– 18 ಲೋಕಸಭೆ ಚುನಾವಣೆಗಳ ದಿನ ಲೆಕ್ಕಾಚಾರ
– ಮೊದಲ ಚುನಾವಣೆ ನಡೆದಿದ್ದು 4 ತಿಂಗಳು
– ಈ ಬಾರಿ ಚುನಾವಣೆ ಒಂದೂವರೆ ತಿಂಗಳು
ಪಬ್ಲಿಕ್ ಟಿವಿ ವಿಶೇಷ
ಬೆಂಗಳೂರು: 18ನೇ ಲೋಕಸಭೆ ಚುನಾವಣೆಗೆ (Lok Sabha Election 2024) ದಿನಗಣನೆ ಶುರುವಾಗಿದೆ. 7 ಹಂತಗಳಲ್ಲಿ ನಡೆಯುವ ಮಹಾಚುನಾವಣೆಯ ಮೊದಲ ಹಂತದ ಚುನಾವಣೆಯ ಹಬ್ಬ ಇದೇ ಏಪ್ರಿಲ್ 16ರಿಂದ ಶುರುವಾಗಲಿದೆ. ಸ್ವತಂತ್ರ ಭಾರತದಲ್ಲಿ ಇದುವರೆಗೆ 17 ಲೋಕಸಭಾ ಚುನಾವಣೆ ನಡೆದಿದ್ದು ಈ ಬಾರಿ ನಡೆಯುತ್ತಿರೋದು 18ನೇ ಲೋಕಸಭೆ ಚುನಾವಣೆ. 1951-52ರಲ್ಲಿ ಸ್ವತಂತ್ರ ಭಾರತದ ಮೊಟ್ಟ ಮೊದಲ ಚುನಾವಣೆ ನಡೆಯಿತು.
Advertisement
1951ರಲ್ಲಿ ನಡೆದ ಚುನಾವಣೆ 120 ದಿನಗಳ ಅವಧಿಯಲ್ಲಿ ನಡೆದು ಗರಿಷ್ಠ ಅವಧಿಯಲ್ಲಿ ನಡೆದ ಚುನಾವಣೆ ಎಂಬ ಖ್ಯಾತಿ ಪಡೆದರೆ, 1980ರಲ್ಲಿ ಕೇವಲ 4 ದಿನಗಳ ಅವಧಿಯಲ್ಲಿ ದೇಶಾದ್ಯಂತ ಚುನಾವಣೆ ನಡೆದು ಕನಿಷ್ಠ ಅವಧಿಯ ಚುನಾವಣೆ ಎಂಬ ದಾಖಲೆಗೆ ಪಾತ್ರವಾಯಿತು. ಇದನ್ನೂ ಓದಿ: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮಹಿಳೆಯರ ಖಾತೆಗೆ ವರ್ಷಕ್ಕೆ 1.24ಲಕ್ಷ ರೂ. ಜಮೆ: ರಾಹುಲ್ ಘೋಷಣೆ
Advertisement
Advertisement
2024ರ ಈ ಬಾರಿಯ ಚುನಾವಣೆ 44 ದಿನಗಳ ಅವಧಿಯಲ್ಲಿ ನಡೆಯುತ್ತಿದ್ದು, ಇದು 2ನೇ ಗರಿಷ್ಠ ದಿನಗಳ ಅವಧಿಯ ಚುನಾವಣೆಯಾಗಲಿದೆ.
Advertisement
ಮೊದಲ ಚುನಾವಣೆ – 120 ದಿನ
ದೇಶದ ಮೊದಲ ಚುನಾವಣೆಯು 4 ತಿಂಗಳ ಅವಧಿಯಲ್ಲಿ ನಡೆಯಿತು. 1951ರ ಅಕ್ಟೋಬರ್ 25ರಂದು ಆರಂಭವಾದ ಚುನಾವಣಾ ಪ್ರಕ್ರಿಯೆ 1952ರ ಫೆಬ್ರವರಿ 21ರಂದು ಕೊನೆಗೊಂಡಿತು. ಇದು 120 ದಿನಗಳ ಅವಧಿಯದ್ದಾಗಿತ್ತು.
