ಮಂಗಳೂರು: ಲೋಕಸಭಾ ಚುನಾವಣೆಯ (Loksabha Elections 2024) ಮೊದಲ ಹಂತದ ಮತದಾನ ಇಂದು ಸಂಜೆ 6 ಗಂಟೆಗೆ ಮುಕ್ತಾಯವಾಗಿದೆ. ರಾಜ್ಯದ 14 ಕ್ಷೇತ್ರಗಳಲ್ಲಿ ಬಹುತೇಕವಾಗಿ ಶಾಂತಿಯುತ ಮತದಾನ ನಡೆದಿದೆ. ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುಗ್ರಾಮವೊಂದು ಎಲ್ಲರ ಗಮನಸೆಳೆದಿದೆ.
Advertisement
ಹೌದು. ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಬಾಂಜಾರು ಮಲೆ (Banjarau Male) ಗ್ರಾಮದ ಮತದಾರರು ಹಕ್ಕು ಚಲಾಯಿಸಲು ಹಿಂದೇಟು ಹಾಕಿದವರಿಗೆ ಸೆಡ್ಡು ಹೊಡೆದಿದ್ದಾರೆ. ಈ ಗ್ರಾಮದಲ್ಲಿ ನೂರಕ್ಕೆ ನೂರು ಮತದಾನವಾಗಿದೆ. ಗ್ರಾಮದಲ್ಲಿರುವ 111 ಮತದಾರರು ಕೂಡ ಮತದಾನ ಮಾಡುವ ಮೂಲಕ ದಾಖಲೆ ಬರೆದಿದ್ದಾರೆ.
Advertisement
Advertisement
ಒಟ್ಟಾರೆಯಾಗಿ ಕುಗ್ರಾಮವಾದರೂ ತಮ್ಮ ಹಕ್ಕು ಚಲಾಯಿಸುವಲ್ಲಿ ಮಾತ್ರ ಗ್ರಾಮಸ್ಥರು ಎಲ್ಲರಿಗೂ ಮಾದರಿಯಾಗಿದ್ದಾರೆ. ಸಂಜೆ 5 ಗಂಟೆಯ ವೇಳೆಗೆ ದಕ್ಷಿಣ ಕನ್ನಡದಲ್ಲಿ 71.83% ರಷ್ಟು ಮತದಾನವಾಗಿದೆ. ದಕ್ಷಿಣ ಕನ್ನಡದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬ್ರಿಜೇಶ್ ಚೌಟಾ ಹಾಗೂ ಕಾಂಗ್ರೆಸ್‍ನಿಂದ ಪದ್ಮರಾಜ್ ರಾಮಯ್ಯ ಚುನಾವಣಾ ಅಖಾಡದಲ್ಲಿದ್ದಾರೆ. ಇದನ್ನೂ ಓದಿ: ಧರ್ಮದ ಆಧಾರದಲ್ಲಿ ಮತಯಾಚನೆ ಆರೋಪ – ತೇಜಸ್ವಿ ಸೂರ್ಯ ವಿರುದ್ಧ ಎಫ್‌ಐಆರ್
Advertisement