ಭಯೋತ್ಪಾದಕರಿಗೆ ಕಾಂಗ್ರೆಸ್‌ ಬಿರಿಯಾನಿ ತಿನ್ನಿಸುತ್ತಿದೆ: ಯೋಗಿ ಆದಿತ್ಯನಾಥ್‌ ಟೀಕೆ

Public TV
2 Min Read
yogi adityanath

ಜೈಪುರ: ಕಾಂಗ್ರೆಸ್ ಬಡವರನ್ನು ಹಸಿವಿನಿಂದ ಸಾಯಿಸುತ್ತದೆ ಆದರೆ ಭಯೋತ್ಪಾದಕರಿಗೆ ಬಿರಿಯಾನಿ ತಿನ್ನಿಸುತ್ತದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಹೇಳಿದ್ದಾರೆ.

ಬಿಜೆಪಿ ಅಭ್ಯರ್ಥಿ ಸುಮೇಧಾನಂದ ಸರಸ್ವತಿ (Sumedhanand Saraswati) ಪರ ಲೋಕಸಭಾ ಚುನಾವಣಾ ಪ್ರಚಾರದ (Loksabha Election Campaign) ಭಾಗವಾಗಿ ರಾಜಸ್ಥಾನದ ಸಿಕರ್ ಕ್ಷೇತ್ರದಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್ ದೇಶದ ದೊಡ್ಡ ಸಮಸ್ಯೆ.‌ ಕರ್ಫ್ಯೂಗಳನ್ನು ಜಾರಿಗೊಳಿಸುವುದು ಕಾಂಗ್ರೆಸ್‌ನವರ ಡಿಎನ್‌ಎಯಲ್ಲಿದೆ ಎಂದು ವಾಗ್ದಾಳಿ ನಡೆಸಿದರು.

congress flag

ಭಗವಾನ್ ರಾಮ ಮತ್ತು ಕೃಷ್ಣರಂತಹ ಪೂಜ್ಯ ವ್ಯಕ್ತಿಗಳ ಅಸ್ತಿತ್ವವನ್ನು ಪ್ರಶ್ನಿಸಿದ ಕಾಂಗ್ರೆಸ್ ಪಕ್ಷವು ಅಯೋಧ್ಯೆ ರಾಮಮಂದಿರದಂತಹ (Ayodhya Ram Mandir) ಸ್ಮಾರಕ ಯೋಜನೆಗಳನ್ನು ಕೈಗೊಳ್ಳಲು ಸಮರ್ಥವಾಗಿಲ್ಲ ಎಂದು ನಂಬುತ್ತಾರೆ. ತನ್ನ ಆಡಳಿತದಲ್ಲಿ ಕಾಂಗ್ರೆಸ್ ಜನರ ಹಕ್ಕುಗಳನ್ನು ಕಸಿದುಕೊಂಡಿತು. ಈಗ ರಾಷ್ಟ್ರದಾದ್ಯಂತ “ಫಿರ್ ಏಕ್ ಬಾರ್, ಮೋದಿ ಸರ್ಕಾರ್ (ಮತ್ತೊಮ್ಮೆ ಮೋದಿ ಸರ್ಕಾರ)” ಎಂಬ ಒಂದೇ ಒಂದು ಘೋಷಣೆ ಇದೆ ಎಂದು ರಾಜಸ್ಥಾನ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ದೌಸಾ ಜನರಿಂದ ತನಗೆ ದೊರೆತ ಬೆಂಬಲವನ್ನು ನೆನಪಿಸಿಕೊಳ್ಳುತ್ತಾ ಆದಿತ್ಯನಾಥ್ ಹೇಳಿದರು. ಇದನ್ನೂ ಓದಿ: ತಾಲಿಬಾನ್‍ಗಳ ಪ್ರೇರಣೆ, ನಗರ ನಕ್ಸಲಿಯರ ಸಹಾಯದಿಂದ ಕಾಂಗ್ರೆಸ್ ಪ್ರಣಾಳಿಕೆ ಸಿದ್ಧಪಡಿಸಿದೆ: ಸಿಟಿ ರವಿ

ಭಾರತದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿದರು. ಪ್ರಧಾನಿ ಮೋದಿಯವರ ಆಡಳಿತದಲ್ಲಿ ಗಡಿಗಳನ್ನು ಸುರಕ್ಷಿತಗೊಳಿಸಲಾಗಿದೆ. ಈ ಹಿಂದೆ ಭಯೋತ್ಪಾದಕ ಚಟುವಟಿಕೆಗಳು ನಡೆದಿದ್ದವು. ಕಾಶ್ಮೀರದಲ್ಲಿ ಭಯೋತ್ಪಾದನೆ, ನಕ್ಸಲಿಸಂ ಮತ್ತು ಕಲ್ಲು ತೂರಾಟದ ಘಟನೆಗಳನ್ನು ನಿಭಾಯಿಸುವಲ್ಲಿ ಭಾರತ ಸರ್ಕಾರ ಯಶಸ್ವಿಯಾಗಿದೆ. ಈಗ ಯಾರೂ ಭಯೋತ್ಪಾದನೆಯನ್ನು ಅನುಮೋದಿಸಲು ಧೈರ್ಯ ಮಾಡುತ್ತಿಲ್ಲ ಎಂದರು.

Amarnath Yatra

ಕಾಶ್ಮೀರವು ಈಗ ಅಭಿವೃದ್ಧಿ ಕಾರ್ಯಕ್ರಮಗಳೊಂದಿಗೆ ಅಭಿವೃದ್ಧಿ ಹೊಂದುತ್ತಿದೆ. ಹೀಗಾಗಿ ಗಣನೀಯ ಸಂಖ್ಯೆಯಲ್ಲಿ ಪ್ರವಾಸಿಗರು ಈ ಪ್ರದೇಶಕ್ಕೆ ಭೇಟಿ ನೀಡುತ್ತಾರೆ. ಮಾತಾ ವೈಷ್ಣೋದೇವಿ ಮತ್ತು ಅಮರನಾಥ ಯಾತ್ರೆಗೆ ತೀರ್ಥಯಾತ್ರೆಗಳಲ್ಲಿ ಸುರಕ್ಷಿತವಾಗಿ ಭಾಗವಹಿಸುತ್ತಾರೆ ಎಂದು ಅವರು ಹೇಳಿದ ಅವರು, ಭಾರತವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಪ್ರಧಾನಿ ಮೋದಿಗೆ ಮತ ಹಾಕಬೇಕು ಎಂದು ವಿನಂತಿಸಿಕೊಂಡರು.

ರಾಜಸ್ಥಾನದಲ್ಲಿ ಏಪ್ರಿಲ್ 19 ಮತ್ತು ಏಪ್ರಿಲ್ 26 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.

Share This Article