ಮೈಸೂರು: ಕಾಂಗ್ರೆಸ್-ಜೆಡಿಎಸ್ ಪಕ್ಷದ ನಾಯಕರು ನಮ್ಮ ಗುಂಪುಗಾರಿಕೆ, ವೈಯಕ್ತಿಕ ಇಚ್ಛಾಶಕ್ತಿ ಹಾಗೂ ಭಿನ್ನಾಭಿಪ್ರಾಯ ಬಿಡಬೇಕು ಎಂದು ಹೇಳುವ ಮೂಲಕ ಸಚಿವ ಸಾ.ರಾ ಮಹೇಶ್ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದುಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿ ಎರಡು ಪಕ್ಷದ ನಾಯಕರು ಒಮ್ಮತದಿಂದ ಕೆಲಸ ಮಾಡಬೇಕು. ಆದರೆ ನಿಖಿಲ್ ಕುಮಾರಸ್ವಾಮಿ ಹೆಸರು ಹೇಳಿದ ನಂತರ ಕಾಂಗ್ರೆಸ್ ಮುಖಂಡರು ಮತ್ತೊಬ್ಬ ಆಕಾಂಕ್ಷಿಯ ಜೊತೆ ಓಡಾಡುತ್ತಿದ್ದಾರೆ. ಆದರೆ ಅವರನ್ನು ಸ್ವಾಗತಿಸುತ್ತಿದ್ದಾರೆ. ಈ ರೀತಿ ಮಂಡ್ಯದಲ್ಲಿ ನಡೆದು ಕೊಂಡಾಗ ಮೈಸೂರು ಕಾರ್ಯಕರ್ತರ ಮೇಲೂ ಅದು ಪರಿಣಾಮ ಬೀರುತ್ತೆ ಎಂದು ಸಾರಾ ಮಹೇಶ್ ಹೇಳಿದ್ದಾರೆ.
Advertisement
Advertisement
ಎರಡು ಪಕ್ಷದ ನಾಯಕರು ಬದಲಾಗಬೇಕು. ರಾಷ್ಟ್ರ ರಾಜ್ಯ ನಾಯಕರ ತೀರ್ಮಾನದಂತೆ ಮೈತ್ರಿ ಅಭ್ಯರ್ಥಿ ನಿಖಿಲ್, ಮೈತ್ರಿಗೆ ದ್ರೋಹ ಮಾಡೋದು ತಂದೆ ತಾಯಿಗೆ ದ್ರೋಹ ಮಾಡಿದಂತೆ. ಹಿಂದಿನ ಉಪ ಚುನಾವಣೆ ಕಹಿ ಘಟನೆಯಿಂದ ಈ ಹೇಳಿಕೆ ನೀಡುತ್ತಿದ್ದು, ಇದು ತಗೋ ಕೊಡು ಪಾಲಿಸಿ ಅಷ್ಟೇ. ಯಾರನ್ನು ಬಲವಂತವಾಗಿ ಬಳಸಿಕೊಳ್ಳಲು ಸಾಧ್ಯವಿಲ್ಲ. ನೀವು ಎಷ್ಟು ಪ್ರೀತಿಸುತ್ತಿರೋ ಗೌರವಿಸುತ್ತಿರೋ ನಾವು ಅಷ್ಟೇ ಪ್ರೀತಿಸುತ್ತೀವಿ ಎಂದರು.
Advertisement
ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಿಗೆ ಖಡಕ್ ಈ ಬಗ್ಗೆ ಸೂಚನೆ ನೀಡಬೇಕು ಎಂದಿದ್ದಾರೆ. ನಿನ್ನೆ ಜೆಡಿಎಸ್ ಕಾರ್ಯಕ್ರಮದಲ್ಲೂ ಮಾತನಾಡಿ ಅವರು, ನೀವು ನಮ್ಮನ್ನು ಒಮ್ಮೆ ತಬ್ಬಿಕೊಂಡರೆ ನಾವು 5 ಬಾರಿ ತಬ್ಬಿಕೊಳ್ಳುತ್ತೇವೆ. ನೀವು ಮಂಡ್ಯದಲ್ಲಿ ನಮಗೇ ನೀಡಿದ ಬೆಂಬಲವೇ ಮೈಸೂರಿನಲ್ಲೂ ಪ್ರತಿಧ್ವನಿಸುತ್ತದೆ ಎಂದಿದ್ದರು.
Advertisement
ಇದೇ ವೇಳೆ ಸುಮಲತಾ ಅಂಬರೀಶ್ ಈಗಲೂ ನಿಖಿಲ್ ಬೆಂಬಲಿಸುವ ಬಗ್ಗೆ ವಿಶ್ವಾಸವಿದೆ ಎಂದು ತಿಳಿಸಿದ ಸಚಿವರು, ಯಾರೋ ಅವರಿಗೆ ಒತ್ತಡ ಹಾಕಿರುವ ಪರಿಣಾಮ ಸುಮಲತಾ ಸ್ಪರ್ಧೆ ಮಾಡುತ್ತಿದ್ದಾರೆ ಅಷ್ಟೇ. ನಿಖಿಲ್ ಕುಮಾರಸ್ವಾಮಿ ಮತ್ತು ಅಭಿಷೇಕ್ ಆತ್ಮೀಯ ಸ್ನೇಹಿತರಾಗಿದ್ದು, ಸುಮಲತಾ ಅವರು ಮನಸು ಮಾಡಬಹುದಿತ್ತು. ಮಗನ ಸ್ನೇಹಿತನನ್ನು ಮಗನಂತೆ ಕಾಣಬಹುದಾಗಿತ್ತು. ನಿಖಿಲ್, ಅಭಿ ಬಾಂಧವ್ಯ ಎಲ್ಲಾ ನೋಡಿ ಸುಮಲತಾ ಅಂಬರೀಶ್ ನಿಖಿಲ್ ಬೆಂಬಲಿಸುತ್ತಾರೆ ಎಂದು ಆತ್ಮವಿಶ್ವಾಶ ವ್ಯಕ್ತಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv