ಬೆಂಗಳೂರು: ಮಾಜಿ ಸಚಿವ, ಹಾಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸುಧಾಕರ್ (Sudhakar) ಮತ್ತು ಬಿಜೆಪಿಯ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ (Radha Mohan Das) ಅವರು ಯಲಹಂಕ ಶಾಸಕ ಎಸ್‌ಆರ್ ವಿಶ್ವನಾಥ್ (SR Vishwanth) ಅವರ ನಿವಾಸಕ್ಕೆ ಭೇಟಿ ನೀಡಿ ಮಾತನಾಡಿದ್ದಾರೆ.
ಗೃಹ ಸಚಿವ ಅಮಿತ್ ಶಾ (Amit Shah) ಸೂಚನೆ ಮೇರೆಗೆ ಬೆಳಗ್ಗೆ ಉಪಹಾರಕ್ಕೆ ಬರುವಂತೆ ಇಬ್ಬರು ನಾಯಕರಿಗೆ ಎಸ್‌ಆರ್ ವಿಶ್ವನಾಥ್ ಆಹ್ವಾನ ನೀಡಿದ್ದರು. ಆಹ್ವಾನದ ಹಿನ್ನೆಲೆಯಲ್ಲಿ ಸಿಂಗನಾಯಕನಹಳ್ಳಿಯಲ್ಲಿರುವ ವಿಶ್ವನಾಥ್ ನಿವಾಸಕ್ಕೆ ಇಬ್ಬರು ನಾಯಕರು ಭೇಟಿ ನೀಡಿ ಭಿನ್ನಾಭಿಪ್ರಾಯ ಮರೆತು ಮಾತುಕತೆ ನಡೆಸಿದರು.
Advertisement
Advertisement
ಮಾಧ್ಯಮಗಳ ಜೊತೆ ಮಾತನಾಡಿದ ವಿಶ್ವನಾಥ್, ಅಸಮಾಧಾನ ಪಕ್ಷದ ಮೇಲೆ ಯಾವತ್ತೂ ಮಾಡಿಲ್ಲ. ಸುಧಾಕರ್ ಅವರ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದೆ ಅಷ್ಟೇ. ನರೇಂದ್ರ ಮೋದಿ ಗೆಲ್ಲಿಸಲು ಬಿಜೆಪಿ ಪಕ್ಷವನ್ನ ನೋಡಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
Advertisement
ಚುನಾವಣಾ ಚಾಣಾಕ್ಷ ಅಮಿತ್ ಶಾ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಮಾತನಾಡಿದ್ದೇನೆ.ನಾನು ಏನು ಹೇಳಬೇಕೋ ಹೇಳಿದ್ದೇನೆ. 8 ವಿಧಾನ ಸಭಾ ಕ್ಷೇತ್ರದಲ್ಲಿ ಕೆಲಸ ಮಾಡುವಂತೆ ಸೂಚಿಸಿದ್ದಾರೆ. ರಾಧಾ ಮೋಹನ್ ದಾಸ್ ಅವರು ನಿನ್ನೆ ತಿಂಡಿಗೆ ಬರುತ್ತೇವೆ ಎಂದು ಹೇಳಿದರು. ಇವತ್ತು ಮನೆಗೆ ಬಂದಿದ್ದು ನಮ್ಮ ಕ್ಷೇತ್ರದ ಮುಖಂಡರ ಪರಿಚಯ ಮಾಡಿಸಿದ್ದೇನೆ ಎಂದರು.
Advertisement
ಯಾರೇ ಹೇಳಲಿ ಬಿಡಲಿ ನಮ್ಮ ಕ್ಷೇತ್ರದಲ್ಲಿ ಸುಧಾಕರ್‌ಗೆ ಬಹುಮತ ಕೊಡುತ್ತೇವೆ. ಎಲ್ಲಾ ಕಾರ್ಯಕರ್ತರನ್ನು ಕರೆದು ಸಭೆ ಮಾಡಿ ಸೂಚನೆ ಕೊಡಲಾಗುತ್ತದೆ. ನಾಮಪತ್ರ ಸಲ್ಲಿಕೆಗೆ ನಾಳೆ ಹೋಗುತ್ತೇವೆ. ಮುಂದಿನ ಬಾರಿ ಅಲೋಕ್ ಗೆ ಅವಕಾಶ ಕೊಡುತ್ತೇವೆ ಎಂದು ರಾಧಾ ಮೋಹನ್ ಜಿ ಕೂಡಾ ಹೇಳಿದ್ದಾರೆ ಎಂದು ತಿಳಿಸಿದರು.