ಬೆಂಗಳೂರು: ಕರ್ನಾಟಕದಲ್ಲಿ (Karnatatka) ಒಟ್ಟು 2 ಹಂತದಲ್ಲಿ ಲೋಕಸಭಾ ಚುನಾವಣೆ (Lok Sabha Election) ನಡೆಯಲಿದ್ದು ರಾಜ್ಯದಲ್ಲಿ ಒಟ್ಟು 5.42 ಕೋಟಿ ಮತದಾರರಿದ್ದಾರೆ.
ಪುರುಷ ಮತದಾರರ ಸಂಖ್ಯೆ 2,71,21,407 ಇದ್ದರೆ ಮಹಿಳಾ ಮತದಾರರ ಸಂಖ್ಯೆ 2,70,81,748 ಇದೆ. 4,933 ತೃತೀಯ ಲಿಂಗಿಗಳು ಸೇರಿ ಒಟ್ಟು 5,42,08,088 ಮತದಾರರು ರಾಜ್ಯದಲ್ಲಿ ಇದ್ದಾರೆ. ಇದನ್ನೂ ಓದಿ: Lok Sabha Election 2024: ಯಾವ ರಾಜ್ಯಗಳಿಗೆ ಎಷ್ಟು ಹಂತಗಳಲ್ಲಿ ಮತದಾನ?
Advertisement
Advertisement
ಈ ಪೈಕಿ ಅತಿ ಹೆಚ್ಚು ಬೆಂಗಳೂರು ಉತ್ತರ (Bengaluru North) ಕ್ಷೇತ್ರದಲ್ಲಿ 31,74,098 ಮಂದಿ ಇದ್ದರೆ, ಅತಿ ಕಡಿಮೆ ಉಡುಪಿ-ಚಿಕ್ಕಮಗಳೂರಿನಲ್ಲಿ(Udupi-Chikkamgaluru) 15,72,958 ಮಂದಿ ಇದ್ದಾರೆ.
Advertisement
ಬೆಂಗಳೂರು ಗ್ರಾಮಾಂತರದಲ್ಲಿ 27,63,910, ಬೆಂಗಳೂರು ಕೇಂದ್ರ 23,98,910, ಬೆಂಗಳೂರು ದಕ್ಷಿಣದಲ್ಲಿ 23,17,472 ಮಂದಿ ಮತದಾರರಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಕಾಂಗ್ರೆಸ್ ಸರ್ಕಾರದಲ್ಲಿ ದುಡ್ಡಿಲ್ಲ, ಯೋಜನೆ ಹಣ ಕಡಿತವಾಗಿದೆ: ಮೋದಿ
Advertisement
ರಾಜ್ಯದಲ್ಲಿ ಏಪ್ರಿಲ್ 26 ರಂದು 14 ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ನಡೆಯಲಿದ್ದರೆ ಮೇ 7 ರಂದು 14 ಕ್ಷೇತ್ರಗಳಿಗೆ ಎರಡನೇ ಹಂತದ ಚುನಾವಣೆ ನಡೆಯಲಿದೆ. ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.