2ನೇ ಚುನಾವಣೆ – 19 ದಿನ
ದೇಶದ 2ನೇ ಲೋಕಸಭೆ ಚುನಾವಣೆಯು 1957ರಲ್ಲಿ ನಡೆಯಿತು. 1957ರ ಫೆಬ್ರವರಿ 24ರಿಂದ ಮಾರ್ಚ್ 14ರವರೆಗಿನ 19 ದಿನಗಳ ಅವಧಿಯಲ್ಲಿ 2ನೇ ಚುನಾವಣೆ ನಡೆಯಿತು. ಇದನ್ನೂ ಓದಿ: ಪಕ್ಷದ ಸಿದ್ದಾಂತ ಮೆಚ್ಚಿ ಸೇರಿದ್ದೇನೆ – ಕರಡಿ ಸಂಗಣ್ಣ ಕಾಂಗ್ರೆಸ್ ಸೇರ್ಪಡೆ
3ನೇ ಚುನಾವಣೆ – 7 ದಿನ
ದೇಶದ 3ನೇ ಲೋಕಸಭೆ ಚುನಾವಣೆಯು 1962ರಲ್ಲಿ ನಡೆಯಿತು. ಸರಿಯಾಗಿ ಒಂದು ವಾರ ಮತದಾನ ಪ್ರಕ್ರಿಯೆ ನಡೆಯಿತು. ಫೆಬ್ರವರಿ 19ರಿಂದ 25ರವರೆಗೆ 7 ದಿನಗಳಲ್ಲಿ ಚುನಾವಣೆ ಪ್ರಕ್ರಿಯೆ ಮುಗಿಯಿತು.
4ನೇ ಚುನಾವಣೆ – 5 ದಿನ
ದೇಶದ 4ನೇ ಲೋಕಸಭೆ ಚುನಾವಣೆಯು 1967ರಲ್ಲಿ ಫೆಬ್ರವರಿ 17ರಿಂದ 21ರವರೆಗೆ 5 ದಿನಗಳಲ್ಲಿ ನಡೆಯಿತು.
5ನೇ ಚುನಾವಣೆ – 10 ದಿನ
ದೇಶದ 5ನೇ ಲೋಕಸಭೆ ಚುನಾವಣೆಯು 10 ದಿನಗಳ ಅವಧಿಯಲ್ಲಿ ನಡೆಯಿತು. 1971ರಲ್ಲಿ ಮಾರ್ಚ್ 1ರಿಂದ 10ರವರೆಗೆ ಮಹಾಚುನಾವಣೆ ನಡೆಯಿತು.
6ನೇ ಚುನಾವಣೆ – 5 ದಿನ
5ನೇ ಲೋಕಸಭೆ ಚುನಾವಣೆ 10 ದಿನಗಳ ಕಾಲ ನಡೆದರೂ 6ನೇ ಲೋಕಸಭೆ ಚುನಾವಣೆ ಕೇವಲ 5 ದಿನಗಳ ಅವಧಿಯಲ್ಲಿ ನಡೆಯಿತು. 1977ರ ಮಾರ್ಚ್ 16ರಿಂದ 20ರ ನಡುವೆ ದೇಶಾದ್ಯಂತ ಲೋಕಸಭೆ ಚುನಾವಣೆ ನಡೆಯಿತು. ಇದನ್ನೂ ಓದಿ: ಮಾಜಿ ಕಾಂಗ್ರೆಸ್ ಶಾಸಕ ಅಖಂಡ ಬುಧವಾರ ಬಿಜೆಪಿ ಸೇರ್ಪಡೆ
7ನೇ ಚುನಾವಣೆ – 4 ದಿನ
ಚುನಾವಣಾ ಮಹಾಸಂಗ್ರಾಮದಲ್ಲಿ ಅತಿ ಕಡಿಮೆ ಅವಧಿಯಲ್ಲಿ ಭಾರತ ದೇಶಾದ್ಯಂತ ಚುನಾವಣೆ ನಡೆದಿದ್ದು 1980ರ 7ನೇ ಲೋಕಸಭೆ ಚುನಾವಣೆಯಲ್ಲಿ. ಕೇವಲ 4 ದಿನಗಳ ಅವಧಿಯಲ್ಲಿ ನಡೆದ ಈ ಚುನಾವಣೆ ಮಾರ್ಚ್ 3ರಿಂದ 6ರವರೆಗೆ ನಡೆಯಿತು. ಕನಿಷ್ಟ ಅವಧಿಯಲ್ಲಿ ನಡೆದ ಚುನಾವಣೆ ಎಂಬ ದಾಖಲೆ 1980ರಲ್ಲಿ ನಡೆದ ಚುನಾವಣೆಗೆ ಸಿಕ್ಕಿತು.
