ಕೋಲ್ಕತ್ತಾ: ಮೂರನೇ ಹಂತದ ಲೋಕಸಭಾ ಚುನಾವಣೆಯ ವೇಳೆ ಪಶ್ಚಿಮ ಬಂಗಾಳದ (West Bengal) ಮುರ್ಷಿದಾಬಾದ್‌ನ ಜಂಗಿಪುರದ ಮತಗಟ್ಟೆಯಲ್ಲಿ ಟಿಎಂಸಿ (TMC) ಹಾಗೂ ಬಿಜೆಪಿ (BJP) ನಾಯಕರ ನಡುವೆ ಗಲಾಟೆಯಾಗಿದೆ.
ಟಿಎಂಸಿ ಬೂತ್ ಅಧ್ಯಕ್ಷ ಗೌತಮ್ ಘೋಷ್ ಮತ್ತು ಬಿಜೆಪಿ ಅಭ್ಯರ್ಥಿ ಧನಂಜಯ್ ಘೋಷ್ ನಡುವೆ ಘರ್ಷಣ ನಡೆದಿದೆ. ಘೋಷ್ ಜಂಗಿಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಜಂಗೀಪುರ ಲೋಕಸಭಾ ಕ್ಷೇತ್ರದಲ್ಲಿ ತೃಣಮೂಲ ಕಾಂಗ್ರೆಸ್ ವಿರುದ್ಧ ಮತದಾರರ ಮೇಲೆ ಪ್ರಭಾವ ಬೀರಿದ ಆರೋಪಗಳು ಕೇಳಿಬಂದಿದ್ದವು. ಇದನ್ನೂ ಓದಿ: ಮೋದಿ Vs ದೀದಿ AI ಡ್ಯಾನ್ಸ್ ವಿಡಿಯೋ ವಾರ್ – ಸರ್ವಾಧಿಕಾರಿ ಯಾರು? #PollHumour ವಿಡಿಯೋ ವೈರಲ್
ಗೌತಮ್ ಘೋಷ್ ಬಿಜೆಪಿ ಅಭ್ಯರ್ಥಿಯೊಂದಿಗೆ ತೀವ್ರ ಮಾತಿನ ಚಕಮಕಿ ನಡೆಸಿದರು. ಮಿರ್ಗ್ರಾಮ್ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 44 ರಲ್ಲಿ ಬಿಜೆಪಿ ಅಭ್ಯರ್ಥಿ ಮತ್ತು ಬ್ಲಾಕ್ ತೃಣಮೂಲ ಅಧ್ಯಕ್ಷ ಗೌತಮ್ ಘೋಷ್ ಇಬ್ಬರೂ ಇದ್ದರು.
ಗಲಾಟೆ ಕುರಿತು ಮಾತನಾಡಿದ ಬಿಜೆಪಿ ಅಭ್ಯರ್ಥಿ, ನಾನು ಇಲ್ಲಿ ಅಭ್ಯರ್ಥಿಯಾಗಿ ಬಂದಿದ್ದೇನೆ. ಬೂತ್‌ನ ನೂರು ಮೀಟರ್ ವ್ಯಾಪ್ತಿಯಲ್ಲಿ ಬ್ಲಾಕ್ ತೃಣಮೂಲ ಕಾಂಗ್ರೆಸ್ ಅಧ್ಯಕ್ಷರು ನನಗೆ ಬೆದರಿಕೆ ಹಾಕಿದ್ದಾರೆ. ಅಭ್ಯರ್ಥಿಯನ್ನೇ ಹೀಗೆ ನಡೆಸಿಕೊಂಡರೆ, ಸಾಮಾನ್ಯ ಜನರಿಗೆ ಏನಾಗಬಹುದು. ಈ ಬಗ್ಗೆ ನಾವು ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ತವರಲ್ಲಿ ಮತದಾನ ಮಾಡಿದ ಪ್ರಧಾನಿ ಮೋದಿ
ಬಿಜೆಪಿ ಅಭ್ಯರ್ಥಿ ವಿರುದ್ಧ ಟಿಎಂಸಿ ಕೂಡ ತಮ್ಮ ಬ್ಲಾಕ್ ಅಧ್ಯಕ್ಷರನ್ನು ಬೆದರಿಸಿ ಹಲ್ಲೆ ಮಾಡಿದ ಆರೋಪದ ಮೇಲೆ ದೂರು ದಾಖಲಿಸುತ್ತಿದೆ. ಅವರು ಸಿಆರ್‌ಪಿಎಫ್ ಸಿಬ್ಬಂದಿಯ ಸಹಾಯದಿಂದ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.