ಕನಿಷ್ಠ 200 ಸ್ಥಾನಗಳನ್ನು ಗೆಲ್ಲಿ – ಬಿಜೆಪಿಗೆ ಮಮತಾ ಸವಾಲು

Public TV
1 Min Read
MAMATA BANERJEE 2

ಕೋಲ್ಕತ್ತಾ: ಲೋಕಸಭಾ ಚುನಾವಣೆಯಲ್ಲಿ (Lok Sabha Election) ಕನಿಷ್ಠ 200 ಸ್ಥಾನಗಳನ್ನು ಗೆಲ್ಲಿ ಎಂದು ಮಮತಾ ಬ್ಯಾನರ್ಜಿ (Mamata Banerjee) ಬಿಜೆಪಿಗೆ (BJP) ಸವಾಲು ಎಸೆದಿದ್ದಾರೆ.

ಮಮತಾ ಬ್ಯಾನರ್ಜಿ ಇಂದು ಕೃಷ್ಣನಗರ ಲೋಕಸಭಾ ಕ್ಷೇತ್ರದಲ್ಲಿ ಸಂಸದೆ ಮಹುವಾ ಮೊಯಿತ್ರಾ (Mahua Moitra) ಪರ ಪ್ರಚಾರ ಮಾಡಿ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.  ಇದನ್ನೂ ಓದಿ: ಕಚ್ಚತೀವು ಪ್ರದೇಶವನ್ನು ಕಾಂಗ್ರೆಸ್‌ ಶ್ರೀಲಂಕಾಗೆ ನೀಡಿದೆ – ತಮಿಳುನಾಡಿನಲ್ಲಿ ಬಿರುಗಾಳಿ ಎಬ್ಬಿಸಿದ RTI ಉತ್ತರ

narendra modi amit shah

 

ಈ ಬಾರಿ 400 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹಾಕಿರುವ ಎನ್‌ಡಿಎ (NDA) ಒಕ್ಕೂಟಕ್ಕೆ ನಾನು ಸವಾಲು ಎಸೆಯುತ್ತೇನೆ. ಬಿಜೆಪಿಯವರು 400 ಪಾರ್ ಎಂದು ಹೇಳುತ್ತಿದ್ದಾರೆ. ನಾನು ಮೊದಲು 200 ಸೀಟುಗಳ ಮಾನದಂಡವನ್ನು ದಾಟಿ ಎಂದು ಸವಾಲು ಹಾಕುತ್ತೇನೆ. 2021 ರ ವಿಧಾನಸಭಾ ಚುನಾವಣೆಯಲ್ಲಿ ಅವರು 200 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹೇಳಿದ್ದರು. ಆದರೆ 77 ಸ್ಥಾನದಲ್ಲಿ ಮಾತ್ರ ಜಯಗಳಿಸಿದರು ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲು ತಾನು ಅನುಮತಿಸುವುದಿಲ್ಲ. ಸಿಎಎಗೆ ಅರ್ಜಿ ಸಲ್ಲಿಸುವುದರಿಂದ ಅರ್ಜಿದಾರರನ್ನು ವಿದೇಶಿಯನ್ನಾಗಿ ಪರಿವರ್ತಿಸುತ್ತದೆ. ಹೀಗಾಗಿ ಯಾರೂ ಅರ್ಜಿ ಸಲ್ಲಿಸಬಾರದು ಎಂದು ಮನವಿ ಮಾಡಿದರು.

ಪಶ್ಚಿಮ ಬಂಗಾಳದಲ್ಲಿ INDIA ಒಕ್ಕೂಟ ಇಲ್ಲ. ಸಿಪಿಎಂ ಮತ್ತು ಕಾಂಗ್ರೆಸ್‌ ಬಿಜೆಪಿ ಜೊತೆ ಕೈಜೋಡಿಸಿ ಕೆಲಸ ಮಾಡುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಅಪ್ಪ-ಮಗಳನ್ನು ದೂರ ಮಾಡಿದ ಅಪಕೀರ್ತಿ ಬೇಡ ಎಂದು ಸುಮ್ಮನಿದ್ದೇನೆ: ಡಿಕೆಶಿ

Share This Article