– ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೋಟಾಗೆ ಗೆಲುವು
ಉಡುಪಿ: ಇನ್ನು ಆರು ತಿಂಗಳಲ್ಲಿ ಹಿಂದಿ ಮಾತನಾಡಲು ಕಲಿಯುತ್ತೇನೆ ಎಂದು ಕೋಟಾ ಶ್ರೀನಿವಾಸ ಪೂಜಾರಿ (Kota Srinivas Poojary) ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ಸಾಮಾನ್ಯ ಮನುಷ್ಯ ಹಿಂದಿ ಗೊತ್ತಿಲ್ಲ ಎಂದಿದ್ದೆ. ಲೆಕ್ಕ ಇಟ್ಟುಕೊಳ್ಳಿ ಆರು ತಿಂಗಳು ಅವಧಿ ಇದೆ. ಹಿಂದಿ ಮಾತನಾಡೋದನ್ನು ಕಲಿಯಲು ಇವತ್ತಿನಿಂದಲೇ ಶುರು ಮಾಡುತ್ತೇನೆ ಎಂದರು.
Advertisement
Advertisement
ಬಿಜೆಪಿ ನನ್ನಂಥ ಸಾಮಾನ್ಯ ಕಾರ್ಯಕರ್ತನಿಗೆ ಅವಕಾಶ ಕೊಟ್ಟದ್ದೇ ಆಶ್ಚರ್ಯ. ಎರಡು ಜಿಲ್ಲೆಯ ನಾಯಕರ ಅವಿಶ್ರಾಂತ ದುಡಿಮೆ ಈ ಗೆಲುವಿಗೆ ಕಾರಣ. ಇದು ಕಾರ್ಯಕರ್ತರ ಗೆಲುವು ಎಂದು ಭಾವಿಸಿದ್ದೇನೆ. ಪಕ್ಷ ಮತ್ತು ಎನ್‍ಡಿಎ ಒಕ್ಕೂಟಕ್ಕೆ ಗೆಲುವನ್ನು ಸಮರ್ಪಿಸುತ್ತೇನೆ ಎಂದು ಹೇಳಿದರು.
Advertisement
ಪಂಚಾಯತ್ ನಿಂದ ಪಾರ್ಲಿಮೆಂಟ್‍ವರೆಗೆ ಎಂಬ ಘೋಷಣೆ ಇಂದು ಸಾಬೀತಾಯಿತು. ನಾವು 1 ಲಕ್ಷ ಸುಮಾರು ಅಂತರದ ಗೆಲುವು ಪಡೆಯಬಹುದು ಎಂದು ನಿರೀಕ್ಷಿಸಲಾಗಿತ್ತು. ಕಾರ್ಯಕರ್ತರು ನಾಯಕರ ಪರಿಶ್ರಮ ನನ್ನ ಮೇಲಿನ ಪ್ರೀತಿ ಈ ಸಂಖ್ಯೆಗೆ ಕಾರಣ. ನರೇಂದ್ರ ಮೋದಿ ಅವರಿಂದ ಭಾರತಕ್ಕೆ ಗೌರವ ಎಂಬುದು ಸತ್ಯ. ರಾಷ್ಟ್ರೀಯ ಭದ್ರತೆ, ರಾಮಮಂದಿರ -370, ಇಂತಹ ಬಹುದೊಡ್ಡ ಸವಾಲುಗಳಿಂದ ನಾವು ಗೆದ್ದಿದ್ದೇವೆ ಎಂದು ತಿಳಿಸಿದರು.
Advertisement
ಬಡವರ ಮನೆಗೆ ಒಂದು ಲಕ್ಷ ಎಂದು ಇಂಡಿಯಾ ಕೂಟ ಹೇಳಿತ್ತು. ಎನ್ ಡಿ ಎ ಕೇಂದ್ರದಲ್ಲಿ ಅಧಿಕಾರ ಮಾಡುವುದರಲ್ಲಿ ಸಂಶಯ ಇಲ್ಲ. ನಾನು ಸಾಮಾನ್ಯ ಮನುಷ್ಯ ಹಿಂದಿ ಗೊತ್ತಿಲ್ಲ ಎಂದಿದ್ದೆ. ಲೆಕ್ಕ ಇಟ್ಟುಕೊಳ್ಳಿ ಇನ್ನು ಮುಂದೆ ಆರು ತಿಂಗಳು ಅವಧಿ ಇದೆ ಎಂದು ನುಡಿದರು.
ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಈ ಬಾರಿ ಹೊಸ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಕಣಕ್ಕಿಳಿಸಿದ್ದರು. ಇದೀ ಕೋಟಾ ಅವರು ಕಾಂಗ್ರೆಸ್‍ನ ಜಯಪ್ರಕಾಶ್ ಹೆಗ್ಡೆ ವಿರುದ್ಧ ಎರಡೂವರೆ ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ತನ್ನದಾಗಿಸಿಕೊಂಡಿದ್ದಾರೆ.
ಇವಿಎಂ ಮತ್ತು ಅಂಚೆ ಮತಗಳ ಲೆಕ್ಕಚಾರ: ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿಗೆ 731408 ಮತಗಳು ಬಿದ್ದರೆ, ಕಾಂಗ್ರೆಸ್‌ನ ಜಯಪ್ರಕಾಶ್ ಹೆಗ್ಡೆಯವರಿಗೆ 4,72,505 ಮತಗಳು ಬಿದ್ದಿವೆ. ಈ ಮೂಲಕ 2,58,903 ಮತಗಳ ಅಂತರದಿಂದ ಕೋಟಾ ಅವರಿಗೆ ಪಾರ್ಲಿಮೆಂಟ್ ಪ್ರವೇಶ ಮಾಡುವ ಅವಕಾಶ ದಕ್ಕಿದೆ.