ರಾಮನಗರ: ಬೆಂಗಳೂರು ಗ್ರಾಮಾಂತರ (Bengaluru Rural) ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ (DK Suresh) 593 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ. ಡಿಕೆ ಸುರೇಶ್ ಅವರು ಇಂದು ರಾಮನಗರ ಡಿಸಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದರು.
2019ರ ಲೋಕಸಭಾ ಚುನಾವಣೆಯಲ್ಲಿ (Lok Sabha Election) 338 ಕೋಟಿ ರೂ. ಆಸ್ತಿ ಘೋಷಿಸಿದ್ದ ಡಿಕೆ ಸುರೇಶ್ ಅವರು ಈ ಬಾರಿ ಒಟ್ಟು 106.71 ಕೋಟಿ ರೂ. ಚರಾಸ್ತಿ, ಒಟ್ಟು 486.33 ಕೋಟಿ ರೂ. ಸ್ಥಿರಾಸ್ತಿ ಘೋಷಿಸಿದ್ದಾರೆ. ಕಳೆದ 5 ವರ್ಷಗಳಲ್ಲಿ ಡಿ.ಕೆ.ಸುರೇಶ್ ಅವರ ಆಸ್ತಿಯಲ್ಲಿ ಸುಮಾರು 259.19 (75%) ಕೋಟಿ ರೂ.ನಷ್ಟು ಏರಿಕೆ ಕಂಡಿದೆ.
Advertisement
Advertisement
ತನ್ನ ಬಳಿ ಯಾವುದೇ ಕಾರು ಇಲ್ಲ. ಒಟ್ಟು 150.06 ಕೋಟಿ ರೂ ಸಾಲವನ್ನು ಹೊಂದಿರುವುದಾಗಿ ಸುರೇಶ್ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
Advertisement
ತನ್ನ ಬಳಿ ಒಟ್ಟು 21,35,500 ರೂ. ಮೌಲ್ಯದ 1260 ಗ್ರಾಂ ಚಿನ್ನ ಮತ್ತು 2,10,000 ರೂ. ಮೌಲ್ಯದ 4886 ಗ್ರಾಂ ಬೆಳ್ಳಿ ಹೊಂದಿರುವುದಾಗಿ ಹೇಳಿದ್ದಾರೆ.ಒಟ್ಟು 32,75,50,472 ರೂ. ಮೌಲ್ಯದ ಕೃಷಿ ಭೂಮಿಯನ್ನು ಹೊಂದಿದ್ದರೆ 210,47,68,159 ರೂ. ಮೌಲ್ಯದ ಕೃಷಿಯೆತರ ಭೂಮಿಯನ್ನು ಹೊಂದಿದ್ದಾರೆ. ಒಟ್ಟು 211,91,41,888 ರೂ. ಮೌಲ್ಯದ ವಾಣಿಜ್ಯ ಕಟ್ಟಡಗಳನ್ನು ಡಿಕೆ ಸುರೇಶ್ ಹೊಂದಿದ್ದಾರೆ. ಇದನ್ನೂ ಓದಿ: ರಂಗೇರಿದ ಬೆಂಗಳೂರು ಗ್ರಾಮಾಂತರ ಕ್ಷೇತ್ರ – ಬೃಹತ್ ಮೆರವಣಿಗೆ ಮೂಲಕ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಕೆ
Advertisement
150 ಕೋಟಿ ಸಾಲ: 50.06 ಕೋಟಿ ರೂ. ಸಾಲ ಇರುವುದಾಗಿಯೂ ಡಿಕೆ ಸುರೇಶ್ ತಿಳಿಸಿದ್ದಾರೆ. 7.27 ಕೋಟಿ ರೂ. ಮೊತ್ತದ ಸಾಲಕ್ಕೆ ಸಂಬಂಧಿಸಿದಂತೆ ವಿವಾದವೂ ಜಾರಿಯಲ್ಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಆದಾಯ ಎಷ್ಟು?: 2019ರ ಮಾರ್ಚ್ ಅಂತ್ಯಕ್ಕೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ 1,12,17,630 ರೂ. 2020 ಹಣಕಾಸು ವರ್ಷದಲ್ಲಿ 3,71,38,390 ರೂ., 2021ರ ಹಣಕಾಸು ವರ್ಷದಲ್ಲಿ 32,51,35,700 ರೂ., 2022ರ ಹಣಕಾಸು ವರ್ಷದಲ್ಲಿ 2,29,82,360 ರೂ., 2023 ರ ಹಣಕಾಸು ವರ್ಷದಲ್ಲಿ 12,30,04,200 ಆದಾಯ ಬಂದಿದೆ ಎಂದು ತಿಳಿಸಿದ್ದಾರೆ.