ನವದೆಹಲಿ: ಪ್ರತಿ ಚುನಾವಣೆಯ (Election) ಸಮಯದಲ್ಲಿ ಸದ್ದು ಮಾಡುವ ಇವಿಎಂ (EVM) ಬಗ್ಗೆ ಕಾಂಗ್ರೆಸ್ (Congress) ತನ್ನ ಪ್ರಣಾಳಿಕೆಯಲ್ಲಿ (Manifesto) ಪ್ರಸ್ತಾಪ ಮಾಡಿದೆ.
ಇವಿಎಂ ವ್ಯವಸ್ಥೆಗೆ ವಿರೋಧ ವ್ಯಕ್ತಪಡಿಸದ ಕಾಂಗ್ರೆಸ್ ಇವಿಎಂ ಮೂಲಕ ಮತದಾನ ಮಾಡಿದರೂ ಸ್ಲಿಪ್ ಮತದಾರನ ಕೈಗೆ ನೀಡಬೇಕೆಂದು ಹೇಳಿದೆ. ಇದನ್ನೂ ಓದಿ: 2019ರ ಲೋಕಸಭಾ ಚುನಾವಣೆ; ಹೆಚ್ಚು, ಕಡಿಮೆ ಮತಗಳ ಅಂತರದಿಂದ ಗೆದ್ದವರಿವರು
Advertisement
ಪ್ರಣಾಳಿಕೆಯಲ್ಲಿ ಏನಿದೆ?
ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರರ ನಂಬಿಕೆಯನ್ನು ಮರುಸ್ಥಾಪಿಸಲು ನಾವು ಭರವಸೆ ನೀಡುತ್ತೇವೆ. ಇವಿಎಂ ಮೂಲಕ ಮುದ್ರಣವಾದ ಪೇಪರ್ ಅನ್ನು ಮತದಾರ ಕೈಯಲ್ಲಿ ಹಿಡಿದು ಪರಿಶೀಲಿಸಿ ನಂತರ ಅದನ್ನು ಬಾಕ್ಸ್‌ಗೆ ಹಾಕುವಂತೆ ಮಾಡುತ್ತೇವೆ. ಇವಿಎಂನಲ್ಲಿ ಬಿದ್ದ ಮತಗಳಿಗೂ ಮತ್ತು ವಿವಿಪ್ಯಾಟ್ ಮೂಲಕ ಬಿದ್ದ ಬ್ಯಾಲೆಟ್ ಪೇಪರ್‌ಗೆ ತಾಳೆಯಾಗಬೇಕು. ಈ ವ್ಯವಸ್ಥೆ ಜಾರಿಯಾಗಲು ಚುನಾವಣಾ ಕಾನೂನಿಗೆ ತಿದ್ದುಪಡಿ ಮಾಡುತ್ತೇವೆ ಎಂದು ಭರವಸೆ ನೀಡಿದೆ.
Advertisement
ಮತದಾರ ಕೈಯಲ್ಲಿ ಬ್ಯಾಲೆಟ್ ಪೇಪರ್ ಪರೀಕ್ಷಿಸಲು ಅವಕಾಶ ಸಿಗುವುದರಿಂದ ಚುನಾವಣಾ ಪ್ರಕ್ರಿಯೆಯ ಮೇಲೆ ನಂಬಿಕೆ ಹೆಚ್ಚಾಗುತ್ತದೆ ಎಂದು ಕಾಂಗ್ರೆಸ್ ಹೇಳಿದೆ. ದನ್ನೂ ಓದಿ: ಮೋದಿಯನ್ನು ಅಧಿಕಾರದಿಂದ ಇಳಿಸುವುದೇ ನಮ್ಮ ಮುಂದಿನ ಗುರಿ: ಮಲ್ಲಿಕಾರ್ಜುನ ಖರ್ಗೆ
Advertisement
ಈಗ ಹೇಗಿದೆ?
