-243 ಸರ್ಕಾರಿ, 76 ಖಾಸಗಿ ಬಸ್, 80 ಕ್ರೂಸರ್ ವಾಹನ
-1800 ಪೊಲೀಸ್ ಸಿಬ್ಬಂದಿ
ಬಾಗಲಕೋಟೆ: ಎರಡನೇ ಹಂತದ ಲೋಕಸಭಾ ಚುನಾವಣೆಗೆ ಬಾಗಲಕೋಟೆ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಬೆಳಗ್ಗೆಯಿಂದ ಜಿಲ್ಲೆಯ ಆಯಾ ತಾಲೂಕಿನ ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಮಸ್ಟರಿಂಗ್ ಕೇಂದ್ರಗಳನ್ನ ತೆರೆಯಲಾಗಿದೆ. ಬೆಳಗ್ಗೆಯಿಂದಲೇ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದು, ಮತದಾನಕ್ಕೆ ಬೇಕಾದ ಅಗತ್ಯ ಸಲಕರಣೆಗಳನ್ನ ತೆಗೆದುಕೊಂಡು ಮತಗಟ್ಟೆಗಳತ್ತ ಮುಖ ಮಾಡುತ್ತಿದ್ದಾರೆ.
Advertisement
Advertisement
ಬಾಗಲಕೋಟೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1938 ಮತ ಕೇಂದ್ರಗಳನ್ನು ತೆರೆಯಾಗಿದೆ. ಅವುಗಳಲ್ಲಿ 405 ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಅದರಲ್ಲಿ 103 ಮತಗಟ್ಟೆಗಳಲ್ಲಿ ವೆಬ್ ಕಾಸ್ಡಿಂಗ್, 218 ಮತಗಟ್ಟೆಗಳಲ್ಲಿ ಮೈಕ್ರೋ ಆಬ್ಸರ್ವರ್ ಮತ್ತು 88 ಮತಗಟ್ಟೆಗಳಲ್ಲಿ ವಿಡಿಯೋಗ್ರಾಫರ್ ಗಳನ್ನು ನೇಮಿಸಲಾಗಿದೆ. ವಿವಿಧ ಇಲಾಖೆಗಳಿಂದ ಒಟ್ಟು 8,527 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.
Advertisement
17 ಸಖಿ ಮತಗಟ್ಟೆಗಳನ್ನ ಕ್ಷೇತ್ರದ ವಿವಿಧ ಭಾಗಗಳಲ್ಲಿ ಸ್ಥಾಪಿಸಲಾಗಿದ್ದು, ಜೊತೆಗೆ ವಿಕಲಚೇತನರಿಗಾಗಿ 2 ಮತಗಟ್ಟೆ ಸ್ಥಾಪಿಸಲಾಗಿದೆ. ಚುನಾವಣಾ ಕರ್ತವ್ಯಕ್ಕಾಗಿ 243 ಸರ್ಕಾರಿ ಬಸ್‍ಗಳು, 76 ಮಿನಿ ಬಸ್‍ಗಳು, 80 ಕ್ರೂಸರ್ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ 2,855 ಅಂಚೆ ಮತಪತ್ರಗಳನ್ನು ಕೂಡ ವಿತರಿಸಲಾಗಿದೆ.
Advertisement
ಚುನಾವಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಇಲಾಖೆ ಅರೆ ಸೇನಾ ತುಕಡಿ ಸೇರಿದಂತೆ ಒಟ್ಟು 1800 ಸಿಬ್ಬಂದಿಯನ್ನ ನೇಮಿಸಿದೆ. ಈ ಲೋಕಸಭೆ ಕ್ಷೇತ್ರದಲ್ಲಿ 17,00,547 ಮತದಾರರು ತಮ್ಮ ಮತ ಚಲಾಯಿಸಲಿದ್ದಾರೆ. ಇದರಲ್ಲಿ 8ಲಕ್ಷ 50 ಸಾವಿರದ 381 ಪುರುಷ ಮತದಾರರಿದ್ದು, 8ಲಕ್ಷ 50 ಸಾವಿರದ 74 ಜನ ಮಹಿಳಾ ಮತದಾರರಿದ್ದಾರೆ. ಒಟ್ಟಾರೆ ಕ್ಷೇತ್ರದಾದ್ಯಂತ ಶಾಂತಿಯುತ ಮತದಾನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನ ಮಾಡಿಕೊಂಡಿದೆ.