ಬೆಂಗಳೂರು: ಮುಂದಿನ ಎರಡು ಮೂರು ದಿನಗಳಲ್ಲಿ ಹೆಸರುಗಳನ್ನು ಹೈಕಮಾಂಡ್‌ಗೆ ಕಳಿಸುತ್ತೇವೆ. ಅಕಾಂಕ್ಷಿಗಳ ಹೆಸರುಗಳನ್ನು ಕಳುಹಿಸುವುದು ನಮ್ಮ ಕರ್ತವ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (Vijayendra) ತಿಳಿಸಿದರು.
ಬಿಜೆಪಿ ಕಚೇರಿಯಲ್ಲಿ ಭಾನುವಾರ ನಡೆದ ರಾಜ್ಯ ಕೋರ್ ಕಮಿಟಿ ಸಭೆ ಬಳಿಕ ಮಾತನಾಡಿದ ಅವರು, ಯಾವ್ಯಾವ ಹೆಸರುಗಳು ಚರ್ಚೆಯಾಗಿದೆಯೋ ಎಲ್ಲವನ್ನೂ ಕಳುಹಿಸುತ್ತೇವೆ. ಹಾಲಿ ಸಂಸದರ ಹೆಸರುಗಳನ್ನೂ ಒಳಗೊಂಡಂತೆ ಆಕಾಂಕ್ಷಿಗಳ ಹೆಸರನ್ನು ಕಳುಹಿಸಲಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿ ಆಡಳಿತದಲ್ಲೂ ಬಾಂಬ್ ಬ್ಲಾಸ್ಟ್ ಆಗಿತ್ತು, ಆಗ ಬೆಂಗಳೂರು ಏನಾಗಿತ್ತು: ಬಿಜೆಪಿಗರಿಗೆ ಸಿಎಂ ಪ್ರಶ್ನೆ
ಮುಂದಿನ ಲೋಕಸಭಾ ಚುನಾವಣಾ ದೃಷ್ಟಿಯಿಂದ ಇಂದು ಸಭೆ ಮಾಡಲಾಗಿದೆ. ರಾಜ್ಯದ ಅಷ್ಟು ಲೋಕಸಭಾ ಕ್ಷೇತ್ರಕ್ಕೆ ವೀಕ್ಷಕರು ಹೋಗಿದ್ರು. ವೀಕ್ಷಕರು ಹೇಳಿರೋ ಹೆಸರನ್ನ ನಾವು ಇಂದು ಚರ್ಚೆ ಮಾಡಿದ್ದೇವೆ. ಬಿಜೆಪಿ ಜೆಡಿಎಸ್ ಮೃತ್ರಿಯಾಗಿ ಚುನಾವಣೆ ಎದುರಿಸುತ್ತಿದ್ದೇವೆ. ರಾಜ್ಯದಲ್ಲಿ 28 ಕ್ಕೆ 28 ಕ್ಷೇತ್ರದಲ್ಲೂ ನಮ್ಮ ಅಭ್ಯರ್ಥಿಗಳು ಗೆಲ್ಲುವ ಸಂದರ್ಭವಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಲೋಕಸಭಾ ಚುನಾವಣೆ ಹಿನ್ನೆಲೆ ಚುನಾವಣೆ ನಿರ್ವಹಣಾ ಸಮಿತಿ ಸಭೆ ಮಾಡಲಾಯಿತು. ಕಳೆದ ಎರಡು-ಮೂರು ದಿನಗಳಿಂದ ಎಲ್ಲಾ ಲೋಕಸಭಾ ಕ್ಷೇತ್ರಕ್ಕೆ ಇಬ್ಬರು ವೀಕ್ಷಕರು ಕಳುಹಿಸಿದ್ದೇವೆ. ಅವರು ಕೊಟ್ಟಿರುವ ಹೆಸರನ್ನು ಇಂದಿನ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಚರ್ಚೆ ಆಗಿರುವ ಎಲ್ಲಾ ಹೆಸರುಗಳನ್ನು ದೆಹಲಿ ವರಿಷ್ಠರಿಗೆ ಕಳುಹಿಸಿಕೊಡುತ್ತೇವೆ. ಬಿಜೆಪಿ ಹಾಗೂ ಜೆಡಿಎಸ್ ಒಂದಾಗಿ ಚುನಾವಣೆ ಎದುರಿಸುತ್ತೇವೆ. ಎಲ್ಲಾ 28 ಕ್ಷೇತ್ರ ಗೆಲ್ಲುವ ಮುಖೇನ ಹೊಸ ದಾಖಲೆ ನಿರ್ಮಾಣ ಮಾಡುತ್ತೇವೆ ಎಂದು ಮಾತನಾಡಿದರು. ಇದನ್ನೂ ಓದಿ: ಸೋಮವಾರ ಕಲಬುರಗಿಗೆ ಅಶೋಕ್ – ಹತ್ಯೆಗೊಳಗಾದ ಬಿಜೆಪಿ ಮುಖಂಡರ ಕುಟುಂಬ ಸದಸ್ಯರ ಭೇಟಿ
ನಮ್ಮ ಜವಾಬ್ದಾರಿ ಇರುವಂತದ್ದು ಆಕಾಂಕ್ಷಿಗಳ ಜೊತೆಗೆ ಚರ್ಚೆ ಮಾಡಿ ಹೆಸರು ಫೈನಲ್ ಮಾಡಲಾಗಿದೆ. ಇಂತಿಷ್ಟು ಹೆಸರು ಅಂತ ಚರ್ಚೆ ಆಗಿಲ್ಲ. ಚರ್ಚೆ ಆಗಿರುವ ಹೆಸರು ಹೈಕಮಾಂಡ್ ನಾಯಕರ ಮುಂದೆ ಇಡುತ್ತೇವೆ. ಎರಡನೇ ಲೀಸ್ಟ್ನಲ್ಲಿ ಎಷ್ಟು ಹೆಸರು ಘೋಷಣೆ ಆಗುತ್ತೆ ಅಂತ ಕಾದುನೋಡಬೇಕು ಎಂದರು.