ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಿಂದ (Mandya Lok Sabha Election) ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಸ್ಪರ್ಧೆ ಮಾಡುವುದು ಬಹುತೇಕ ಅಂತಿಮವಾಗಿದ್ದು ಅಧಿಕೃತ ಘೋಷಣೆ ಬಾಕಿಯಿದೆ.
ಮಾಧ್ಯಮಗಳ ಜೊತೆ ಮಾತನಾಡಿದ ಕುಮಾರಸ್ವಾಮಿ ಇಂದು ಸಂಜೆ ಮಂಡ್ಯ ಭಾಗದ ಜೆಡಿಎಸ್ (JDS) ನಾಯಕರ ಸಭೆಯನ್ನು ಕರೆಯುತ್ತೇನೆ. ಈ ಸಭೆಯ ಬಳಿಕ ಅಂತಿಮವಾಗಿ ಅಭ್ಯರ್ಥಿಯ ಹೆಸರನ್ನು ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದರು.
Advertisement
Advertisement
ಜೆಡಿಎಸ್‌ನ ಹೃದಯ ಭಾಗ ಮಂಡ್ಯ. ಕಳೆದ ಚುನಾವಣೆ ನಮಗೆ ನೈತಿಕ ಸೋಲು ಅಲ್ಲ. ಈ ಚುನಾವಣೆ ಮೂಲಕ ಜೆಡಿಎಸ್ ಮುಗಿಸುತ್ತೇವೆ ಎನ್ನುವ ದುರಹಂಕಾರದ ಮಾತಿಗೆ ಚುನಾವಣೆಯಲ್ಲಿ ಉತ್ತರ ಕೊಡುತ್ತೇವೆ ಎಂದರು. ಇದನ್ನೂ ಓದಿ: ನಮ್ಮ ವರಿಷ್ಠರು ಸಂಸದೆ ಸುಮಲತಾರ ಮೇಲೆ ಅಪಾರ ಗೌರವ ಇಟ್ಟುಕೊಂಡಿದ್ದಾರೆ: ವಿಜಯೇಂದ್ರ
Advertisement
ಬದುಕಿರುವರೆಗೂ ನಾವು ರಾಮನಗರ ಜಿಲ್ಲೆಯ ಅಭಿವೃದ್ಧಿ ಕೈ ಬಿಡುವುದಿಲ್ಲ. ರಾಮನಗರ, ಚನ್ನಪಟ್ಟಣ ಜನತೆಗೆ ಮನವಿ ಮಾಡುತ್ತೇನೆ. ಈ ಪಕ್ಷ ಉಳಿಸಲು 3 ಬಾರಿ ಹೃದಯ ಚಿಕಿತ್ಸೆ, ಎರಡು ಬಾರಿ ಮೆದುಳು ಚಿಕಿತ್ಸೆ ನಡೆದಿದೆ. ಇಷ್ಟು ಆದರೂ ಬದುಕಿದರೆ ನಾಡಿಗೆ ಏನೋ ಸೇವೆ ಬೇಕು ಅಂತ ದೇವರು ಬದುಕಿಸಿದ್ದಾನೆ. ಈ ಪಕ್ಷ ಉಳಿಸೋದು ನಿಮ್ಮ ಕೈಯಲ್ಲಿ ಇದೆ. ಇದು ರೈತರ ಪಕ್ಷ ಎಂದು ಹೇಳಿದರು.
Advertisement
ಬಿಜೆಪಿಯವರು ಮೂರು ಕ್ಷೇತ್ರಗಳನ್ನು ನಮಗೆ ಬಿಟ್ಟು ಕೊಟ್ಟಿದ್ದಾರೆ. ಹಾಸನ ಅಭ್ಯರ್ಥಿಯ ಬಗ್ಗೆ ನಮ್ಮ ವರಿಷ್ಠರಾದ ದೇವೇಗೌಡರು ತೀರ್ಮಾನ ತೆಗೆದುಕೊಂಡಿದ್ದಾರೆ. ಕೋಲಾರದಲ್ಲಿ ಮೂವರ ಹೆಸರು ಇದೆ. ಇದರ ಜೊತೆ ಬಿಜೆಪಿಯ ಹಾಲಿ ಸಂಸದ ಮುನಿಸ್ವಾಮಿ ಅವರು ಕೆಲವರ ಬಗ್ಗೆ ಹೇಳಿದ್ದಾರೆ. ಹೀಗಾಗಿ ಪಕ್ಷದ ಸಭೆ ನಡೆಸಿ ಹೆಸರನ್ನು ಅಂತಿಮಗೊಳಿಸುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಆರ್‌ಸಿಬಿ ಪಂದ್ಯ ಗೆದ್ದ ಖುಷಿಯಲ್ಲಿ ಫ್ಯಾಮಿಲಿಗೆ ವೀಡಿಯೋ ಕರೆ ಮಾಡಿ ಕೊಹ್ಲಿ ಮಾತು
ಹೆಚ್‌ಡಿ ಕುಮಾರಸ್ವಾಮಿ ಲೋಕಸಭಾ ಕಣಕ್ಕೆ ಇಳಿಯುವುದು ಹೊಸದೆನಲ್ಲ ಈ ಹಿಂದೆ 1996ರಲ್ಲಿ ಕನಕಪುರದಿಂದ ಆಯ್ಕೆ ಆಗಿದ್ದರು. 2009ರಲ್ಲಿ ಬೆಂಗಳೂರು ಗ್ರಾಮಾಂತರದಿಂದ ಜಯಗಳಿಸಿದ್ದರು. 2014ರ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸಿ ಸೋತಿದ್ದರು.