– ಕರ್ನಾಟಕದಲ್ಲಿ ಮೇಕೆದಾಟು ಯೋಜನೆಗೆ ಪಾದಯಾತ್ರೆ ನಡೆಸಿದ್ದ ಕಾಂಗ್ರೆಸ್
ಚೆನ್ನೈ: ಲೋಕಸಭಾ ಚುನಾವಣೆಯಲ್ಲಿ (Lok Sabha Election) INDIA ಒಕ್ಕೂಟ ಗೆದ್ದರೆ ಮೇಕೆದಾಟು ಯೋಜನೆಗೆ (Mekedatu Project) ತಡೆ ಒಡ್ಡುವುದಾಗಿ ಡಿಎಂಕೆ ಘೋಷಣೆ ಮಾಡಿದೆ.
Advertisement
ಲೋಕಸಭಾ ಚುನಾವಣೆಗೆ ತಮಿಳುನಾಡಿನಲ್ಲಿ (Tamil Nadu) ಆಡಳಿತ ನಡೆಸುತ್ತಿರುವ ಸ್ಟಾಲಿನ್ (CM Stalin) ನೇತೃತ್ವದ ಡಿಎಂಕೆ ಪಕ್ಷ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಪ್ರಣಾಳಿಕೆಯಲ್ಲಿ ಕಾವೇರಿ ನದಿಗೆ (Cauvery Water) ಅಡ್ಡಲಾಗಿ ಕರ್ನಾಟಕ ನಿರ್ಮಿಸಲು ಉದ್ದೇಶಿಸಿರುವ ಮೇಕೆದಾಟು ಅಣೆಕಟ್ಟೆ ಯೋಜನೆ ನಿರ್ಮಾಣಕ್ಕೆ ತಡೆ ಒಡ್ಡುವುದಾಗಿ ಹೇಳಿದೆ.
Advertisement
Advertisement
INDIA ಒಕ್ಕೂಟದಲ್ಲಿ ಕಾಂಗ್ರೆಸ್ (Congress) ಪ್ರಧಾನ ಪಕ್ಷವಾಗಿದ್ದು ಕರ್ನಾಟಕದಲ್ಲಿ (Karnataka) ಕಾಂಗ್ರೆಸ್ ಸರ್ಕಾರವೇ ಅಧಿಕಾರ ನಡೆಸುತ್ತಿದೆ. ಕರ್ನಾಟಕ ವಿಧಾನಸಭಾ ಚುನಾವಣೆಗೆ ಮೊದಲು ಡಿಕೆ ಶಿವಕುಮಾರ್ (DK Shivakumar) ನೇತೃತ್ವದಲ್ಲಿ ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಸಹ ನಡೆಸಿತ್ತು. ಈಗ ಮೈತ್ರಿ ಭಾಗವಾಗಿರುವ ಡಿಎಂಕೆ ಈ ವಿಚಾರವನ್ನೇ ಪ್ರಣಾಳಿಕೆಯಲ್ಲಿ ಸೇರಿಸಿದ್ದು ಬಿರುಗಾಳಿ ಎಬ್ಬಿಸುವ ಸಾಧ್ಯತೆಯಿದೆ. ಇದನ್ನೂ ಓದಿ: ಸದ್ಗುರು ಜಗ್ಗಿ ವಾಸುದೇವ್‌ಗೆ ಮೆದುಳಿನ ಶಸ್ತ್ರಚಿಕಿತ್ಸೆ!
Advertisement
ಪ್ರಣಾಳಿಕೆಯಲ್ಲಿ ಏನಿದೆ?
ರಾಜ್ಯಗಳಿಗೆ ಫೆಡರಲ್ ಹಕ್ಕುಗಳನ್ನು ಒದಗಿಸಲು ಭಾರತೀಯ ಸಂವಿಧಾನವನ್ನು ಬದಲಾವಣೆ, ಚೆನ್ನೈನಲ್ಲಿರುವ ಸುಪ್ರೀಂ ಕೋರ್ಟ್ ಪೀಠ ಸ್ಥಾಪನೆ, ಪುದುಚೇರಿಗೆ ರಾಜ್ಯ ಸ್ಥಾನಮಾನ, ರಾಷ್ಟ್ರೀಯ ಶಿಕ್ಷಣ ನೀತಿ (NEP) ಹಿಂಪಡೆಯಲಾಗುವುದು, ಮಹಿಳೆಯರಿಗೆ 33% ಮೀಸಲಾತಿ ಜಾರಿ, ಸರ್ಕಾರಿ ಶಾಲೆಗಳಿಗೆ ಬೆಳಗಿನ ಉಪಾಹಾರ ಯೋಜನೆ, NEET ನಿಷೇಧ, ಭಾರತದಾದ್ಯಂತ ಮಹಿಳೆಯರಿಗೆ ಪ್ರತಿ ತಿಂಗಳು 1,000 ರೂ. ನೀಡಲಾಗುತ್ತದೆ.
ಹೆದ್ದಾರಿಗಳಲ್ಲಿರುವ ಟೋಲ್ ಗೇಟ್ ರದ್ದು, ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು (ಸಿಎಎ) ತೆಗೆದುಹಾಕಲಾಗುತ್ತದೆ. ರಾಜ್ಯಪಾಲರಿಗೆ ಅಧಿಕಾರ ನೀಡುವ 361ನೇ ವಿಧಿಯನ್ನು ರದ್ದು, ರಾಜ್ಯಪಾಲರನ್ನು ನೇಮಿಸುವ ಅಧಿಕಾರವನ್ನು ಮುಖ್ಯಮಂತ್ರಿಗೆ ನೀಡುವುದು.