ಕೋಲ್ಕತ್ತಾ: ತೈಮೂರ್, ಬಾಬರ್‌ನಂತಹ ರಾಜರು ನಮ್ಮ ದೇಶವನ್ನು ಆಳಯವಾಗ ಇಲ್ಲಿ ಹಿಂದೂಗಳೇ (Hindu) ಇರಲಿಲ್ಲ ಎಂದು ಟಿಎಂಸಿಯ (TMC) ಹೌರ ಕ್ಷೇತ್ರದ ಅಭ್ಯರ್ಥಿ, ಹಾಲಿ ಸಂಸದ ಪ್ರಸೂನ್ ಬ್ಯಾನರ್ಜಿ (Prasun Banerjee) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಚುನಾವಣಾ ಪ್ರಚಾರ ಭಾಷಣದಲ್ಲಿ ಮಾತನಾಡಿದ ಅವರು, ಈ ತಥಾಕಥಿತ ಹಿಂದೂಗಳು ಎಂದರೇ ಯಾರು? ಮುಸ್ಲಿಮರು 800 ವರ್ಷಗಳ ಹಿಂದೆಯೇ ಬಂದಿದ್ದರು. ಆಗ ಭಾರತದಲ್ಲಿ ಹಿಂದೂಗಳೇ ಇರಲಿಲ್ಲ. ಹಿಂದುತ್ವ ಎನ್ನುವುದು 300-400 ವರ್ಷಗಳ ಹಿಂದೆ ಉಗಮವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಹಣವಿಲ್ಲದೇ ರಾಜಕೀಯ ಪಕ್ಷ ನಡೆಸುವುದು ಸುಲಭವಲ್ಲ: ನಿತಿನ್ ಗಡ್ಕರಿ
Advertisement
Prasun Banerjee, the #TMC candidate for Howrah Lok Sabha constituency, launched a tirade, asserting, "Who are these so-called Hindus? Muslims came 800 years ago. There were no Hindus back then… They didn't exist during the reign of Taimur and Babur. The concept of Hindus only… pic.twitter.com/u1VfCwcp1d
— BJP West Bengal (@BJP4Bengal) March 23, 2024
Advertisement
ಈ ಹೇಳಿಕೆಗೆ ಬಿಜೆಪಿ ಕಿಡಿಕಾರಿದ್ದು, ಪ್ರಸೂನ್ ಬ್ಯಾನರ್ಜಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಈ ಹೇಳಿಕೆ ಭಾರತದ ಇತಿಹಾಸಕ್ಕೆ ಮಾಡಿದ ಅವಮಾನ. ಎರಡು ಕೋಮುಗಳ ಮಧ್ಯೆ ದ್ವೇಷ ಕಿಡಿ ಹಬ್ಬಿಸುವ ಈ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ಕಿಡಿಕಾರಿದೆ.
Advertisement
2013ರ ಉಪಚುನಾವಣೆಯ ಗೆಲುವಿನೊಂದಿಗೆ ಪ್ರಸೂನ್ ಬ್ಯಾನರ್ಜಿ 2014, 2019 ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದಾರೆ. 2019ರ ಚುನಾವಣೆಯಲ್ಲಿ ಬ್ಯಾನರ್ಜಿ 1,03,695 ಮತಗಳ ಅಂತರದಿಂದ ಗೆದ್ದಿದ್ದರು. ಪ್ರಸೂನ್ ಬ್ಯಾನರ್ಜಿಗೆ 5,76,711 ಮತಗಳು ಬಿದ್ದಿದ್ದರೆ ಬಿಜೆಪಿಯ ರಂತಿದೇವ್ ಅವರಿಗೆ 4,73,016 ಮತಗಳು ಬಿದ್ದಿದ್ದವು. ಇದನ್ನೂ ಓದಿ: Exclusive: ಕುಮಾರಸ್ವಾಮಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು: ಕುಕ್ಕರ್, ಸೀರೆ ಆರೋಪಕ್ಕೆ ಡಿ.ಕೆ.ಸುರೇಶ್ ಟಾಂಗ್
Advertisement