ಗದಗ: ಡಿಸೆಂಬರ್‌ನಲ್ಲಿ ಬಿಜೆಪಿ (BJP) ಲೋಕಸಭೆ ಚುನಾವಣೆಯನ್ನು (Lok Sabha Election) ನಡೆಸಬಹುದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿಕೆಗೆ ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಹೆಚ್‌ಕೆ ಪಾಟೀಲ್ (HS Patil) ರಿಯಾಕ್ಟ್ ಮಾಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನವೆಂಬರ್, ಡಿಸೆಂಬರ್, ಜನವರಿ, ಮೇ ಯಾವಾಗಾದ್ರೂ ಚುನಾವಣೆ ಮಾಡಲಿ. ಬಿಜೆಪಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂಬುದು ಕರ್ನಾಟಕದ ಮತದಾರರ ಮನಸ್ಸು ತಿಳಿದ ಮೇಲೆ ಗೊತ್ತಾಗಿದೆ. ಚುನಾವಣೆ ಯಾವಾಗಾದ್ರೂ ಮಾಡಲಿ ಬಿಜೆಪಿಗೆ ಸೋಲು ಕಟ್ಟಿಟ್ಟ ಬುತ್ತಿ. ಇದಕ್ಕಾಗಿಯೇ ನಮ್ಮ ಪಕ್ಷಕ್ಕೆ ನಾಯಕರು, ಕಾರ್ಯಕರ್ತರು ಹೇಗೆಲ್ಲಾ ಧಾವಿಸಿ ಬರ್ತಿದ್ದಾರೆ. ಇದು ಉತ್ತಮವಾದ, ಆರೋಗ್ಯಕರವಾದ ರಾಜಕೀಯ ಬೆಳವಣಿಗೆ ಎಂದರು.
ಶಿವರಾಮ ಹೆಬ್ಬಾರ್, ಶಂಕರ್ ಪಾಟೀಲ್ ಮುನೇನಕೊಪ್ಪ ಸೇರಿದಂತೆ ಹಲವು ನಾಯಕರು ಕಾಂಗ್ರೆಸ್ ಸೇರ್ಪಡೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದರು. ಕಾಂಗ್ರೆಸ್ ಮನಸ್ಸು ಅರಿತವರು, ಸಮಾಜವಾದಿ ತತ್ವದಲ್ಲಿ ವಿಶ್ವಾಸ ಇರುವವರು, ಜಾತ್ಯತೀತ ಮನೋಭಾವದವರು, ಬಡವರ ಬಗ್ಗೆ ಕಳಕಳಿ ಉಳ್ಳವರು ನಮ್ಮ ಪಕ್ಷಕ್ಕೆ ಬರಲು ಸ್ವಾಗತವಿದೆ. ಯಾರು ಸಂಪರ್ಕ ಮಾಡಿದ್ದಾರೆ, ಯಾರು ಮಾಡಿಲ್ಲ ಎಂಬುದನ್ನು ಸದ್ಯ ಮಾಧ್ಯಮದ ಬಳಿ ಹೇಳಿಕೊಳ್ಳುವ ವಿಷಯ ಇದಲ್ಲ. ಒಟ್ಟಿನಲ್ಲಿ ಬಹಳಷ್ಟು ನಾಯಕರು ನಮ್ಮ ಜೊತೆಗಿದ್ದಾರೆ ಎಂದರು. ಇದನ್ನೂ ಓದಿ: ಎರಡೂ ಕಡೆ ಬಾಗಿಲು ಇರುವ ಬಸ್ ಇದ್ದಂತೆ ನಮ್ಮ ಪಕ್ಷ: ಸಂತೋಷ್ ಲಾಡ್
ಗೃಹಲಕ್ಷ್ಮೀ ಯೋಜನೆ ನಾಳೆಯಿಂದ ಜಾರಿಯಾಗುತ್ತಿರುವುದು ಹೆಮ್ಮೆಯ ವಿಷಯ. ಯುವ ನಾಯಕ ರಾಹುಲ್ ಗಾಂಧಿ ಅವರು ಮೈಸೂರಿನಲ್ಲಿ ಗೃಹಲಕ್ಷ್ಮಿ ಯೋಜನೆ ಉದ್ಘಾಟನೆಗೆ ಆಗಮಿಸಲಿದ್ದಾರೆ. ದೇಶದಲ್ಲಿ ಅತ್ಯಂತ ದಕ್ಷವಾದ, ವಿಸ್ತೃತವಾದ ಅತ್ಯಂತ ಪ್ರಯೋಜನಕಾರಿ ಯೋಜನೆ ಇದಾಗಿದೆ. ಒಂದೇ ಗಂಟೆ, ಒಂದೇ ದಿನ ಫಲಾನುಭವಿಗಳಿಗೆ ಹಣ ಮುಟ್ಟುವ ವ್ಯವಸ್ಥೆ ನಮ್ಮ ರಾಜ್ಯದಲ್ಲಿ ಸಂಪೂರ್ಣವಾಗಿ ಮಾಡಿದ್ದೇವೆ. ಈ ಕೆಲಸದಲ್ಲಿ ರಾಜ್ಯದಲ್ಲಿಯೇ ಗದಗ ಜಿಲ್ಲೆ ಮುಂಚೂಣಿಯಲ್ಲಿರುವಂತ ಕೆಲಸಮಾಡಿದ್ದೇವೆ ಎಂದರು.
ನಮ್ಮ ಶಕ್ತಿ ಬಲಗೊಳಿಸುವ ಮೂಲಕ ರಾಷ್ಟ್ರ ಇವತ್ತು ಬಡತನ ನಿರ್ಮೂಲನೆ ಶಬ್ಧ ಸಹ ಜಾರಿಗೊಳಿಸಿದ್ದೇವೆ ಎಂಬ ಹೆಮ್ಮೆ ನಮ್ಮ ಪಕ್ಷ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕಿದೆ. ಈ ವೇಳೆ ಕಾಂಗ್ರೆಸ್ ಮುಖಂಡರಾದ ಬಿಬಿ ಅಸೂಟಿ, ವಾಸಣ್ಣ ಕುರುಡಗಿ, ಅನಿಲ ಗರಗ, ಫಾರುಕ್ ಹುಬ್ಬಳ್ಳಿ, ಅಶೋಕ ಮಂದಾಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇದನ್ನೂ ಓದಿ: ಮೋದಿ ಹೆಸರು ಹೇಳಿಕೊಂಡು ಗೆಲ್ಲೋದಲ್ಲ – ಸ್ವಪಕ್ಷದ ವಿರುದ್ಧ ಮತ್ತೆ ಗುಡುಗಿದ ರೇಣುಕಾಚಾರ್ಯ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]