ಕಾರವಾರ: ಕಾಂಗ್ರೆಸ್ ಪಕ್ಷ (Congress) ಸೇರಿದಂತೆ ಅವರ ಹಿಂಬಾಲಕರು ನ್ಯಾಯಾಲಯಕ್ಕೆ ಹೋಗಿ ರಾಮಮಂದಿರ (Ram Mandir) ನಿರ್ಮಾಣ ಮಾಡದಂತೆ ಕುತಂತ್ರ ಮಾಡಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ವಾಗ್ದಾಳಿ ನಡೆಸಿದ್ದಾರೆ.
ಶಿರಸಿಯಲ್ಲಿ ಪಕ್ಷದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಆಯೋಧ್ಯೆಯಲ್ಲಿ ನಮ್ಮ ರಾಮಮಂದಿರ ನಿರ್ಮಾಣಕ್ಕೆ ನಮ್ಮ ಪೂರ್ವಜರು 500 ವರ್ಷ ಹೋರಾಡಬೇಕಾಯಿತು. ರಾಮಮಂದಿರ ನಿರ್ಮಾಣಕ್ಕೆ ಹಲವರು ಪ್ರಾಣತ್ಯಾಗ ಮಾಡಿದ್ದಾರೆ. ದೇಶ ಸ್ವತಂತ್ರವಾದ ತಕ್ಷಣವೇ ಈ ಕಾರ್ಯ ಮಾಡಬೇಕಾಗಿತ್ತು. ಆದರೆ ಅಂದು ಆಡಳಿತ ನಡೆಸಿದವರು ಮಾಡಲಿಲ್ಲ. ಈ ಕಾರ್ಯ ಮಾಡಲು 56 ಇಂಚಿನ ದೇಹ ಬೇಕಾಯಿತು ಎಂದು ಕಾಂಗ್ರೆಸ್ ವಿರುದ್ಧ ಕುಟುಕಿದರು. ಇದನ್ನೂಓದಿ: ಸಂಘ ಪರಿವಾರ ಎಂದಿಗೂ ಮೀಸಲಾತಿ ವಿರೋಧಿಸಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ
Advertisement
Advertisement
ರಾಮಮಂದಿರ ಸರ್ಕಾರ ಹಣದಿಂದ ನಿರ್ಮಾಣವಾಗಲಿಲ್ಲ. ನಿಮ್ಮ ದಾನ-ಧರ್ಮದಿಂದ ಈ ಮಂದಿರ ನಿರ್ಮಾಣವಾಯಿತು. ಈ ಹಿಂದೆ ಮಾಡಿದ ಎಲ್ಲಾ ಪಾಪ ಕೃತಗಳನ್ನು ಮರೆತು ರಾಮಮಂದಿರ ಉದ್ವಾಟನೆಗೆ ಕಾಂಗ್ರೆಸ್ ಪಕ್ಷದ ಸೇರಿದಂತೆ ಇತರಿಗೆ ಆಹ್ವಾನ ನೀಡಲಾಗಿತ್ತು. ಆದರೆ ಅವರು ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಬರಲಿಲ್ಲ ಎಂದು ಹೇಳಿದರು.
Advertisement
ರಾಮ ಜನ್ಮಭೂಮಿ ಬಾಬರಿ ಮಸೀದಿ ಪ್ರಕರಣದ ಪ್ರಮುಖ ದೂರುದಾರರಲ್ಲಿ ಒಬ್ಬರಾದ ಇಕ್ಬಾಲ್ ಅನ್ಸಾರಿ ಅವರನ್ನು ಉಲ್ಲೇಖಿಸಿದ ಮೋದಿ, ಅನ್ಸಾರಿ ಕುಟುಂಬ ಮೂರು ತಲೆಮಾರುಗಳಿಂದ ಹೋರಾಟ ಮಾಡುತ್ತಾ ಬಂದಿತ್ತು. ಅನ್ಸಾರಿ ಕುಟುಂಬಕ್ಕೂ ಆಹ್ವಾನ ನೀಡಲಾಗಿತ್ತು . ಅವರು ರಾಮಮಂದಿರ ಉದ್ವಾಟನೆ ದಿನ ಇಡೀ ದಿನ ಉಪಸ್ಥಿತರಿದ್ದರು. ಇಷ್ಟೇ ಅಲ್ಲದೇ ಅವರ ರಕ್ಷಣೆಗೆ ಇದ್ದ ಹಿಂದೂ ಗನ್ ಮ್ಯಾನ್‌ಗೆ ರಾಮ ಮಂದಿರ ಮೂರ್ತಿಯನ್ನು ಕೊಡುಗೆ ನೀಡಿದ್ದರು ಎಂದರು. ಇದನ್ನೂಓದಿ: ಕಾಂಗ್ರೆಸ್‌ನ ತುಷ್ಟೀಕರಣದ ರಾಜಕೀಯದಿಂದ ಆದಿವಾಸಿ ಮಹಿಳೆ ಮೇಲೆ ದೌರ್ಜನ್ಯ, ನೇಹಾ ಹತ್ಯೆ: ಮೋದಿ
Advertisement
ಹುಬ್ಬಳ್ಳಿಯ ನೇಹಾ ಪ್ರಕರಣವನ್ನು (Neha Case) ಪ್ರಸ್ತಾಪಿಸಿದ ಮೋದಿ, ಕರ್ನಾಟಕದಲ್ಲಿ ಒಂದು ಮಗಳು ಹತ್ಯೆಯಾಗಿದ್ದು ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಕಾಂಗ್ರೆಸ್ (Congress) ಮತಬ್ಯಾಂಕ್ ತುಷ್ಟೀಕರಣ ಮಾಡುತ್ತಿದೆ. 2014ರ ಮೊದಲು ಬಾಂಬ್ ಸ್ಪೋಟಗಳ (Bomb Blast) ಸುದ್ದಿಗಳು ಬರುತ್ತಿದ್ದವು. ಆದರೆ 2014ರ ನಂತರ ಈ ಪ್ರಕರಣಗಳಿಗೆ ಕಡಿವಾಣ ಹಾಕಲಾಯಿತು. ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತಿದ್ದಂತೆ ಐಟಿ ಹಬ್ ಬೆಂಗಳೂರಿನಲ್ಲಿ (Bengaluru) ಬಾಂಬ್ ಸ್ಪೋಟವಾಗಿದೆ. ಮೊದಲು ದೇಶಕ್ಕೆ ನುಗ್ಗಿ ಬಾಂಬ್ ಸ್ಫೋಟ ಮಾಡುತ್ತಿದ್ದರು. ಆದರೆ ಇಂದು ಹೊಸ ಹಿಂದೂಸ್ಥಾನ ಶತ್ರುಗಳ ಮನೆಗೆ ನುಗ್ಗಿ ಹೊಡೆಯುತ್ತಿದೆ ಎಂದು ಹೇಳಿದರು.