ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ (Lok Sabha Election) ಕನಿಷ್ಠ 7 ಕ್ಷೇತ್ರಗಳನ್ನು ಒಕ್ಕಲಿಗರಿಗೆ (Vokkaliga) ನೀಡಬೇಕೆಂಬ ಬೇಡಿಕೆ ಕಾಂಗ್ರೆಸ್‌ನಲ್ಲಿ ವ್ಯಕ್ತವಾಗಿದೆ.
ನಾನಾ ಹುದ್ದೆಗಳಿಗೆ, ಸ್ಥಾನಗಳಿಗೆ ಮತ್ತು ನಿಗಮ, ಮಂಡಳಿಗಳಿಗೆ ಆಯ್ಕೆಯಾದ, ನೇಮಕಗೊಂಡ ಒಕ್ಕಲಿಗ ಸಮುದಾಯದ ನಾಯಕರು ಮತ್ತು ಪ್ರತಿನಿಧಿಗಳನ್ನು ಬೆಂಗಳೂರು ನಗರದ ಖಾಸಗಿ ಹೋಟೆಲ್‌ನಲ್ಲಿ ಸನ್ಮಾನಿಸಲಾಯಿತು. ಈ ವೇಳೆ ಕಾಂಗ್ರೆಸ್ ಒಕ್ಕಲಿಗ ನಾಯಕರು ಲೋಕಸಭೆ ಚುನಾವಣೆ ಹಾಗೂ ರಾಜ್ಯಸಭಾ ಚುನಾವಣೆ ಸಂಬಂಧ ಸಾಕಷ್ಟು ಚರ್ಚೆ ಮಾಡಿದ್ದಾರೆ. ಇದನ್ನೂ ಓದಿ: ‘ತಿರುವನಂತಪುರಂ-ಕಾಸರಗೋಡು’ ವಂದೇ ಭಾರತ್ ಎಕ್ಸ್‌ಪ್ರೆಸ್ ಮಂಗಳೂರಿಗೂ ವಿಸ್ತರಣೆ
ನಾನಾ ಹುದ್ದೆಗಳಿಗೆ, ಸ್ಥಾನಗಳಿಗೆ ಮತ್ತು ನಿಗಮ, ಮಂಡಳಿಗಳಿಗೆ ಆಯ್ಕೆಯಾದ, ನೇಮಕಗೊಂಡ ಒಕ್ಕಲಿಗ ಸಮುದಾಯದ ನಾಯಕರು ಮತ್ತು ಪ್ರತಿನಿಧಿಗಳು ಇಂದು ನನಗೆ ಅಭಿನಂದಿಸಿ, ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳು ಮತ್ತು ಗ್ಯಾರಂಟಿಗಳನ್ನು ಒಕ್ಕಲಿಗ ಸಮುದಾಯದ ಪ್ರತಿಯೊಬ್ಬರಿಗೂ ತಲುಪಿಸುವಂತೆ ಸಮುದಾಯದ ನಾಯಕರುಗಳಿಗೆ… pic.twitter.com/D01ZNOwbKx
— Siddaramaiah (@siddaramaiah) February 21, 2024
- Advertisement3
ಹಳೆ ಮೈಸೂರು (Old Mysuru) ಭಾಗದಲ್ಲಿ 11 ಕ್ಷೇತ್ರಗಳಲ್ಲಿ ಒಕ್ಕಲಿಗರ ಪ್ರಾಬಲ್ಯವಿದೆ. ಅಷ್ಟೇ ಅಲ್ಲದೆ ಕರಾವಳಿ ಹಾಗೂ ಮಲೆನಾಡಿನ ಮೂರು ಕ್ಷೇತ್ರಗಳಲ್ಲೂ ಒಕ್ಕಲಿಗರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಕನಿಷ್ಠ 7 ರಿಂದ 9 ಕ್ಷೇತ್ರದಲ್ಲಿ ಒಕ್ಕಲಿಗರು ಟಿಕೆಟ್ ಕೇಳಿದರೆ ತಪ್ಪೇನು? ಕನಿಷ್ಠ 7 ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂದು ಶಾಸಕರು ಒತ್ತಾಯ ಮಾಡಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಯುಪಿ ಬಗ್ಗೆ ರಾಗಾ ವಿವಾದಾತ್ಮಕ ಮಾತು- ಮಗನಿಗೆ ಬುದ್ಧಿ ಹೇಳುವಂತೆ ಸೋನಿಯಾಗೆ ಸ್ಮೃತಿ ಸಲಹೆ
- Advertisement
ಒಕ್ಕಲಿಗ ಸಮುದಾಯದಿಂದ ನೂತನವಾಗಿ ಆಯ್ಕೆಯಾಗಿರುವ ನಿಗಮ ಮಂಡಳಿ ಅಧ್ಯಕ್ಷರು, ವಿಧಾನ ಪರಿಷತ್ ಸದಸ್ಯರು, ರಾಜ್ಯಸಭೆ ಅಭ್ಯರ್ಥಿಗಳಿಗೆ ಇಂದು ಖಾಸಗಿ ಹೋಟೆಲ್'ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳೊಂದಿಗೆ ಅಭಿನಂದನೆ ಸಲ್ಲಿಸಿ, ಶುಭ ಹಾರೈಸಿದೆ. pic.twitter.com/YxEhmjI120
— DK Shivakumar (@DKShivakumar) February 21, 2024
ವಿಧಾನಸಭೆ ಚುನಾವಣೆಯಲ್ಲಿ ಡಿಕೆ ಶಿವಕುಮಾರ್ (DK Shivakumar) ಸಿಎಂ ಆಗಬಹುದು ಎಂಬ ಕಾರಣಕ್ಕೆ ಸಮುದಾಯ ಕೈ ಹಿಡಿದಿತ್ತು. ಈ ಬಾರಿ ಹೆಚ್ಚಿನ ಸ್ಥಾನ ಗೆಲುವುದು ಹೇಗೆ ಎಂಬುದರ ಬಗ್ಗೆಯೂ ಗಂಭೀರ ಚರ್ಚೆ ನಡೆದಿದೆ.
ಬಿಜೆಪಿ – ಜೆಡಿಎಸ್ (BJP-JDS) ಮೈತ್ರಿ ಆಗಿದ್ದರೂ ಒಕ್ಕಲಿಗ ಸಮುದಾಯ ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಕೈ ಬಿಟ್ಟಂತೆ ಕಾಣುತ್ತಿಲ್ಲ. ರಾಜ್ಯ ಮಟ್ಟದಲ್ಲಿ ಮುಂದಿರುವ ದೊಡ್ಡ ಅವಕಾಶವನ್ನು ಸಮುದಾಯದ ಗಮನಕ್ಕೆ ತಂದು ಮನವೊಲಿಸಲು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಪರೋಕ್ಷವಾಗಿ ಎರೆಡೂವರೆ ವರ್ಷದ ನಂತರ ಡಿಕೆಶಿ ಸಿಎಂ ಆಗೇ ಆಗುತ್ತಾರೆ ಎಂಬ ಕಾರ್ಡ್ ಪ್ಲೇ ಮಾಡುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.