ಪುಣೆ: ಗಡಿಯಾಚೆಯಿಂದ ನಡೆಯುವ ಯಾವುದೇ ಭಯೋತ್ಪಾದನಾ (Terrorism) ಕೃತ್ಯಕ್ಕೆ ಪ್ರತ್ಯುತ್ತರ ನೀಡಲು ಭಾರತ (India) ಬದ್ಧವಾಗಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ (S Jaishankar) ಹೇಳಿದ್ದಾರೆ.
ಪುಣೆಯಲ್ಲಿ ಯುವಕರನ್ನು ಉದ್ದೇಶಿಸಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉಗ್ರರಿಗೆ (Terrorist) ಯಾವುದೇ ನಿಯಮಗಳಿಲ್ಲ. ಹೀಗಾಗಿ ಅವರಿಗೆ ನೀಡುವ ಉತ್ತರಕ್ಕೂ ಯಾವುದೇ ನಿಯಮ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ನಮ್ಮ ಬಲಿಷ್ಠ ಸರ್ಕಾರದ ಅವಧಿಯಲ್ಲಿ ಉಗ್ರರು ಅವರ ನೆಲದಲ್ಲೇ ಹತ್ಯೆಯಾಗುತ್ತಿದ್ದಾರೆ: ಮೋದಿ
Advertisement
Terrorists don't play by any rules, the answer to terrorists cannot have any rules. They should not feel safe if they are on the other side, says EAM Jaishankar on terrorism from Pakistan pic.twitter.com/hZ0IWY6k1v
— Sidhant Sibal (@sidhant) April 12, 2024
Advertisement
2008 ರಲ್ಲಿ ಮುಂಬೈ (Mumbai Attack) ಮೇಲೆ ದಾಳಿ ನಡೆಯಿತು. ಈ ದಾಳಿಯ ನಂತರ ಪಾಕಿಸ್ತಾನದ ಮೇಲೆ ದಾಳಿ ಮಾಡಬೇಕಾ ಬೇಡವೇ ಎಂಬುದರ ಬಗ್ಗೆ ಸರ್ಕಾರಿ ಮಟ್ಟದಲ್ಲಿ ಸಾಕಷ್ಟು ಚರ್ಚೆ ನಡೆಯಿತು. ಕೊನೆಗೆ ಪಾಕಿಸ್ತಾನದ ಮೇಲೆ ದಾಳಿ ಮಾಡದೇ ಇರುವುದಕ್ಕಿಂತ ಮೇಲೆ ದಾಳಿ ಮಾಡುವ ವೆಚ್ಚ ಹೆಚ್ಚು ಎಂದು ಆ ಸಮಯದಲ್ಲಿ ತೀರ್ಮಾನಕ್ಕೆ ಬರಲಾಯಿತು ಎಂದರು.
Advertisement
ಈಗ ಇದೇ ರೀತಿಯ ದಾಳಿ ನಡೆದರೆ ಮತ್ತು ಅದಕ್ಕೆ ಪ್ರತಿಕ್ರಿಯಿಸದಿದ್ದರೆ ಮುಂದಿನ ದಾಳಿಗಳನ್ನು ತಡೆಯುವುದು ಹೇಗೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: LokSabha Election- ಲೋಕ ಅಖಾಡಲ್ಲಿ ಬಿಜೆಪಿಯ ಸಿನಿ ತಾರೆಯರು
Advertisement
ನರೇಂದ್ರ ಮೋದಿ (Narendra Modi) ಅವರು 2014 ರಲ್ಲಿ ಪ್ರಧಾನಿಯಾಗಿ ಬಂದರು. ಈ ಸಮಸ್ಯೆ 2014ರಿಂದ ಆರಂಭವಾಗಿಲ್ಲ.ಇದು 1947 ರಿಂದ ಆರಂಭವಾಗಿದೆ. ಮೊದಲು ಪಾಕಿಸ್ತಾನದಿಂದ ಬಂದು ಕಾಶ್ಮೀರದ ಮೇಲೆ ದಾಳಿ ಮಾಡಿದರು. ಇದು ಭಯೋತ್ಪಾದನೆ. ಪಟ್ಟಣಗಳಿಗೆ ಬೆಂಕಿ ಹಚ್ಚಿ ಜರನ್ನು ಕೊಲ್ಲುತ್ತಿದ್ದರು. ಉಗ್ರರಲ್ಲಿ ಮೊದಲು ನೀವು ಹೋಗಿ ನಂತರ ನಾವು ಬರುತ್ತೇವೆ ಎಂದು ಪಾಕ್ ಸೇನೆ ಹೇಳಿತ್ತು ಎಂಬುದಾಗಿ ತಿಳಿಸಿದರು.