– ನಾಗಾಲ್ಯಾಂಡ್ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ
ನವದೆಹಲಿ: 2024ರ ಮಹಾ ಮತ ಸಂಗ್ರಾಮದಲ್ಲಿ (Lok Sabha Election) ಇವತ್ತು ಮೊದಲ ಹಂತದ ಎಲೆಕ್ಷನ್ ಮುಗಿದಿದೆ ಭರ್ಜರಿ ಮತದಾನ ನಡೆದಿದೆ. ಬಿಸಿ ಗಾಳಿಯ (Heat Wave) ನಡುವೆಯೂ ಭಾರೀ ಪ್ರಮಾಣದಲ್ಲಿ ಮತದಾನ ನಡೆದಿದೆ. ಅದರಲ್ಲೂ ಮೊದಲ ಬಾರಿ ಮತದಾನ ಮಾಡುವ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ ಎಂದು ಚುನಾವಣಾ ಆಯೋಗ (Election Commission) ತಿಳಿಸಿದೆ.
Advertisement
21 ರಾಜ್ಯದ 102 ಕ್ಷೇತ್ರಗಳಲ್ಲಿ ಮತದಾನ ನಡೆಯಿತು.ವಿಶೇಷ ಅಂದರೆ ನಾಗಾಲ್ಯಾಂಡ್‌ನ (Nagaland) 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ ನಡೆದ ಬಗ್ಗೆ ವರದಿಯಾಗಿದೆ. 20 ಶಾಸಕರು ಒಳಗೊಂಡತೆ 4 ಲಕ್ಷ ಮತದಾರರು ಮತಗಟ್ಟೆಗೆ ಬರಲಿಲ್ಲ. ನಾಗಾ ಬುಡಕಟ್ಟಿನ ಜನ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಮತದಾನ ಬಹಿಷ್ಕರಿಸಿದ್ದಾರೆ. 8 ಕೇಂದ್ರ ಸಚಿವರು ಸೇರಿ 1,625 ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿದೆ. ಇದನ್ನೂ ಓದಿ: ಲವ್ ಜಿಹಾದ್ ಹೆಚ್ಚಾಗುತ್ತಿದೆ, ನಿಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳಿ: ಪೋಷಕರಲ್ಲಿ ನೇಹಾ ತಂದೆ ನಿರಂಜನ್ ಮನವಿ
Advertisement
ನಾಗಪುರದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರಾಖಂಡದಲ್ಲಿ ಸಿಎಂ ಪುಷ್ಕರ್‌ಸಿಂಗ್ ಧಾಮಿ, ಬಾಬಾ ರಾಮ್‌ದೇವ್, ರಾಜಸ್ಥಾನದಲ್ಲಿ ಡಿಸಿಎಂ ದಿಯಾ ಕುಮಾರಿ, ಮಣಿಪುರದಲ್ಲಿ ಸಿಎಂ ಬೀರೇನ್ ಸಿಂಗ್, ಅಸ್ಸಾಂನಲ್ಲಿ ಸರ್ಬಾನಂದ ಸೋನಾವಾಲ್ ಹಕ್ಕು ಚಲಾಯಿಸಿದರು. ಇದನ್ನೂ ಓದಿ: ಮಗನನ್ನು ಸೈನಿಕನನ್ನಾಗಿ ಮಾಡಬೇಕೆಂಬ ಕನಸು ಕಂಡಿದ್ದೆ: ಆರೋಪಿ ಫಯಾಜ್ ತಂದೆ
Advertisement
ತಮಿಳುನಾಡಲ್ಲಿ ಸಿಎಂ ಸ್ಟಾಲಿನ್, ಎಡಪ್ಪಾಡಿ ಪಳನಿಸ್ವಾಮಿ, ಚಿದಂಬರಂ, ಅಣ್ಣಾಮಲೈ, ತಮಿಳ್‌ಸೈ ಸೌಂದರರಾಜನ್, ಸೂಪರ್‌ಸ್ಟಾರ್ ರಜಿನಿಕಾಂತ್, ಕಮಲ್‌ಹಾಸನ್, ಅಜಿತ್, ವಿಜಯ್ ಸೇರಿ ಹಲವರು ಮತದಾನ ಮಾಡಿದರು.
Advertisement
ಚುನಾವಣೆ ವೇಳೆ ಅಲ್ಲಲ್ಲಿ ಹಿಂಸಾಚಾರ ನಡೆದಿವೆ. ಮಣಿಪುರದ ಇಂಫಾಲದಲ್ಲಿ ಮತಗಟ್ಟೆ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಮತದಾರರು ದಿಕ್ಕಾಪಾಲಾಗಿ ಓಡಿದ್ದಾರೆ. ಬಂಗಾಳದ ಚಂದ್ಮರಿ, ಕೂಚ್‌ಬೆಹಾರ್‌ನಲ್ಲಿ ಕಲ್ಲು ತೂರಾಟ ನಡೆದಿದೆ. ದಿನ್‌ಹಟಾದಲ್ಲಿ ಟಿಎಂಸಿ ಕಾರ್ಯಕರ್ತರು ಬಾಂಬ್ ಎಸೆದಿದ್ದಾರೆ. ಇತ್ತ ಛತ್ತಿಸ್‌ಘಡದ ಬಿಜಾಪುರ್‌ನಲ್ಲಿ ಮತಗಟ್ಟೆ ಸಮೀಪ ಗ್ರೆನೇಡ್ ಸ್ಫೋಟಗೊಂಡಿದೆ. ಭದ್ರತಾ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ.