ಬೆಂಗಳೂರು: ಲೋಕಸಭಾ ಚುನಾವಣೆಯ ಪರಿಣಾಮ ಹೆಲಿಕಾಪ್ಟರ್ ಗಳಿಗೆ ಫುಲ್ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಪ್ರಚಾರಕ್ಕಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತೆರಳಲು ರಾಜಕೀಯ ನಾಯಕರು ಕಾಪ್ಟರ್ ಬುಕ್ ಮಾಡಿಕೊಳ್ಳುತ್ತಿದ್ದಾರೆ. ಗಂಟೆಗೆ ಲಕ್ಷದ ಲೆಕ್ಕದಲ್ಲಿ ರಾಜಕೀಯ ನಾಯಕರು ಆಕಾಶದಲ್ಲಿ ಹಾರಾಡುತ್ತಿದ್ದಾರೆ.
ಎಲ್ಲಾ ಹೆಲಿಕಾಪ್ಟರ್ ಗಳು ಫುಲ್ ಬುಕ್ ಆಗಿದ್ದು, ಕಂಪನಿಗಳು ಸಹ ದರವನ್ನು ಏರಿಕೆ ಮಾಡಿಕೊಂಡಿವೆ. ಹೆಲಿಕಾಪ್ಟರ್ ಹಾಗೂ ಸಣ್ಣ ವಿಮಾನಗಳಿಗೆ ಗಂಟೆಗೆ ಬರೋಬ್ಬರಿ 75 ಸಾವಿರದಿಂದ ಮೂರುವರೆ ಲಕ್ಷ ರೂ. ಇದೆ. ಆಗಸದಲ್ಲಿ ಹಾರಡಲಿ, ಹಾರಡದೇ ಇರಲಿ ಮೂರು ಗಂಟೆಯ ಬಾಡಿಗೆ ದುಡ್ಡು ಕೊಡಲೇಬೇಕು ಎಂದು ಕಂಪನಿಗಳು ಷರತ್ತು ಹಾಕಿವೆ ಎನ್ನಲಾಗಿದೆ. ರಾತ್ರಿ ಸಂಚಾರ ಹೆಚ್ಚುವರಿ ಹಣವನ್ನು ಪಾವತಿಸಬೇಕು ಎಂದು ಕಂಪನಿಗಳು ಬಳಕೆದಾರರಿಗೆ ತಿಳಿಸಿವೆ.
Advertisement
Advertisement
ರಾಜ್ಯದಲ್ಲಿ ಹೆಲಿಕಾಪ್ಟರ್‍ಗೆ ಭರ್ಜರಿ ಡಿಮ್ಯಾಂಡ್ ಇದೆ. ಡೆಕ್ಕನ್ ಚಾರ್ಟರ್, ಏವಿಯೇಟರ್ ಇಂಡಿಯಾ ಲಿಮಿಟೆಡ್ ಸೇರಿದಂತೆ ಅನೇಕ ಖಾಸಗಿ ಸರ್ಕಾರಿ ಹೆಲಿಕಾಪ್ಟರ್ ಬಾಡಿಗೆಗೆ ಲಭ್ಯವಿದೆ. ದೇಶದೆಲ್ಲೆಡೆ ಚುನಾವಣೆಯ ಅಬ್ಬರದಿಂದಾಗಿ ಮೇ ವರೆಗೆ ಹೆಲಿಕಾಪ್ಟರ್ ಎಲ್ಲವೂ ಬುಕ್ ಆಗಿದೆ.