– ಪೊಲೀಸ್ ಭದ್ರತೆಯಲ್ಲಿ ನಡೆಯಿತು ಕಾರ್ಯಕ್ರಮ
ಬೆಂಗಳೂರು: ಆರ್‌ಎಸ್‌ಎಸ್ (RSS) ಕಾರ್ಯಕ್ರಮಕ್ಕೆ ಕಾಂಗ್ರೆಸ್ (Congress) ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ ಘಟನೆ ಬೆಂಗಳೂರಿನ ವೈಯ್ಯಾಲಿಕಾವಲ್‌ನಲ್ಲಿ ನಡೆದಿದೆ.
Advertisement
ಯುಗಾದಿ (Ugadi) ಹಬ್ಬದ ಹಿನ್ನೆಲೆ ಹಾಗೂ ಏಪ್ರಿಲ್ 1 ರಂದು ಆರ್‌ಎಸ್‌ಎಸ್ ಸಂಸ್ಥಾಪಕ ಕೇಶವ ಬಲಿರಾಮ್ ಹೆಡ್ಗೇವಾರ್ (Keshav Baliram Hedgewar) ಅವರ ಹುಟ್ಟಿದ ದಿನ ಪ್ರಯುಕ್ತ ಇಂದು ಸಂಜೆ 6 ಗಂಟೆಗೆ ವೈಯಾಲಿಕಾವಲ್ ನಲ್ಲಿ ಕ್ರಿಯಾ ಸಿದ್ಧಿ ಸತ್ವೇ ಭವತಿ ಮಹಾತಂ ನೋಪಕರಣೆ ಎನ್ನುವ ಹೆಸರಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಇದಕ್ಕೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿತ್ತು. ಇದನ್ನೂ ಓದಿ: ಪ್ರಣಾಳಿಕೆಯಲ್ಲಿ ಸಿಎಎ ಉಲ್ಲೇಖಿಸಲು ಭಯ – ಕಾಂಗ್ರೆಸ್ ವಿರುದ್ಧ ಪಿಣರಾಯಿ ಕಿಡಿ
Advertisement
Advertisement
ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಕಾಂಗ್ರೆಸ್ ಕಾರ್ಯಕರ್ತರು ಈ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದರು. ಈ ಕಾರ್ಯಕ್ರಮಕ್ಕೆ ಯಾವುದೇ ಅನುಮತಿ ಪಡೆದಿಲ್ಲ. ಚುನಾವಣಾ ನೀತಿ ಸಂಹಿತೆ (Model Code of Conduct) ಇರುವಾಗ ಈ ರೀತಿ ಸಭೆಗೆ ಅವಕಾಶ ಕೊಡಬಾರದು. ವೈಯಾಲಿಕಾವಲ್ ಮತ್ತು ಮಲ್ಲೇಶ್ವರಂ ಮೈದಾನಗಳನ್ನ ಕ್ರೀಡೆ ಬಿಟ್ಟು ಬೇರೆ ಕಾರ್ಯಕ್ರಮಗಳಿಗೆ ನೀಡುವಂತಿಲ್ಲ ಎಂಬ ಆದೇಶ ಇರುವಾಗ ಈ ಅನುಮತಿ ನೀಡಿದ್ದು ಹೇಗೆ? ಈ ಕಾರ್ಯಕ್ರಮ ಮಾಡಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದರು. ಪೊಲೀಸರ ಮಧ್ಯಪ್ರವೇಶದ ಬಳಿಕ ಕಾರ್ಯಕರ್ತರು ಸ್ಥಳದಿಂದ ತೆರಳಿದರು.
Advertisement
ಸಂಜೆ 6 ಗಂಟೆಯ ವೇಳೆಗೆ 200ಕ್ಕೂ ಹೆಚ್ಚು ಆರ್‌ಎಸ್‌ಎಸ್ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗಿಯಾದರು. ಹೆಡ್ಗೆವಾರ್ ಅವರ ಜೀವನ, ಹೋರಾಟದ ಬಗ್ಗೆ ಹಾಗೂ ಹಿಂದೂಗಳ ಒಗ್ಗಟ್ಟಿನ ವಿಚಾರ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಸಂದರ್ಭಗಳ ಬಗ್ಗೆ ಬೆಂಗಳೂರಿನ ಜಿಲ್ಲಾ ಸಂಚಾಲಕರು ಭಾಷಣ ಮಾಡಿದರು. ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅಶ್ವಥ್ ನಾರಾಯಣ್ ಭಾಗಿಯಾಗಿದರು. ಇದನ್ನೂ ಓದಿ: ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ನಟಿ ದಿವ್ಯಾ ಉರುಡುಗ