8ನೇ ಚುನಾವಣೆ – 5 ದಿನ
ಭಾರತದ 8ನೇ ಲೋಕಸಭೆ ಚುನಾವಣೆ 5 ದಿನಗಳ ಅವಧಿಯಲ್ಲಿ ನಡೆಯಿತು. 1984ರ ಡಿಸೆಂಬರ್ 24ರಿಂದ 28ರವರೆಗಿನ ಅವಧಿಯಲ್ಲಿ ಚುನಾವಣೆ ನಡೆಯಿತು.
9ನೇ ಚುನಾವಣೆ – 5 ದಿನ
ದೇಶದ 9ನೇ ಚುನಾವಣೆ ಕೂಡಾ 5 ದಿನಗಳ ಅವಧಿಯಲ್ಲಿ ನಡೆಯಿತು. 1989ರ ನವೆಂಬರ್ 22ರಿಂದ 26ರ ನಡುವೆ ಈ ಚುನಾವಣೆ ನಡೆಯಿತು.
10ನೇ ಚುನಾವಣೆ – 27 ದಿನ
ಭಾರತದ 10ನೇ ಲೋಕಸಭೆಗೆ ಚುನಾವಣೆ 1991ರಲ್ಲಿ 27 ದಿನಗಳ ಕಾಲ ನಡೆಯಿತು. ಮೇ 20ರಿಂದ ಜೂನ್ 15ರವರೆಗೆ ಈ ಚುನಾವಣೆ ನಡೆಯಿತು.
11ನೇ ಚುನಾವಣೆ – 34 ದಿನ
ಮೊದಲ ಚುನಾವಣೆ ಬಿಟ್ಟರೆ ಒಂದು ತಿಂಗಳಿಗೂ ಹೆಚ್ಚಿನ ಅವಧಿಯಲ್ಲಿ ಚುನಾವಣೆ ನಡೆದಿದ್ದು 1996ರಲ್ಲಿ. 11ನೇ ಲೋಕಸಭೆಗೆ ನಡೆದ ಚುನಾವಣೆ ಒಟ್ಟು 34 ದಿನಗಳ ಕಾಲ ನಡೆಯಿತು. 1996ರ ಏಪ್ರಿಲ್ 27ರಿಂದ ಮೇ 30ರ ತನಕ ವಿವಿಧ ಹಂತಗಳಲ್ಲಿ ಮತದಾನ ನಡೆಯಿತು. ಇದನ್ನೂ ಓದಿ: ಬುಧವಾರ ಸಂಸದ ಕರಡಿ ಸಂಗಣ್ಣ ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ
12ನೇ ಚುನಾವಣೆ – 8 ದಿನ
ದೇಶದ 12ನೇ ಲೋಕಸಭೆ ಚುನಾವಣೆ ಮತ್ತೆ ಕೇವಲ 8 ದಿನಗಳಲ್ಲಿ ಮುಗಿಯಿತು. 1998ರ ಫೆಬ್ರವರಿ 16ರಿಂದ 23ರವರೆಗೆ ಈ ಚುನಾವಣೆ ನಡೆಯಿತು.
13ನೇ ಚುನಾವಣೆ – 32 ದಿನ
13ನೇ ಲೋಕಸಭೆ ಚುನಾವಣೆ 32 ದಿನಗಳ ಸುದೀರ್ಘ ಅವಧಿಗೆ ನಡೆಯಿತು. 1999ರ ಸೆಪ್ಟೆಂಬರ್ 5ರಿಂದ ಅಕ್ಟೋಬರ್ 6ರವರೆಗೆ ಚುನಾವಣಾ ಪ್ರಕ್ರಿಯೆಗಳು ನಡೆದವು.
