ಮುಂಬೈ: ಎನ್‌ಡಿಎ ಸಖ್ಯ ತೊರೆದಿರುವ ಉದ್ಧವ್ ಠಾಕ್ರೆ (Uddhav Thackeray) ಮರಳಿ ಎನ್‌ಡಿಎ (NDA) ಸೇರುತ್ತಾರಾ ಹೀಗೊಂದು ಪ್ರಶ್ನೆ ಈಗ ಎದ್ದಿದೆ. ಅಮರಾವತಿಯ ಹಾಲಿ ಸಂಸದೆ ನವನೀತ್ ರಾಣಾ (Navneet Rana) ಅವರ ಪತಿ ಮತ್ತು ಮಹಾರಾಷ್ಟ್ರ ಶಾಸಕ ರವಿ ರಾಣಾ (Ravi Rana) ಸಿಡಿಸಿದ ಬಾಂಬ್‌ನಿಂದ ಈ ಪ್ರಶ್ನೆ ಎದ್ದಿದೆ.
ಸರ್ಕಾರ ರಚನೆಯಾದ 15-20 ದಿನದ ಒಳಗಡೆ ಉದ್ಧವ್ ಠಾಕ್ರೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಇದು ಖಚಿತ ಎಂದು ರವಿ ರಾಣಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Advertisement
ಪ್ರಧಾನಿ ಮೋದಿಯವರು ಈ ಹಿಂದೆ ಸಂದರ್ಶನದಲ್ಲಿ ಉದ್ಧವ್ ಠಾಕ್ರೆ ಅವರು ಬಾಳಾಸಾಹೇಬ್ ಠಾಕ್ರೆಯವರ ಮಗನಾಗಿರುವುದರಿಂದ ಅವರಿಗೆ ಯಾವಾಗಲೂ ಬಾಗಿಲು ತೆರೆದಿರುತ್ತದೆ ಎಂದು ಹೇಳಿದ್ದರು. ಉದ್ಧವ್ ಈ ಬಾಗಿಲನ್ನು ಬಳಸುತ್ತಾರೆ ಎ ಎಂಬ ವಿಶ್ವಾಸವಿದೆ ಎಂದು ರವಿ ರಾಣಾ ತಿಳಿಸಿದರು. ಇದನ್ನೂ ಓದಿ: ಸೆನ್ಸೆಕ್ಸ್, ನಿಫ್ಟಿ ಸಾರ್ವಕಾಲಿಕ ದಾಖಲೆ – Zerodha, CDSL ಸರ್ವರ್ ಡೌನ್, ಹೂಡಿಕೆದಾರರ ಆಕ್ರೋಶ
Advertisement
Advertisement
ಮಹಾರಾಷ್ಟ್ರದ ನಂದೂರ್‌ಬಾರ್‌ನಲ್ಲಿ ನಡೆದ ಬಿಜೆಪಿ ಸಮಾವೇಶದದಲ್ಲಿ ಶರದ್ ಪವಾರ್ ಮತ್ತು ಉದ್ಧವ್ ಠಾಕ್ರೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದ ಮೋದಿ, ಕಾಂಗ್ರೆಸ್‌ನಲ್ಲಿ ಸಾಯುವ ಬದಲು ನಿಮ್ಮ ಕನಸುಗಳನ್ನು ಗೌರವಯುತವಾಗಿ ನನಸಾಗಿಸಲು ನಮ್ಮ ಅಜಿತ್ ದಾದಾ (ಪವಾರ್) ಮತ್ತು ಶಿಂಧೆ ಜಿ ಅವರೊಂದಿಗೆ ಸೇರಿಕೊಳ್ಳಿ ಎಂದು ಸಲಹೆ ನೀಡಿದ್ದರು.
Advertisement
ಅಮರಾವತಿಯ ಹಾಲಿ ಸಂಸದ ರವಿ ರಾಣಾ ಅವರ ಪತ್ನಿ ನವನೀತ್ ರಾಣಾ ಅವರು ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಟಿಕೆಟ್‌ನಲ್ಲಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. 2019 ರಲ್ಲಿ ನವನೀತ್ ರಾಣಾ ಅವರು ಅಮರಾವತಿಯಿಂದ ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು.
ಅತಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಹೊಂದಿರುವ ಎರಡನೇ ರಾಜ್ಯ ಮಹಾರಾಷ್ಟ್ರ ಆಗಿದ್ದು ಒಟ್ಟು 48 ಕ್ಷೇತ್ರಗಳನ್ನು ಹೊಂದಿದೆ. ಮಹಾರಾಷ್ಟ್ರದಲ್ಲಿ, ಬಿಜೆಪಿ, ಏಕನಾಥ್ ಶಿಂಧೆ ಅವರ ಶಿವಸೇನೆ ಮತ್ತು ಅಜಿತ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷವು ಮಹಾಯುತಿ ಮೈತ್ರಿ ಮಾಡಿಕೊಂಡಿದೆ. ಇನ್ನೊಂದು ಕಡೆ ಕಾಂಗ್ರೆಸ್, ಉದ್ಧವ್ ಠಾಕ್ರೆ ಅವರ ಶಿವಸೇನೆ ಮತ್ತು ಶರದ್ ಪವಾರ್ ಅವರ ಎನ್‌ಸಿಪಿ ಮಹಾ ವಿಕಾಸ್ ಅಘಾಡಿ ಮೈತ್ರಿಯ ಅಡಿಯಲ್ಲಿ ಚುನಾವಣೆ ಎದುರಿಸಿದ್ದವು.