– ಎಕ್ಸಿಟ್ ಪೋಲ್ ಭವಿಷ್ಯದ ಮೇಲೆ ಕುತೂಹಲ!
ನವದೆಹಲಿ: 2024ರ ಲೋಕಸಭೆ ಚುನಾವಣೆ (Lok Sabha Polls) ಅಂತಿಮ ಘಟ್ಟ ತಲುಪಿದೆ. ಜೂನ್ 1ರಂದು (ಶನಿವಾರ) ಕೊನೇ ಹಂತದ ಚುನಾವಣೆಗೆ ಮತದಾನ ನಡೆಯಲಿದೆ. 8 ರಾಜ್ಯಗಳ 57 ಸ್ಥಾನಗಳಿಗೆ ಕೊನೆಯ ಮತ್ತು 7ನೇ ಹಂತದ ಮತದಾನ (7th Phase Elections) ನಡೆಯಲಿದೆ.
ಪಂಜಾಬ್‌ನ 13, ಉತ್ತರ ಪ್ರದೇಶದ 13, ಬಂಗಾಳದ 9, ಬಿಹಾರದ 8, ಒಡಿಶಾದ 6, ಹಿಮಾಚಲದ 4, ಜಾರ್ಖಂಡ್‌ನ 3, ಚಂಡೀಘಡದ ಒಂದು ಸ್ಥಾನಕ್ಕೆ ಶನಿವಾರ ಮತದಾನ ನಡೆಯಲಿದೆ. ಇದನ್ನೂ ಓದಿ: ನಿರೀಕ್ಷೆಗೂ ಮೀರಿ ಜಿಡಿಪಿ ಅಭಿವೃದ್ಧಿ – 4ನೇ ತ್ರೈಮಾಸಿಕದಲ್ಲಿ 7.8% , 2023-24 ಹಣಕಾಸು ವರ್ಷದಲ್ಲಿ 8.2% ಪ್ರಗತಿ
ಕಣದಲ್ಲಿರುವ ಪ್ರಮುಖರು ಯಾರ‍್ಯಾರು?
ಪ್ರಧಾನಿ ಮೋದಿ (PM Modi), ನಟಿ ಕಂಗನಾ, ಕೇಂದ್ರ ಸಚಿವ ಅನುರಾಗ್ ಠಾಕೂರ್, ಬಿಜೆಪಿ ಹಿರಿಯ ನಾಯಕ ರವಿಶಂಕರ್ ಪ್ರಸಾದ್ ಸೇರಿ ಹಲವು ಪ್ರಮುಖರು ತಮ್ಮ ಅದೃಷ್ಟವನ್ನು ಪಣಕ್ಕೆ ಒಡ್ಡಿದ್ದಾರೆ. ಇದನ್ನೂ ಓದಿ: 100 ಮಿಲಿ 500 ರೂ.ಗೆ ಸೇಲ್ – ತಾಯಿ ಎದೆಹಾಲು ಮಾರಾಟ ಮಾಡ್ತಿದ್ದ ಮಳಿಗೆಗೆ ಸೀಲ್!
ಈ ಮಧ್ಯೆ ಏಳು ಹಂತಗಳ ಚುನಾವಣೆ ವೇಳೆ ದೇಶದ ವಿವಿಧೆಡೆ ದಾಳಿ ನಡೆಸಿದ್ದ ಐಟಿ ಇಲಾಖೆ 1,100 ಕೋಟಿ ರೂ. ನಗದು ಮತ್ತು ಚಿನ್ನಾಭರಣ ಸೀಜ್ ಮಾಡಿದೆ. 2019ರ ಚುನಾವಣೆಯಲ್ಲಿ ಐಟಿ ಸೀಜ್ ಮಾಡಿದ ಮೊತ್ತ 390 ಕೋಟಿ ರೂ. ಇತ್ತು. ಇದಕ್ಕೆ ಹೋಲಿಸಿದ್ರೆ ಈ ಬಾರಿ ವಶಕ್ಕೆ ಪಡೆದ ಪ್ರಮಾಣ ಶೇ.182 ರಷ್ಟು ಹೆಚ್ಚಾಗಿದೆ. ಹೀಗೆ ವಶಕ್ಕೆ ಪಡೆದ ವಸ್ತುಗಳ ಪ್ರಮಾಣದಲ್ಲಿ ದೆಹಲಿ ಮತ್ತು ಕರ್ನಾಟಕ ಅಗ್ರಸ್ಥಾನದಲ್ಲಿದೆ. ಎರಡೂ ಕಡೆ 200 ಕೋಟಿಗೂ ಹೆಚ್ಚು ಮೌಲ್ಯದ ನಗದು ಮತ್ತು ಆಭರಣಗಳು ಸಿಕ್ಕಿವೆ. ನಂತರದ ಸ್ಥಾನಗಳಲ್ಲಿ ತಮಿಳುನಾಡು, ಆಂಧ್ರ, ತೆಲಂಗಾಣ ಮತ್ತು ಒಡಿಶಾ ರಾಜ್ಯಗಳಿವೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಶನಿವಾರ ಸಂಜೆ ಸಂಜೆ 6.30ರ ನಂತರವೇ ಎಕ್ಸಿಟ್ ಪೋಲ್ ಪ್ರಕಟಿಸಬೇಕು. ಅದಕ್ಕೂ ಮೊದಲು ಪ್ರಕಟಿಸುವಂತಿಲ್ಲ ಎಂದು ಚುನಾವಣಾ ಆಯೋಗ ಕಟ್ಟು ನಿಟ್ಟಿನ ಸೂಚನೆ ನೀಡಿದೆ. ಇದನ್ನೂ ಓದಿ: ದೇವರಲ್ಲಿ ನಂಬಿಕೆ ಇದ್ರೆ ಮನೆಯಲ್ಲೇ ಧ್ಯಾನ ಮಾಡಿ- ಮೋದಿ ವಿರುದ್ಧ ಖರ್ಗೆ ವಾಗ್ದಾಳಿ