ನವದೆಹಲಿ: ಈ ಬಾರಿ ಲೋಕಸಭಾ ಚುನಾವಣೆಯ (Lok Sabha Election) ಫಲಿತಾಂಶದ ಟ್ರೆಂಡ್ (Trend) ಬೇಗನೇ ಗೊತ್ತಾದರೂ ಅಧಿಕೃತ ಫಲಿತಾಂಶ ತಡವಾಗಿ ಪ್ರಕಟವಾಗಲಿದೆ.
ಅಧಿಕೃತ ಫಲಿತಾಂಶ ತಡವಾಗಲು ಕಾರಣ ಸುಪ್ರೀಂ ಕೋರ್ಟ್ (Supreme Court) ನಿರ್ದೇಶನ. ಈ ಬಾರಿ ಪ್ರತಿ ವಿಧಾನಸಭಾ ಕ್ಷೇತ್ರದ (Vidhana Sabha) 5 ವಿವಿಪ್ಯಾಟ್ (VV PAT) ಮತ ಎಣಿಕೆ ನಡೆಸಬೇಕೆಂದು ಸುಪ್ರೀಂ ಕೋರ್ಟ್ ಆದೇಶ ಪ್ರಕಟಿಸಿದೆ. ಇದನ್ನೂ ಓದಿ: ಇಂದಿನಿಂದ ದೇಶಾದ್ಯಂತ ಎಕ್ಸ್‌ಪ್ರೆಸ್‌ವೇ, ಹೈವೇಗಳಲ್ಲಿ ಟೋಲ್ ದರ ಏರಿಕೆ
ಈ ಆದೇಶವನ್ನು ಚುನಾವಣಾಧಿಕಾರಿಗಳು ಪಾಲಿಸಬೇಕಾದ ಕಾರಣ ಪೋಸ್ಟಲ್, ಇವಿಎಂ ಮತ ಎಣಿಕೆ ಮುಗಿದ ಬಳಿಕ ವಿವಿಪ್ಯಾಟ್ ಮತ ಮತಗಳನ್ನು ತಾಳೆ ಹಾಕಲಾಗುತ್ತದೆ.
ಫಲಿತಾಂಶ ಟ್ರೆಂಡ್ ಬೆಳಗ್ಗೆ 11 ಗಂಟೆಯ ಒಳಗಡೆ ಗೊತ್ತಾದರೂ ಅಧಿಕೃತ ಫಲಿತಾಂಶ ಸಂಜೆ ಪ್ರಕಟವಾಗಬಹುದು. ಒಂದು ಲೋಕಸಭಾ ಚುನಾವಣಾ ವ್ಯಾಪ್ತಿಯಲ್ಲಿ 10 ವಿಧಾನಸಭಾ ಕ್ಷೇತ್ರಗಳು ಇದ್ದರೆ 10 ಕ್ಷೇತ್ರಗಳ 5 ಮತ ಕೇಂದ್ರ ಅಂದರೆ ಒಟ್ಟು 50 ಮತ ಕೇಂದ್ರಗಳ ವಿವಿಪ್ಯಾಟ್‌ನಲ್ಲಿ ಬಿದ್ದ ಮತಗಳನ್ನು ಲೆಕ್ಕ ಹಾಕಬೇಕಾಗುತ್ತದೆ.
ಎಲ್ಲಾ ವಿವಿಪ್ಯಾಟ್‌ಗಳ ಮತ ಎಣಿಕೆ ನಡೆಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಆದರೆ ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿ ವಿಧಾನಸಭಾ ಕ್ಷೇತ್ರದ 5 ವಿವಿಪ್ಯಾಟ್ ಸ್ಲಿಪ್‌ಗಳ ಮತಗಳನ್ನು ಎಣಿಕೆ ಮಾಡುವಂತೆ ಆದೇಶಿಸಿತ್ತು.