– ಸಿದ್ದರಾಮಯ್ಯ ಯಾವ ಕುರುಬರನ್ನು ಉದ್ಧಾರ ಮಾಡಿದ್ದಾರೆ ಹೇಳಲಿ
– ಡಿಕೆಶಿ ಕೆಡಿ ಶಿವಕುಮಾರ್ ಅಂತ ಹೆಸರು ಇಟ್ಕೊಳ್ಳಬೇಕಿತ್ತು
ದಾವಣಗೆರೆ: ಸಚಿವ ಡಿ.ಕೆ.ಶಿವಕುಮಾರ್ ಅವರು ಕೆಡಿ ಶಿವಕುಮಾರ್ ಅಂತ ಹೆಸರು ಇಟ್ಟುಕೊಳ್ಳಬೇಕಿತ್ತು. ಕಳ್ಳ ಶಿವಕುಮಾರ್ ಮನೆಗೆ ಕೋಟ್ಯಾಂತರ ರೂಪಾಯಿ ಬೇನಾಮಿ ಆಸ್ತಿ ಸಿಕ್ಕಿದೆ. ಅವನು ಡಿ.ಕೆ.ಶಿವಕುಮಾರ್ ಅಲ್ಲ ಕಳ್ಳ ಶಿವಕುಮಾರ್ ಎಂದು ಏಕವಚನದಲ್ಲಿಯೇ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸೊಕ್ಕಿನ ಮಾತಿನಿಂದಲೇ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ 37 ಸಾವಿರ ಮತಗಳ ಅಂತರದಿಂದ ಸೋತರು. ಅದೇ ಸೊಕ್ಕಿನ ಮಾತಿನಿಂದ ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡರು ಎಂದು ಹೇಳಿದರು.
Advertisement
Advertisement
ಈಶ್ವರಪ್ಪ ಅವರಿಗೆ ಉದ್ದ ನಾಲಿಗೆಯಿದೆ ಎಂಬ ಸಿದ್ದರಾಮಯ್ಯ ಹೇಳಿಕೆ ಹಿನ್ನೆಲೆಯಲ್ಲಿ ನಾಲಿಗೆ ತೋರಿಸಿದರು. ನನ್ನ ನಾಲಿಗೆ ಉದ್ದ ಇದೇಯಾ ಎಂದು ವರದಿಗಾರರನ್ನು ಪ್ರಶ್ನಿಸಿದರು. ಬಳಿಕ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಅಹಿಂದ ವರ್ಗದ ನಾಯಕರಲ್ಲ. ಅಹಿಂದ ಹೆಸರಿನಲ್ಲಿ ಅಧಿಕಾರ ಹಿಡಿದು ಆ ವರ್ಗಕ್ಕೆ ಮೋಸ ಮಾಡಿದ್ದಾರೆ. ಅವರಿಗೆ ನಾಚಿಕೆ ಆಗಬೇಕು. ಜಾತಿವಾದಿಗಳನ್ನು ರಾಜ್ಯದ ಜನ ತಿರಸ್ಕಾರ ಮಾಡಿದ್ದಾರೆ. ಅಹಿಂದ ಹೆಸರಿನಲ್ಲಿ ಇಷ್ಟು ವರ್ಷ ರಾಜಕೀಯ ಮಾಡಿರೋದು ಸಾಕು. ರಾಜ್ಯದಲ್ಲಿ ಕಾಂಗ್ರೆಸ್ ತೆಗೆದು ಹಾಕಿದ್ದೆ ಸಿದ್ದರಾಮಯ್ಯ ಎಂದು ದೂರಿದರು.
Advertisement
ಸಿಎಂ ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಚುನಾವಣಾ ಪ್ರಚಾರದ ವೇಳೆ ಸುಮಲತಾ ಅಂಬರೀಶ್ ಒಕ್ಕಲಿಗರಲ್ಲ, ನಾಯ್ಡು. ಒಕ್ಕಲಿಗರು ಯಾವುದೇ ಕಾರಣಕ್ಕೂ ಜೆಡಿಎಸ್ ಕೈ ಬಿಡಬೇಡಿ ಅಂತ ಕೇಳಿಕೊಂಡರು. ಪ್ರಧಾನಿ ಮೋದಿ ಅವರು ರಾಷ್ಟ್ರೀಯತೆಯ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆಯೇ ಹೊರತು ಜಾತಿ ಹೆಸರಿನಲ್ಲ ಎಂದು ಹೇಳಿದರು.
Advertisement
ಶಾಸಕ ಶಾಮನೂರು ಶಿವಶಂಕರಪ್ಪ ಅವರು ಲೋಕಸಭಾ ಟಿಕೆಟ್ ಬೇಡ ಅಂತ ಹೇಳಿದರು. ಹೀಗಾಗಿ ದಾವಣಗೆರೆ ಟಿಕೆಟ್ ಅನ್ನು ಕುರುಬ ಸಮುದಾಯದ ಮಂಜಪ್ಪ ಅವರಿಗೆ ಕೊಟ್ಟಿದ್ದಾರೆ. ಮೈಸೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಬಿಜೆಪಿಯಲ್ಲಿ ಇದ್ದರು. ಅವರನ್ನು ಕಾಂಗ್ರೆಸ್‍ಗೆ ಕರೆದುಕೊಂಡು ಹೋಗಿ ಹಾಳು ಮಾಡಿದರು. ಅವರನ್ನು ಸೋಲಿಸಲು ಎಚ್.ಡಿ.ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ಮುಂದಾಗಿದ್ದಾರೆ. ಸಿದ್ದರಾಮಯ್ಯ ಅವರು ಯಾವ ಕುರುಬರನ್ನು ಉದ್ಧಾರ ಮಾಡಿದ್ದಾರೆ ಅಂತ ಹೇಳಲಿ ಎಂದು ಸವಾಲು ಹಾಕಿದರು.
ಕೊಳೆತ ನಿಂಬೆಹಣ್ಣಿನ ರೇವಣ್ಣ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರ ಬಗ್ಗೆ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದರು. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಸೋಲಿಗೆ ಈಶ್ವರಪ್ಪ ಶ್ರಮಿಸುತ್ತಿದ್ದಾರೆ ಎಂಬ ಎಚ್.ಡಿ.ರೇವಣ್ಣ ಹೇಳಿಕೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ ಅವರು, ಬಿಜೆಪಿ ಪಕ್ಷ ನನಗೆ ತಾಯಿ ಸಮಾನ, ತಾಯಿಗೆ ಎಂದೂ ಮೋಸ ಮಾಡುವುದಿಲ್ಲ ಎಂದು ತಿಳಿಸಿದರು.