ಬೆಂಗಳೂರು: ಉತ್ತರ ಕರ್ನಾಟಕದ (North Karnataka) 14 ಲೋಕಸಭಾ ಕ್ಷೇತ್ರಗಳಿಗೆ (Lok Sabha Election) ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಮಧ್ಯಾಹ್ನ 3 ಗಂಟೆಯ ವೇಳೆಗೆ 54.20% ಮತದಾನ ನಡೆದಿದೆ.
ಮಧ್ಯಾಹ್ನ 1 ಗಂಟೆಯ ವೇಳೆ ರಾಜ್ಯದಲ್ಲಿ 41.59% ಮತದಾನ ನಡೆದಿತ್ತು. ನಂತರದ ಎರಡು ಗಂಟೆಯಲ್ಲಿ 12.61% ಮತದಾನ ದಾಖಲಾಗಿದೆ. ಇದನ್ನೂ ಓದಿ: ಸಂತ್ರಸ್ತೆಯನ್ನು ತೋಟದ ಮನೆಯಿಂದ ರಕ್ಷಿಸಿದ್ದು ಸಾಬೀತಾದ್ರೆ ರಾಜಕೀಯ ನಿವೃತ್ತಿ: ಸಾರಾ ಮಹೇಶ್
Advertisement
ಮಧ್ಯಾಹ್ನ 3 ಗಂಟೆಯ ವೇಳೆ ಕರ್ನಾಟಕದಲ್ಲಿ 54.20% ಮತದಾನ ದಾಖಲು#LokSabhaElection2024 #KarnatakaElections #LokSabhaElections2024 #GeneralElections2024 #IndiaElections2024 #Phase3 pic.twitter.com/9SJxufJykv
— PublicTV (@publictvnews) May 7, 2024
Advertisement
ಕ್ಷೇತ್ರಗಳ ಪೈಕಿ ಚಿಕ್ಕೋಡಿಯಲ್ಲಿ (Chikkodi) ಅತಿ ಹೆಚ್ಚು 59.65% ಮತದಾನ ನಡೆದರೆ ಕಲಬುರಗಿಯಲ್ಲಿ (Kalaburagi) 47.67% ಮತದಾನ ನಡೆದಿದೆ. ಬೆಳಗ್ಗೆ 11 ಗಂಟೆಯವರೆಗೆ ರಾಜ್ಯದಲ್ಲಿ 24.48% ಮತದಾನ ನಡೆದಿತ್ತು. ಇದನ್ನೂ ಓದಿ: ಡಿಸಿಎಂ ಡಿಕೆಶಿಯನ್ನು ಕೂಡಲೇ ಕ್ಯಾಬಿನೆಟ್‌ನಿಂದ ಕೈಬಿಡಬೇಕು : ಹೆಚ್‌ಡಿಕೆ ಆಗ್ರಹ
Advertisement
2019ರ ಚುನಾವಣೆಯಲ್ಲಿ ಈ ಎಲ್ಲಾ ಕ್ಷೇತ್ರಗಳನ್ನು ಬಿಜೆಪಿ (BJP) ಗೆದ್ದುಕೊಂಡಿತ್ತು. ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ (Congress) ಸರ್ಕಾರ ಅಧಿಕಾರದಲ್ಲಿರುವ ಕಾರಣ ಉತ್ತರ ಕರ್ನಾಟಕದ ಈ ಕ್ಷೇತ್ರಗಳಲ್ಲಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ನೇರಾ ಪೈಪೋಟಿ ನಡೆಯುತ್ತಿದೆ.