ತುಮಕೂರು: ಲೋಕಸಭಾ ಚುನಾವಣೆಗೆ (Lok Sabha Election) ಅಭ್ಯರ್ಥಿಗಳ ಬಿಜೆಪಿ (BJP) ಮೊದಲ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ತುಮಕೂರು (Tumakuru) ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಸೋಮಣ್ಣ (Somanna) ಮತ್ತಷ್ಟು ಸಕ್ರಿಯವಾದರೆ ಅತ್ತ ಕಾಂಗ್ರೆಸ್‌ಗೆ ಸೇರಿದರೂ ಮುದ್ದಹನುಮೇಗೌಡ (Muddahanumegowda) ಜಿಲ್ಲೆಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ.
ತುಮಕೂರು ಲೋಕಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿ ವಿ.ಸೋಮಣ್ಣ ಮತ್ತಷ್ಟು ಇನ್ನಷ್ಟು ಚಟುವಟಿಕೆ ಆರಂಭಿಸಿದ್ದು ಭಾನುವಾರ ಯಡಿಯೂರಪ್ಪ (Yediyurappa) ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಮಾತನಾಡಿದ್ದಾರೆ. ಇದನ್ನೂ ಓದಿ: ರಾಜ್ಯ ಬಿಜೆಪಿಯಿಂದ 15+ ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳ ಹೆಸರು ಫೈನಲ್
Advertisement
Advertisement
ಭೇಟಿ ವೇಳೆ ತುಮಕೂರು ಜಿಲ್ಲೆಯಲ್ಲಿರುವ ತಮ್ಮ ಬೆಂಬಲಿಗರಿಗೆ ಕರೆ ಮಾಡುವಂತೆ ಬಿಎಸ್‌ವೈ ಬಳಿ ಸೋಮಣ್ಣ ಮನವಿ ಮಾಡಿದ್ದಾರೆ. ಯಡಿಯೂರಪ್ಪರು ಗ್ರೀನ್ ಸಿಗ್ನಲ್ ತೋರಿಸಿದರೆ ಮಾತ್ರ ಕೆಲ ಬಿಜೆಪಿ ನಾಯಕರು ಸೋಮಣ್ಣ ಅವರನ್ನು ಒಪ್ಪಿಕೊಳ್ಳುತ್ತಾರೆ. ಹಾಗಾಗಿ ಸೋಮಣ್ಣ ಮೊದಲು ಬಿಎಸ್‌ವೈ ಅವರನ್ನು ಭೇಟಿ ಮಾಡಿದ್ದಾರೆ. ಭೇಟಿ ಸಂದರ್ಭದಲ್ಲಿ ಸಂಸದ ಜಿ.ಎಸ್.ಬಸವರಾಜು ಕೂಡ ಹಾಜರಿದ್ದು ಸೋಮಣ್ಣ ಅವರಿಗೆ ಟಿಕೆಟ್ ಕೊಡಬೇಕು ಎಂದು ಬಿಎಸ್‌ವೈ ಬಳಿ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: BJP Lok Sabha Candidates: ಮೊದಲ ಪಟ್ಟಿಯಲ್ಲಿ ಯಾವ ರಾಜ್ಯಕ್ಕೆ ಎಷ್ಟು ಸೀಟು?
Advertisement
ಅತ್ತ ಕಾಂಗ್ರೆಸ್‌ನಲ್ಲೂ (Congress) ಕೂಡ ಭಿನ್ನ ವಿಭಿನ್ನ ಚಟುವಟಿಕೆ ಶುರುವಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಸೇರಿದರೂ ಮಾಜಿ ಸಂಸದ ಮುದ್ದಹನುಮೇಗೌಡ ಬಹಿರಂಗವಾಗಿ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಪಕ್ಷ ಸೇರ್ಪಡೆಗೊಂಡರೂ ಟಿಕೆಟ್ ಅಧಿಕೃತವಾಗಿಲ್ಲ ಎಂಬ ಆತಂದಲ್ಲಿ ಮುದ್ದಹನುಮೇಗೌಡರಿದ್ದಾರೆ. ಇನ್ನೊಂದೆಡೆ ಸಚಿವ ಜಿ.ಪರಮೇಶ್ವರ ಆಪ್ತ ಮುರುಳೀಧರ್ ಹಾಲಪ್ಪ ತಮಗೆ ಟಿಕೆಟ್ ಸಿಗಲಿದೆ ಎಂಬ ಅಚಲ ವಿಶ್ವಾಸದಿಂದ ಪ್ರಚಾರ ಆರಂಭಿಸಿದ್ದಾರೆ. ಎಲ್ಲಾ ಸಮುದಾಯದವರನ್ನು ಸೇರಿಸಿ ಸಭೆ ಸಮಾರಂಭ ಆರಂಭಿಸಿದ್ದಾರೆ. ಆದರೆ ಮುದ್ದಹನುಮೇಗೌಡರು ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ.
Advertisement
ಈ ಕುರಿತು ಮಾತನಾಡಿದ ಮುರುಳೀಧರ್ ಹಾಲಪ್ಪ, ಮುದ್ದಹನುಮೇಗೌಡರು ಟಿಕೆಟ್ ಬೇಕು ಎಂಬ ಷರತ್ತಿನೊಂದಿಗೆ ಪಕ್ಷಕ್ಕೆ ಬಂದಿಲ್ಲ. ಯಾರೂ ಬಂದರೂ ಪಕ್ಷಕ್ಕೆ ಒಂದು ಮತವಾದರೂ ಹೆಚ್ಚಾಗುತ್ತದಲ್ವಾ? ಎಂದು ಹೇಳುವ ಮೂಲಕ ತಮಗೆ ಟಿಕೆಟ್ ಎಂದು ಸೂಚ್ಯವಾಗಿ ಹೇಳಿದ್ದಾರೆ.
ಬಿಜೆಪಿಯಲ್ಲಿ ಸ್ಥಳೀಯ ಮತ್ತು ವಲಸಿಗ ಅಸ್ತ್ರಗಳ ಸೆಣಸಾಟ ಜೋರಾದರೆ ಕಾಂಗ್ರೆಸ್‌ನಲ್ಲೂ ಅನುಕೂಲಸಿಂಧು ರಾಜಕಾರಣ ಹಾಗೂ ಪಕ್ಷ ನಿಷ್ಠ ರಾಜಕಾರಣ ನಡುವೆ ಪೈಪೋಟಿ ನಡೆಯುತ್ತಿದೆ.