400 ಕ್ಕೂ ಅಧಿಕ ಸ್ಥಾನ ಬಂದ್ರೆ ಮಥುರಾ, ಕಾಶಿಯಲ್ಲಿ ಭವ್ಯ ಮಂದಿರ ನಿರ್ಮಾಣ: ಅಸ್ಸಾಂ ಸಿಎಂ

Public TV
1 Min Read
Assam CM Himanta Biswa Sarma

ನವದೆಹಲಿ: ಬಿಜೆಪಿಗೆ 300 ಸ್ಥಾನಗಳು ಬಂದಾಗ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಿದೆ. 400 ಅಧಿಕ ಸ್ಥಾನಗಳು ಬಂದರೆ ಮಥುರಾದ ಶ್ರೀಕೃಷ್ಣ ಜನ್ಮಭೂಮಿಯಲ್ಲಿ ದೇವಸ್ಥಾನ, ಜ್ಞಾನವಾಪಿ ಮಸೀದಿಯ ಜಾಗದಲ್ಲಿ ಭವ್ಯ ಬಾಬಾ ವಿಶ್ವನಾಥ ಮಂದಿರ ನಿರ್ಮಾಣವಾಗಲಿದೆ ಎಂದು ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ (Himant Boswa Sarma) ಹೇಳಿರುವ ವೀಡಿಯೋ ವೈರಲ್ ಆಗಿದೆ.

ಚುನಾವಣಾ ಭಾಷಣವೊಂದರಲ್ಲಿ ಮಾತನಾಡಿದ ಅವರು, 400 ಕ್ಕೂ ಅಧಿಕ ಸ್ಥಾನಗಳು ಯಾಕೆ ಬೇಕು ಎಂದು ಕಾಂಗ್ರೆಸ್ (Congress) ನಾಯಕರು ಪ್ರಶ್ನೆ ಎತ್ತಿದ್ದಾರೆ. ಇದಕ್ಕೆ ಉತ್ತರ ನೀಡುವುದು ಸರಿ ಎಂದು ನನಗೂ ಅನಿಸಿತು. ಅದಕ್ಕಾಗಿ ಹೇಳುತ್ತಿದ್ದೇನೆ ಈ ಹಿಂದೆ ದೇಶದಲ್ಲಿ ಮೊಘಲರು ಮಾಡಿರುವುದನ್ನು ಸರಿಪಡಿಸಬೇಕಿದೆ, ಸಾಕಷ್ಟು ಕೆಲಸ ಬಾಕಿ ಇದೆ ಎಂದರು.

ಕಳೆದ ಹತ್ತು ವರ್ಷಗಳ ಹಿಂದೆ ಅಯೋಧ್ಯೆಯಲ್ಲಿ ರಾಮ ಮಂದಿರ (Ayodhya Rammandir) ನಿರ್ಮಾಣವಾಗುತ್ತದೆ ಎಂದರೆ ಯಾರು ನಂಬುತ್ತಿರಲಿಲ್ಲ. ಈಗ ಮೋದಿ ಸರ್ಕಾರದ ಅವಧಿಯಲ್ಲಿ ಅದಾಗಿದೆ. ಈಗ ಮಥುರಾ (Mathura) ಮತ್ತು ಕಾಶಿಯಲ್ಲಿ (Kashi) ಭವ್ಯ ನಿರ್ಮಾಣದ ಬಗ್ಗೆ ಜನರಲ್ಲಿ ನಂಬಿಕೆ ಇದೆ. 400 ಸ್ಥಾನಗಳು ಬಂದಲ್ಲಿ ಅದು ಕಾರ್ಯರೂಪಕ್ಕೆ ಬರಲಿದೆ ಎಂದರು. ಇದನ್ನೂ ಓದಿ: 380ರ ಪೈಕಿ ಈಗಾಗಲೇ ಮೋದಿ 270 ಗೆದ್ದಿದ್ದಾರೆ : ಅಮಿತ್‌ ಶಾ ವಿಶ್ವಾಸ

ಕಾಂಗ್ರೆಸ್ ಆಡಳಿತದಲ್ಲಿ ಸಂಸತ್ತಿನಲ್ಲಿ ಪಾಕ್‌ ಆಕ್ರಮಿತ ಕಾಶ್ಮೀರ (POK) ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಆದರೆ ಕಳೆದೊಂದು ವಾರದಿಂದ ಗಮನಿಸಬಹುದು ಅಲ್ಲಿನ ಜನರು ಭಾರತ ತ್ರಿವರ್ಣ ಧ್ವಜ ಹಿಡಿದು ಭಾರತ ಸೇರಲು ಉತ್ಸುಕರಾಗಿದ್ದಾರೆ. ಈಗ ಶೀಘ್ರದಲ್ಲೇ ಪಿಒಕೆ ನಮ್ಮ ದೇಶದ ಭಾಗವಾಗಲಿದೆ 400 ಅಧಿಕ ಸೀಟುಗಳು ಬಂದಲ್ಲಿ ಪಿಓಕೆ ಕೂಡಾ ಭಾರತದ ಭಾಗವಾಗಲಿದೆ ಎಂದು ಹೇಳಿದರು‌.

Share This Article