ಪ್ರಸ್ತುತ ಬ್ಯಾಲೆಟ್ ಯಂತ್ರದಲ್ಲಿ ಬಟನ್ ಒತ್ತಿದ ಕೂಡಲೇ ಸಮಯದಲ್ಲಿ ವಿವಿಪ್ಯಾಟ್ ಸ್ಕ್ರೀನ್‌ನಲ್ಲಿ ಒಂದು ಸ್ಲಿಪ್ ರೆಡಿಯಾಗುತ್ತದೆ. ಆ ಸ್ಲಿಪ್‌ನಲ್ಲಿ ತಾನು ಯಾರಿಗೆ ಮತದಾನ ಮಾಡಿದ್ದೇನೆ ಎಂಬುದನ್ನು ಮತದಾರ ನೋಡಬಹುದು. 7 ಸೆಕೆಂಡ್ ಈ ಸ್ಲಿಪ್ ಸ್ಕ್ರೀನ್‌ನಲ್ಲಿ ಕಾಣುತ್ತಿರುತ್ತದೆ. 7 ಸೆಕೆಂಡ್ ಆದ ಬಳಿಕ ಆ ಸ್ಲಿಪ್ ಅಟೋಮ್ಯಾಟಿಕ್ ಆಗಿ ಕತ್ತರಿಸಿ ವಿವಿಪ್ಯಾಟ್ ಬಾಕ್ಸ್ ಒಳಗಡೆ ಬೀಳುತ್ತದೆ.
Advertisement
ಮತ ಎಣಿಕೆಯ ಸಮಯದಲ್ಲಿ ಚುನಾವಣಾ ಅಧಿಕಾರಿಗಳು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ 5 ಮತ ಎಣಿಕೆ ಕೇಂದ್ರಗಳ ವಿವಿಪ್ಯಾಟ್ ಮತ್ತು ಎವಿಎಂ ಯಂತ್ರಗಳಲ್ಲಿ ಬಿದ್ದ ಮತಗಳನ್ನು ಎಣಿಕೆ ಮಾಡಿ ತಾಳೆ ಹಾಕುತ್ತಾರೆ. ಬ್ಯಾಲೆಟ್ ಪೇಪರ್ ಚುನಾವಣೆಯಲ್ಲಿ ಅಕ್ರಮಗಳು ನಡೆಯತ್ತಿದ್ದ ಹಿನ್ನೆಲೆಯಲ್ಲಿ ಮತ್ತು ಮತ ಎಣಿಕೆ ಪ್ರಕ್ರಿಯೆ ಸುಲಭಗೊಳಿಸಲು ಭಾರತದಲ್ಲಿ ಇವಿಎಂ ಬಳಕೆ ಮಾಡಲಾಗುತ್ತದೆ. ಇದನ್ನೂ ಓದಿ:ದೇಶಾದ್ಯಂತ ಜಾತಿಗಣತಿ, ಯುವಕರಿಗೆ ಉದ್ಯೋಗದ ಜೊತೆ 1 ಲಕ್ಷ ವೇತನ – ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಬಿಡುಗಡೆ
ವಿಪಕ್ಷಗಳ ಬೇಡಿಕೆ ಏನು?
ವಿಪಕ್ಷಗಳು ವಿವಿಪ್ಯಾಟ್ ಸ್ಲಿಪ್ ಮತದಾರರ ಕೈಗೆ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದು ಸುಪ್ರೀಂನಲ್ಲಿ ಪಿಐಎಲ್ ಸಲ್ಲಿಕೆಯಾಗಿದೆ. ಈಗ ಸ್ಲಿಪ್ ಪ್ರಿಂಟ್ ಆಗಿ 7 ಸೆಕೆಂಡ್ ಸ್ಕ್ರೀನ್‌ನಲ್ಲಿ ಕಾಣುತ್ತದೆ. ಒಂದು ವೇಳೆ ಕೈಗೆ ಸ್ಲಿಪ್ ಕೊಟ್ಟರೆ ಮತದಾರ ಅದನ್ನು ಬಾಕ್ಸ್‌ಗೆ ಹಾಕದೇ ಹರಿದು ಹಾಕಿದರೆ ಬಿದ್ದ ಮತಕ್ಕೂ ವಿವಿ ಪ್ಯಾಟ್‌ನಲ್ಲಿ ಬಿದ್ದ ಸ್ಲಿಪ್ ತಾಳೆಯಾಗುವುದಿಲ್ಲ. ಈ ಕಾರಣಕ್ಕೆ ವಿಪಕ್ಷಗಳ ಬೇಡಿಕೆಯನ್ನು ಚುನಾವಣಾ ಆಯೋಗ ಇಲ್ಲಿಯವರೆಗೆ ಒಪ್ಪಿಲ್ಲ. ಸುಪ್ರೀಂ ನೀಡುವ ಆದೇಶದ ಮೇಲೆ ಈಗ ವಿಪಕ್ಷಗಳ ಬೇಡಿಕೆ ನಿಂತಿದೆ.