ಲೋಕಸಭಾ ಚುನಾವಣೆ: ನಟಿ ರಾಧಿಕಾಗೆ ಟಿಕೆಟ್ ನೀಡಿದ ಬಿಜೆಪಿ

Public TV
1 Min Read
Radhika Sarath Kumar 1

ಲೋಕಸಭಾ (Lok Sabha) ಚುನಾವಣಾ (Election) ಅಖಾಡದಲ್ಲಿ ಅನೇಕ ತಾರೆಯರು ಕಾಣಿಸಿಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ ಸುಮಲತಾ ಅಂಬರೀಶ್, ಶಿವರಾಜ್ ಕುಮಾರ್ ಪತ್ನಿ ಗೀತಾ ಹೆಸರು ಕೇಳಿ ಬಂದಿದ್ದವು. ಆದರೆ, ಗೀತಾ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದೆ. ಸುಮಲತಾ ಅವರು ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದ್ದಾರೆ.

Radhika Sarath Kumar 2

ಈ ಮಧ್ಯೆ ಬೇರೆ ಬೇರೆ ರಾಜ್ಯಗಳಲ್ಲೂ ಲೋಕಸಭಾ ಅಖಾಡದಲ್ಲಿ ಸಿನಿಮಾ ತಾರೆಯರು ಇದ್ದಾರೆ. ಅದರಲ್ಲೂ ಪಕ್ಕದ ರಾಜ್ಯ ತಮಿಳು ನಾಡಿನಲ್ಲಿ ನಟಿ ರಾಧಿಕಾ ಶರತ್ ಕುಮಾರ್ (Radhika Sarath Kumar) ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ನಟಿ ಹಾಗೂ ರಾಜಕಾರಣಿಯೂ ಆಗಿರುವ ರಾಧಿಕಾ ಅವರು, ವಿರುಧನಗರ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ. ಇತ್ತೀಚೆಗಷ್ಟೇ ರಾಧಿಕಾ ಪತ್ನಿ ಶರತ್ ಕುಮಾರ್ ಅವರು ತಮ್ಮ ಅಖಿಲ ಭಾರತೀಯ ಸಮತುಮ ಮಕ್ಕಳ ಕಚ್ಚಿ ಪಕ್ಷವನ್ನು ಬಿಜೆಪಿ ಜೊತೆ ವಿಲಿನ ಮಾಡಿಕೊಂಡಿದ್ದರು.

 

ಆಂಧ್ರದಲ್ಲೂ ಲೋಕಸಭಾ ಚುನಾವಣೆಯ ಚಟುವಟಿಕೆ ಕಾವೇರಿದ್ದು, ಹೆಸರಾಂತ ನಟ ಪವನ್ ಕಲ್ಯಾಣ್ ಕೂಡ ಅಖಾಡದಲ್ಲಿ ಇದ್ದಾರೆ. ಈಗಾಗಲೇ ಅವರು ಪ್ರಚಾರವನ್ನೂ ಶುರು ಮಾಡಿದ್ದಾರೆ. ಇವರ ವಿರುದ್ಧ ರಾಮ್ ಗೋಪಾಲ್ ವರ್ಮಾ ಸ್ಪರ್ಧಿಸುವುದಾಗಿ ಹೇಳಿಕೊಂಡಿದ್ದಾರೆ. ಇನ್ನೂ ಯಾರೆಲ್ಲ ಚುನಾವಣೆ ಕಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕು.

Share This Article