ಬೆಂಗಳೂರು: ಟಿಕೆಟ್ ಹಂಚಿಕೆಗಾಗಿ ಸಾಕಷ್ಟು ಕಸರತ್ತು ನಡೆಸಿದ್ದ ಕಾಂಗ್ರೆಸ್ ಕೊನೆಗೂ ರಾಜ್ಯದ 18 ಕ್ಷೇತ್ರಗಳಿಗೆ ಟಿಕೆಟ್ ಫೈನಲ್ ಮಾಡಿದೆ. ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಶಿಷ್ಯರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಿದ್ದರಾಮಯ್ಯ ಅವರು ಘಟಾನುಘಟಿ ನಾಯಕರ ಮಧ್ಯೆ ಫೈಟ್ ಮಾಡಿ ಶಿಷ್ಯರಿಗೆ ಟಿಕೆಟ್ ಕೊಡಿಸಿದ್ದಾರೆ. ಮೈಸೂರಿನಿಂದ ತಮ್ಮ ಬೆಂಬಲಿಗ ವಿಜಯಶಂಕರ್, ಬೆಂಗಳೂರು ಕೇಂದ್ರದಲ್ಲಿ ರಿಜ್ವಾನ್ ಅರ್ಷದ್, ಕೊಪ್ಪಳದಲ್ಲಿ ರಾಜಶೇಖರ್ ಹಿಟ್ನಾಳ್ ಮತ್ತು ಬಾಗಲಕೋಟೆಯಲ್ಲಿ ವೀಣಾ ಕಾಶಪ್ಪನವರಿಗೆ ಟಿಕೆಟ್ ಕೊಡಿಸುವಲ್ಲಿ ಸಿದ್ದರಾಮಯ್ಯ ಸಫಲರಾಗಿದ್ದಾರೆ. ಇದನ್ನೂ ಓದಿ:18 ಕ್ಷೇತ್ರಗಳ ಕಾಂಗ್ರೆಸ್ ಅಧಿಕೃತ ಪಟ್ಟಿ ರಿಲೀಸ್
Advertisement
Without hard work nothing grows but weeds is what I learnt from my father Shri.Bhimanna Khandre & today I understand it. As I like to thank Shri.@RahulGandhi ji & @kcvenugopalmp ji for giving me this new responsibility to represent Congress party for #LokSabhaElection from #Bidar pic.twitter.com/Vo2H9blDCH
— Eshwar Khandre (@eshwar_khandre) March 23, 2019
Advertisement
ವಿಜಯ ಶಂಕರ್ ತುಮಕೂರು ಕ್ಷೇತ್ರ ಬಿಟ್ಟು ಮೈಸೂರಿನಿಂದ ಟಿಕೆಟ್‍ಗಾಗಿ ಪಟ್ಟು ಹಿಡಿದಿದ್ದರು. ಇತ್ತ ಕೊಪ್ಪಳದಲ್ಲಿ ಸಿದ್ದರಾಮಯ್ಯ ಜಾತಿ ಪ್ರೇಮದ ಪರಿಣಾಮದಿಂದಾಗಿ ರಾಜಶೇಖರ್ ಹಿಟ್ನಾಳ್‍ಗೆ ಟಿಕೆಟ್ ಕೊಡಿಸಲಾಗಿದೆ. ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾಗಿದ್ದ ವೀಣಾಕಾಶಪ್ಪ ಅವರಿಗೆ ರಾಜೀನಾಮೆ ಕೊಡಿಸಿ ಲೋಕಸಭೆಗೆ ಟಿಕೆಟ್ ಕೊಡಿಸಲಾಗಿದೆ.
Advertisement
ಟಿಕೆಟ್‍ಗಾಗಿ ದೇವರಾಜು ಅರಸು ಮೊಮ್ಮಗ ಸೂರಜ್ ಹೆಗ್ಡೆ, ಬಿ.ಕೆ. ಹರಿಪ್ರಸಾದ್, ರೋಷನ್ ಬೇಗ್ ಮತ್ತು ಸಲೀಂ ಅಹ್ಮದ್ ತೀವ್ರ ಲಾಬಿ ನಡೆಸಿದ್ದರು. ಆದರೆ ನೀರಿಕ್ಷೆಯಂತೆ ಒಂಭತ್ತು ಮಂದಿ ಹಾಲಿ ಸಂಸದರಿಗೆ ಕೈ ಹೈಕಮಾಂಡ್ ಟಿಕೆಟ್ ನೀಡಿದ್ದು, ಮೂರು ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ.
Advertisement