ಕಲಬುರಗಿ: ಮಲ್ಲಿಕಾರ್ಜುನ ಖರ್ಗೆ ಅವರು ಯಾವ ಸಮಯದಲ್ಲಿ ನಾಮಪತ್ರ ಸಲ್ಲಿಕೆ ಮಾಡಬೇಕು ಎಂದು ಸಮಯ ನಿಗದಿ ಮಾಡುವುದು ನಮ್ಮ ತಾಯಿ. ಇನ್ನು ಅವರು ಈ ಬಗ್ಗೆ ಸಮಯ ನೀಡಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕಲಬುರಗಿಯ ಗ್ರ್ಯಾಂಡ್ ಹೋಟೆಲಿನಲ್ಲಿ ಮೈತ್ರಿ ಪಕ್ಷಗಳ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಪ್ರತಿ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆ ಮಾಡುವ ಸಮಯವನ್ನು ತಾಯಿ ರಾಧಾಬಾಯಿ ಅವರು ಮಾಡುತ್ತಾರೆ. ನಾಳೆ ನಮ್ಮ ತಂದೆ ನಾಮಪತ್ರ ಸಲ್ಲಿಸಲಿದ್ದಾರೆ. ಆದರೆ ಯಾವ ಸಮಯಕ್ಕೆ ಎಂದು ಇನ್ನು ಸಮಯ ನಿಗದಿಯಾಗಿಲ್ಲ. ನಮ್ಮ ಕುಟುಂಬದಲ್ಲಿ ಇದೊಂದು ಜವಾಬ್ದಾರಿಯನ್ನ ಮಾತ್ರ ನಮ್ಮ ತಾಯಿ ಅವರಿಗೆ ನೀಡಿದ್ದೇವೆ. ಇಂದು ಸಂಜೆ ಖರ್ಗೆಯವರು ಶರಣಬಸವೇಶ್ವರ ದೇಗುಲ, ಖ್ಚಾಜಾ ಬಂದೇ ನವಾಜ್ ದರ್ಗಾ, ಬುದ್ಧವಿಹಾರಕ್ಕೆ ಭೇಟಿ ನೀಡಿ ಆರ್ಶೀವಾದ ಪಡೆಯಲಿದ್ದಾರೆ ಎಂದರು.
Advertisement
Advertisement
ಇದೇ ವೇಳೆ ಮೈತ್ರಿ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾನು ಜೆಡಿಎಸ್ ಮುಖಂಡರಾದ ರೇವುನಾಯಕ್ ಬೆಳಮಗಿ ಸೇರಿದಂತೆ ಯಾರನ್ನು ಕಡೆಗಣಿಸಿಲ್ಲ. ಬಿಜೆಪಿ ನಾಯಕರು ಸುಳ್ಳಿನ ಸರಮಾಲೆಯನ್ನು ಹೆಣೆಯುತ್ತಿದ್ದಾರೆ. ‘ಸಬ್ ಕಾ ಸಾಥ್ ಸಬ್ ಬಾ ವಿಕಾಸ್’ ಎಲ್ಲಿ ಆಗಿದೆ ಹೇಳಿ? ಮೋದಿ ಕಲಬುರಗಿ ಬಂದಾಗ ಕೋಲಿ ಸಮಾಜವನ್ನ ಎಸ್‍ಟಿ ಸಮುದಾಯಕ್ಕೆ ಸೇರಿಸುವುದಾಗಿ ಹೇಳಿದ್ದಾರೆ. ಈ ಬಗ್ಗೆ ನಮ್ಮ ಸರ್ಕಾರ ಪ್ರಾಮಾಣಿಕವಾಗಿ ಕೆಲಸ ಮಾಡಿದೆ. ಕೋಲಿ ಸಮಾಜವನ್ನ ಎಸ್‍ಟಿಗೆ ಸೇರಿಸುವಂತೆ ಕೇಂದ್ರಕ್ಕೆ ನೀಯೋಗ ಕೂಡ ಕರೆದುಕೊಂಡು ಹೋಗಿದ್ದೆವು. ಆದರೆ ನಿಯೋಗಕ್ಕೆ ಸರ್ಕಾರದಿಂದ ಯಾವುದೇ ಭರವಸೆ ಸಿಕ್ಕಿಲ್ಲ ಎಂದರು.
Advertisement
ಹಿರಿಯ ಐಎಎಸ್ ಅಧಿಕಾರಿ ಕೆ. ರತ್ನಪ್ರಭಾ ಅವರ ಬಿಜೆಪಿ ಸೇರ್ಪಡೆ ವಿಚಾರ ಪ್ರತಿಕ್ರಿಯೆ ನೀಡಿ, ರತ್ನಪ್ರಭಾ ಅವರು ನಮ್ಮ ಸರ್ಕಾರದಲ್ಲಿ ಕೆಲಸ ಮಾಡಿದಕ್ಕೆ ಕಾಂಗ್ರೆಸ್ ಪಕ್ಷವನ್ನೇ ಸೇರಬೇಕೆಂಬ ನಿಯಮವಿಲ್ಲ. ಪ್ರಜಾಪ್ರಭುತ್ವದಲ್ಲಿ ಯಾರು ಯಾವ ಪಕ್ಷಕ್ಕೂ ಸೇರ್ಪಡೆಯಾಗಬಹುದು. ಅಷ್ಟಕ್ಕೂ ರತ್ನಪ್ರಭಾ ಅವರು ಈ ಹಿಂದೆ ಬೀದರ್ ಡಿಸಿ ಹಾಗೂ ಕಲಬುರಗಿ ಪ್ರಾದೇಶಿಕ ಆಯುಕ್ತರಾಗಿದ್ದರು. ಅವರಿಗೆ ಖರ್ಗೆ ಅವರ ಕಾರ್ಯವೈಖರಿ ಚೆನ್ನಾಗಿ ಗೊತ್ತಿರುತ್ತೆ. ಹೀಗಾಗಿ ಏನು ಪ್ರಚಾರ ಮಾಡುತ್ತಾರೆ ಎಂಬುದು ನೋಡಬೇಕು. ಜಾಧವ್ ಪರ ಪ್ರಚಾರ ಮಾಡುವುದರಿಂದ ನಮಗೇ ಯಾವುದೇ ಹಿನ್ನೆಡೆಯಾಗಲ್ಲ ವಿಶ್ವಾಸ ವ್ಯಕ್ತಪಡಿಸಿದರು.