14ನೇ ಚುನಾವಣೆ – 21 ದಿನ
ದೇಶದ 14ನೇ ಲೋಕಸಭೆ ಚುನಾವಣೆ ಸರಿಯಾಗಿ 3 ವಾರಗಳ ಕಾಲ ನಡೆಯಿತು. 2004ರ ಏಪ್ರಿಲ್ 20ರಿಂದ ಮೇ 10ರವರೆಗೆ 21 ದಿನಗಳ ಕಾಲ ದೇಶದಲ್ಲಿ ಚುನಾವಣೆ ನಡೆಯಿತು.
15ನೇ ಚುನಾವಣೆ – 28 ದಿನ
15ನೇ ಲೋಕಸಭೆ ಚುನಾವಣೆಯು 4 ವಾರಗಳ ಕಾಲ ನಡೆಯಿತು. 28 ದಿನಗಳ ಕಾಲ ನಡೆದ ಚುನಾವಣೆ ಪ್ರಕ್ರಿಯೆ 2009ರ ಏಪ್ರಿಲ್ 16ರಂದು ಆರಂಭವಾಗಿ ಮೇ 13ಕ್ಕೆ ಅಂತ್ಯಗೊಂಡಿತು.
16ನೇ ಚುನಾವಣೆ – 36 ದಿನ
ಭಾರತದ 16ನೇ ಲೋಕಸಭೆ ಚುನಾವಣೆಯು 36 ದಿನಗಳ ಅವಧಿಗೆ ನಡೆಯಿತು. 2014ರ ಏಪ್ರಿಲ್ 7ರಿಂದ ಮೇ 12ರವರೆಗೆ ಚುನಾವಣಾ ಪ್ರಕ್ರಿಯೆ ನಡೆಯಿತು. ಇದನ್ನೂ ಓದಿ: ಸುರ್ಜೇವಾಲಾಗೆ ಶಾಕ್ – 2 ದಿನ ಚುನಾವಣಾ ಪ್ರಚಾರಕ್ಕೆ ನಿಷೇಧ
17ನೇ ಚುನಾವಣೆ – 39 ದಿನ
17ನೇ ಲೋಕಸಭೆ ಚುನಾವಣೆಯು 2019ರ ಏಪ್ರಿಲ್ 11ರಿಂದ ಮೇ 19ರವರೆಗೆ ನಡೆಯಿತು. ಒಟ್ಟು 39 ದಿನಗಳಲ್ಲಿ 7 ಹಂತಗಳಲ್ಲಿ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ನಡೆಯಿತು.
18ನೇ ಚುನಾವಣೆ – 44 ದಿನ
ಈ ವರ್ಷ ಅಂದರೆ 2024ರಲ್ಲಿ ದೇಶದಲ್ಲಿ ನಡೆಯುತ್ತಿರುವುದು 18ನೇ ಲೋಕಸಭೆ ಚುನಾವಣೆ. 44 ದಿನಗಳ ಅವಧಿಯಲ್ಲಿ 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಈ ಬಾರಿ ನಡೆಯುತ್ತಿರುವುದು 2ನೇ ಅತ್ಯಧಿಕ ದಿನಗಳ ಅವಧಿಯ ಲೋಕಸಭೆ ಚುನಾವಣೆ. 2024ರ ಏಪ್ರಿಲ್ 19ರಿಂದ ಜೂನ್ 1ರವರೆಗೆ 44 ದಿನಗಳ ಅವಧಿಯಲ್ಲಿ ಮತದಾನ ನಡೆಯಲಿದೆ.
ಈ ಚುನಾವಣೆಯ ಫಲಿತಾಂಶ ಜೂನ್ 4ರಂದು ಪ್ರಕಟವಾಗಲಿದ್ದು, ಮುಂದಿನ 5 ವರ್ಷಗಳ ಕಾಲ ದೇಶವನ್ನು ಆಳುವವರು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ. ಭವ್ಯ ಭಾರತದ ಮತದಾರ 7 ಹಂತದ ಚುನಾವಣೆಯಲ್ಲಿ ವಿಜಯಪತಾಕೆಯನ್ನು ಯಾರ ಕೈಗೆ ಕೊಡುತ್ತಾನೆ ಎಂದು ಕಾದು ನೋಡೋಣ.