ಜಾರಕಿಹೊಳಿ ಸೇರಿಗೆ ಡಿಕೆಶಿ ಸವ್ವಾ ಸೇರು – ಯಾರಿಗೆ ಸಿಗುತ್ತೆ ಲೋಕಸಭೆ ಟಿಕೆಟ್?

Public TV
1 Min Read
dk shivakumar satish jarkiholi lakshmi hebbalkar

ಬೆಳಗಾವಿ/ ಬೆಂಗಳೂರು: ಲೋಕಸಭೆ ಚುನಾವಣೆಯ (Lok Sabha Election) ಬೆಳಗಾವಿ ಸಮರದಲ್ಲೂ ಪ್ರತಿಷ್ಠೆಯ ಪೈಪೋಟಿ ನಡೆಯುವ ಎಲ್ಲಾ ಲಕ್ಷಣ ಕಾಣುತ್ತಿದೆ. ಬೆಳಗಾವಿಯಲ್ಲಿ ಸಿಎಂ ಕೋಟಾ, ಡಿಸಿಎಂ ಕೋಟಾ ಲೆಕ್ಕದಲ್ಲಿ ಟಿಕೆಟ್ ಹಂಚಿಕೆಯಾಗುವ ಸಾಧ್ಯತೆಯಿದೆ.

ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಕಟ್ಟಿ ಹಾಕಲು ಕುರುಬ ಅಭ್ಯರ್ಥಿ ದಾಳ ಉರುಳಿಸಿದ ಸತೀಶ್ ಜಾರಕಿಹೊಳಿ (Satish Jarkiholi) ಸಿಎಂ ಪರ ಪಾನ್ ಮೂವ್ ಮಾಡಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರನ ಬೆನ್ನು ತಟ್ಟುತ್ತಿರುವ ಡಿಕೆ ಶಿವಕುಮಾರ್‌ (Shivakumar) ಜಾರಕಿಹೊಳಿ ಹಿಡಿತವನ್ನೇ ತಪ್ಪಿಸಲು ಪ್ಲಾನ್ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

 

ಬೆಳಗಾವಿ ಜಿಲ್ಲೆಯಲ್ಲಿ ಎರಡು ಲೋಕಸಭಾ ಕ್ಷೇತ್ರ ಇದ್ದು ಈ ಪೈಕಿ ಒಂದು ಸಿಎಂ ಕೋಟಾ ಇನ್ನೊಂದು ಡಿಸಿಎಂ ಕೋಟಾ ಎಂಬ ವಿಷಯದ ಬಗ್ಗೆ ಚರ್ಚೆ ಆರಂಭವಾಗಿದೆ.  ಈ ಪೈಕಿ  ಒಂದು ಟಿಕೆಟ್ ಕುರುಬ ಸಮುದಾಯಕ್ಕೆ ಕೊಡಬೇಕು ಎಂದು ಸತೀಶ್ ಜಾರಕಿಹೋಳಿ ಘೋಷಣೆ ಮಾಡಿದ್ದಾರೆ. ಇದರ ಮಧ್ಯೆ ಇನ್ನೊಂದು ಸ್ಥಾನಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ ಪುತ್ರನ ತರುವ ಬಗ್ಗೆ  ಸಿದ್ದತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಡಿಕೆಶಿ ಹಸ್ತಕ್ಷೇಪಕ್ಕೆ ಸತೀಶ್ ಕಿಡಿ – ಕಾಂಗ್ರೆಸ್‌ಗೂ ಬೆಳಗಾವಿ ರಾಜಕೀಯ ಕಂಟಕನಾ?

ಲಕ್ಷ್ಮಿ ಹೆಬ್ಬಾಳ್ಕರ್ ಪ್ರಯತ್ನಕ್ಕೆ ಡಿಸಿಎಂ ಡಿಕೆಶಿ ಸಾಥ್ ನೀಡಿದರೆ ಸತೀಶ್ ಜಾರಕಿಹೊಳಿ ತಮ್ಮ ರಾಜಕೀಯ ಗುರು ಸಿದ್ದರಾಮಯ್ಯ (Siddaramaiah) ಪರ ಬ್ಯಾಟ್ ಬೀಸಿದ್ದಾರೆ. ಇದು ಸಹಜವಾಗಿಯೇ ಜಾರಕಿಹೊಳಿ ತಮ್ಮ ಆಪ್ತರನ್ನು ಅಥವಾ ಕುಟುಂಬದವರನ್ನ ಸ್ಪರ್ಧೆಗೆ ಇಳಿಸುವುದಕ್ಕೆ ಡಿಕೆಶಿ ಚೆಕ್‌ಮೇಟ್ ಕೊಟ್ಟಂತಿದೆ.

ಸಿಎಂ, ಡಿಸಿಎಂ ಕೋಟಾದಲ್ಲಿ ಟಿಕೆಟ್ ಹಂಚಿಕೆ ಆದರೆ ಸಹಜವಾಗಿಯೇ ಜಾರಕಿಹೊಳಿ ವೈಯಕ್ತಿಕ ಲೆಕ್ಕಾಚಾರ ತಪ್ಪುವ ಸಾಧ್ಯತೆಯು ಇದೆ ಎನ್ನಲಾಗಿದೆ. ಒಟ್ಟಾರೆ ಬೆಳಗಾವಿ ಲೋಕಸಭೆ ಅಭ್ಯರ್ಥಿ ಆಯ್ಕೆಯಲ್ಲೂ ಡಿಕೆಶಿ ವರ್ಸಸ್ ಜಾರಕಿಹೋಳಿ ಫೈಟ್ ಮತ್ತೊಂದು ರೀತಿಯಲ್ಲಿ ಶುರುವಾಗುವ ಲಕ್ಷಣಗಳು ಕಾಣುತ್ತಿವೆ.

 

Web Stories

Share This Article