ನವದೆಹಲಿ: ಲೋಕಸಭಾ ಚುನಾವಣೆಯ (Loksabha Elections 2024) 4 ನೇ ಹಂತದ ಮತದಾನ ಇಂದು ಪ್ರಾರಂಭವಾಗುತ್ತಿದ್ದಂತೆ ಪ್ರಜಾಪ್ರಭುತ್ವವನ್ನು ಬಲಪಡಿಸಲು ಜನರು ತಮ್ಮ ಕರ್ತವ್ಯವನ್ನು ಚಲಾಯಿಸುವಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಕರೆ ನೀಡಿದ್ದಾರೆ. ಈ ಕ್ಷೇತ್ರಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಲಿದ್ದಾರೆ ಎಂಬ ವಿಶ್ವಾಸವನ್ನು ಪ್ರಧಾನಿ ವ್ಯಕ್ತಪಡಿಸಿದರು.
In today’s 4th Phase of the Lok Sabha elections, 96 seats across 10 States and UTs are going to the polls. I am sure people in these constituencies will vote in large numbers and the young voters as well as women voters will power this surge in voting. Come, let’s all do our duty…
— Narendra Modi (@narendramodi) May 13, 2024
Advertisement
ಈ ಸಂಬಂಧ ತನ್ನ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಪ್ರಧಾನಿ, ಲೋಕಸಭಾ ಚುನಾವಣೆಯ ಇಂದಿನ 4 ನೇ ಹಂತದಲ್ಲಿ, 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ 96 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಈ ಕ್ಷೇತ್ರಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುತ್ತಾರೆ. ಈ ಮೂಲಕ ಯುವ ಮತದಾರರು ಮತ್ತು ಮಹಿಳಾ ಮತದಾರರು ಶಕ್ತಿ ನೀಡಲಿದ್ದಾರೆ ಎಂದು ನನಗೆ ಖಾತ್ರಿಯಿದೆ. ಬನ್ನಿ ಎಲ್ಲರೂ ನಮ್ಮ ಕರ್ತವ್ಯವನ್ನು ಮಾಡೋಣ ಮತ್ತು ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸೋಣ ಎಂದು ಹೇಳಿದ್ದಾರೆ.
Advertisement
Advertisement
ಇದೇ ವೇಳೆ ವಿಧಾನಸಭಾ ಚುನಾವಣೆಯಲ್ಲಿಯೂ ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಆಂಧ್ರಪ್ರದೇಶದ (Andhrapradesh) ಜನರಿಗೆ ಕರೆ ನೀಡಿದ ಪ್ರಧಾನಿ, ವಿಶೇಷವಾಗಿ ಮೊದಲ ಬಾರಿಗೆ ಮತದಾರರಲ್ಲಿ ಮನವಿ ಮಾಡಿದರು. ನಮ್ಮ ಪ್ರಜಾಸತ್ತಾತ್ಮಕ ಮನೋಭಾವವನ್ನು ಇನ್ನಷ್ಟು ಹೆಚ್ಚಿಸಲಿ ಎಂದರು. ಇದನ್ನೂ ಓದಿ: ಸೋಮವಾರ 4ನೇ ಹಂತದ ಚುನಾವಣೆ – ಯಾವ ರಾಜ್ಯ, ಎಷ್ಟು ಕ್ಷೇತ್ರಗಳಲ್ಲಿ ಮತದಾನ? ಕಣದಲ್ಲಿರೋ ಪ್ರಮುಖರು ಯಾರು?
Advertisement
Urging the people of Andhra Pradesh, especially first time voters, to vote in record numbers in the Assembly Elections. May these polls further enhance our democratic spirit.
— Narendra Modi (@narendramodi) May 13, 2024
ಒಡಿಶಾದಲ್ಲಿ (Odisha) ಅಸೆಂಬ್ಲಿ ಚುನಾವಣೆಗಳು ಪ್ರಾರಂಭವಾಗುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಒಡಿಶಾದ ಜನರಿಗೂ ನರೇಂದ್ರ ಮೋದಿ ಕರೆ ನೀಡಿದರು. ಒಡಿಶಾದಲ್ಲಿ ಇಂದು ವಿಧಾನಸಭೆ ಚುನಾವಣೆ ಆರಂಭವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ನಾನು ಈ ರಾಜ್ಯದ ಜನತೆಗೆ ಕರೆ ನೀಡುತ್ತೇನೆ. ನಿಮ್ಮ ಮತವೇ ನಿಮ್ಮ ಧ್ವನಿ ಎಂದು ಪ್ರಧಾನಿ ಹೇಳಿದರು.