ಕಾರು, ನಿವೇಶನ ಹೊಂದಿಲ್ಲ – 4.99 ಕೋಟಿ ರೂ. ಆಸ್ತಿ ಘೋಷಿಸಿದ ಯದುವೀರ್‌

Public TV
1 Min Read
Yaduveer Wadiyar 1 1

ಮೈಸೂರು: ಬಿಜೆಪಿ (BJP) ಅಭ್ಯರ್ಥಿಯಾಗಿ ಮೈಸೂರು-ಕೊಡಗು (Mysuru-Kodagu) ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಯದುವೀರ್‌ ಒಡೆಯರ್‌ (Yaduveer Wadiyar ) ಒಟ್ಟು 4.99 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ.

ಯದುವೀರ್‌ ಅವರು ಒಟ್ಟು 4,99,59,303 ರೂ.ಮೌಲ್ಯದ ಚರಾಸ್ತಿಯನ್ನು ಮಾತ್ರ ಹೊಂದಿದ್ದು ಯಾವುದೇ ಸ್ತಿರಾಸ್ತಿಯನ್ನು ಹೊಂದಿಲ್ಲ.ಪತ್ನಿ ತ್ರಿಶಿಕಾ ಹೆಸರಿನಲ್ಲಿ 1,04,25,000 ರೂ. ಮೌಲ್ಯದ ಚರಾಸ್ತಿಯನ್ನು ಘೋಷಿಸಿದ್ದಾರೆ. ತ್ರಿಷಿಕಾ ಅವರು ಯಾವುದೇ ಸ್ತಿರಾಸ್ತಿಯನ್ನು ಹೊಂದಿಲ್ಲ. ಇದನ್ನೂ ಓದಿ: ಇವಿಎಂ ಫಿಕ್ಸಿಂಗ್ ಎಂದ ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

ಯದುವೀರ್‌ 1 ಲಕ್ಷ ರೂ. ನಗದು ಹೊಂದಿದ್ದರೆ ಪತ್ನಿ ಬಳಿ 75 ಸಾವಿರ ರೂ. ನಗದು ಹೊಂದಿದ್ದಾರೆ. ವಿವಿಧ ಕಂಪನಿಗಳಲ್ಲಿ 1.36 ಕೋಟಿ ರೂ. ಮೌಲ್ಯದ ಬಾಂಡ್ ಮತ್ತು ಶೇರ್‌ ಯದುವೀರ್ ಹೊಂದಿದ್ದಾರೆ.

ಯಾವುದೇ ಕೃಷಿ ಭೂಮಿ, ಯಾವ ವಾಣಿಜ್ಯ ಕಟ್ಟಡ ಹೊಂದಿಲ್ಲ. ಬ್ಯಾಂಕ್ ಗಳಲ್ಲಿ ಸಾಲ ಪಡೆದಿಲ್ಲ. ಯಾವುದೇ ರೀತಿಯ ಆದಾಯ ತೆರಿಗೆ ಹಣ ಬಾಕಿ ಉಳಿಸಿಕೊಂಡಿಲ್ಲ. ತನ್ನ ಮೇಲೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಅಫಿಡವಿಟ್‌ನಲ್ಲಿ ಯದುವೀರ್‌ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಪತ್ನಿ ಸೇರಿ ಒಟ್ಟು 60.78 ಕೋಟಿ ರೂ. ಆಸ್ತಿ ಘೋಷಿಸಿದ ಸೋಮಣ್ಣ

 

Share This Article