮೈತ್ರಿ ಅನಿವಾರ್ಯ. ಯಾರು ಗೆಲ್ಲುವ ಕುದುರೆಯ ಜೊತೆ ಮೈತ್ರಿ ಮಾಡುತ್ತಾರೋ ಅವರು ಕೇಂದ್ರದಲ್ಲೂ ಅಧಿಕಾರಕ್ಕೆ ಏರುವುದು ನಿಶ್ಚಿತ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv