ಲೋಕಸಭೆ ಚುನಾವಣೆಯ (Loksabha Elections) 5ನೇ ಹಂತದಲ್ಲಿ ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಮತದಾನ ನಡೆಯುತ್ತಿದೆ. ಇದೀಗ ಬಾಲಿವುಡ್ ನಟ-ನಟಿಯರು ಕೂಡ ಮತದಾನ ಮಾಡಿದ್ದಾರೆ. ನಿಮ್ಮ ಹಕ್ಕನ್ನು ಚಲಾಯಿಸಿ ಎಂದು ಅಭಿಮಾನಿಗಳಿಗೂ ಮನವಿ ಮಾಡಿದ್ದಾರೆ. ಮಹಾರಾಷ್ಟ್ರದ ಮುಂಬೈನಲ್ಲಿ ಜಾನ್ವಿ ಕಪೂರ್, ರಾಜ್‌ಕುಮಾರ್ ರಾವ್, ನಿರ್ಮಾಪಕ ಬೋನಿ ಕಪೂರ್, ಫರ್ಹಾನ್ ಅಖ್ತರ್, ನಟ ಗೋವಿಂದ್, ನೇಹಾ ಧೂಫಿಯಾ ಸೇರಿದಂತೆ ಅನೇಕರು ವೋಟ್ ಮಾಡಿದ್ದಾರೆ.
View this post on Instagram
Advertisement
‘ದೇವರ’ ಚಿತ್ರದ ನಟಿ ಜಾನ್ವಿ ಕಪೂರ್ (Janhvi Kapoor) ಆಗಮಿಸಿ ವೋಟ್ ಮಾಡಿದ್ದಾರೆ. ಮತದಾನದ ಬಳಿಕ ಮತದಾರರಿಗೆ ದಯವಿಟ್ಟು ಬನ್ನಿ ವೋಟ್ ಮಾಡಿ ಎಂದು ನಟಿ ಮನವಿ ಮಾಡಿದ್ದಾರೆ. ಹಿರಿಯ ನಟ ಧಮೇಂದ್ರ, ಹೇಮಾ ಮಾಲಿನಿ ವೋಟ್ ಮಾಡಿದ್ದು, ಉತ್ತಮ ಸಮಾಜಕ್ಕಾಗಿ ವೋಟ್ (Vote) ಮಾಡುವಂತೆ ಕೇಳಿಕೊಂಡಿದ್ದಾರೆ. ಇದನ್ನೂ ಓದಿ:ಕಂದೀಲು ತಂಡದಿಂದ ಕೌಮುದಿ: ಅಕ್ಷತಾ ಪಾಂಡವಪುರ ಲೀಡ್ ರೋಲ್
Advertisement
Advertisement
ವಿದ್ಯಾ ಬಾಲನ್, ಸುನೀಲ್, ಆಮೀರ್ ಖಾನ್ ಪುತ್ರ, ಸಾನ್ಯ ಮಲ್ಹೋತ್ರಾ ಕೂಡ ವೋಟ್ ಮಾಡಿದ ಬಳಿಕ ಇಂದು ಬಿಡುವು ಮಾಡಿಕೊಂಡು ತಪ್ಪದೇ ಬಂದು ಮತದಾನ ಮಾಡಿ ಎಂದು ಮಾತನಾಡಿದ್ದಾರೆ. ಎಲ್ಲರೂ ಮತ ಚಲಾಯಿಸಿ, ಪ್ರತಿಯೊಂದು ವೋಟ್ ಕೂಡ ವಿಚಾರವಾಗುತ್ತದೆ. ಬದಲಾವಣೆ ತರುತ್ತದೆ ಎಂದು ಶಾಹಿದ್ ಕಪೂರ್ ಮನವಿ ಮಾಡಿದ್ದಾರೆ.
Advertisement
View this post on Instagram
ಅಂದಹಾಗೆ, ಇಂದು ಲೋಕಸಭೆಗೆ ಐದನೇ ಹಂತದಲ್ಲಿ ಮತದಾನ ನಡೆಯುತ್ತಿದೆ. 6 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿನ ಒಟ್ಟು 49 ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೂ ಮತದಾನ ನಡೆಯಲಿದೆ. ಬಿಹಾರದ 5, ಜಮ್ಮು ಮತ್ತು ಕಾಶ್ಮೀರದ 1, ಜಾರ್ಖಂಡ್‌ನ 3, ಲಡಾಕ್‌ನ 1, ಮಹಾರಾಷ್ಟ್ರದ 13, ಒಡಿಶಾದ 5, ಉತ್ತರ ಪ್ರದೇಶದ 14 ಮತ್ತು ಪಶ್ಚಿಮ ಬಂಗಾಳದ 7 ಸ್ಥಾನಗಳಿಗೆ ಮತದಾನ ನಡೆಯಲಿದೆ. ಅಮೇಥಿ, ರಾಯ್ ಬರೇಲಿ, ಲಕ್ನೋ, ಕೈಸರ್ ಗಂಜ್, ಸರನ್ ಮತ್ತು ಮುಂಬೈನ ಎಲ್ಲಾ ಕ್ಷೇತ್ರಗಳು ಹೈವೊಲ್ಟೇಜ್ ಕ್ಷೇತ್ರಗಳಾಗಿವೆ.
ಉತ್ತರ ಪ್ರದೇಶದ ಅಮೇಥಿಯಿಂದ ಸ್ಮೃತಿ ಇರಾನಿ ಮತ್ತು ಕೆಎಲ್ ಶರ್ಮಾ, ರಾಯ್ ಬರೇಲಿಯಿಂದ ರಾಹುಲ್ ಗಾಂಧಿ ಮತ್ತು ದಿನೇಶ್ ಪ್ರತಾಪ್ ಸಿಂಗ್, ಲಕ್ನೋದಿಂದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಹಾರದ ಸರಣ್‌ಂದ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ, ಮಹಾರಾಷ್ಟ್ರ ಕಲ್ಯಾಣದಿಂದ ಸಿಎಂ ಏಕನಾಥ್ ಶಿಂಧೆ ಅವರ ಪುತ್ರ ಡಾ.ಶ್ರೀಕಾಂತ್ ಶಿಂಧೆ, ಮುಂಬೈ ಉತ್ತರದಿಂದ ಕೇಂದ್ರ ಸಚಿವ ಪಿಯೂಷ್ ಗೋಯಲ್, ಹಿರಿಯ ವಕೀಲ ಉಜ್ವಲ್ ನಿಕಮ್, ಮಧ್ಯ ಮುಂಬೈ ವರ್ಷಾ ಗಾಯಕ್ವಾಡ್ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.
ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ದಿನೇಶ್ ಪ್ರತಾಪ್ ಸಿಂಗ್, ರಾಯ್ ಬರೇಲಿ ಬಿಜೆಪಿ ಅಭ್ಯರ್ಥಿ ದಿನೇಶ್ ಪ್ರತಾಪ್ ಸಿಂಗ್, ಮುಂಬೈ ಉತ್ತರ ಬಿಜೆಪಿ ಅಭ್ಯರ್ಥಿ ಪಿಯೂಷ್ ಗೊಯೇಲ್, ಅಮಿರ್ ಪುರ್ ನಲ್ಲಿ ಕೇಂದ್ರ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ಹಾಗೂ ಕೈಸರಗಂಜ್‌ನಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಈಗಾಗಲೇ ಮತದಾನ ಮಾಡಿದ್ದಾರೆ. ಇನ್ನು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಕುಟುಂಬ ಸಮೇತರಾಗಿ ಮುಂಬೈನಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ.